ಚಿತ್ರರಂಗದಲ್ಲಿ ಟಾಪ್ ಸ್ಥಾನ ಗಿಟ್ಟಿಸಿಕೊಳ್ಳಬೇಕಂದ್ರೆ ಹೆಸರು ಬದಲಾಯಿಸಿಕೊಳ್ಳಬೇಕು ಎಂಬುವುದು ನಟ-ನಟಿಯರಲ್ಲಿ ಇರುವ ನಂಬಿಕೆ. 'ಸಾಹೇಬ' ಚಿತ್ರದ ಮೂಲಕ ಸಿನಿ ಜರ್ನಿ ಶುರುಮಾಡಿದ ಮನೋರಂಜನ್‌ ಪ್ರೇಕ್ಷಕರ ಗಮನ ಸೆಳೆದಿದ್ದರು. 

ಕನಸುಗಾರನ ಹೊಸ ಕನಸು; 'ಪ್ರೇಮಲೋಕ-2' ಶೀಘ್ರದಲ್ಲಿ?

 

ರೊಮ್ಯಾನ್ಸ್, ಕ್ರಿಯೆಟಿವಿಟಿ ಹಾಗೂ ಡೈರೆಕ್ಷನ್‌ನಲ್ಲಿ ವಿಭಿನ್ನ ಶೈಲಿಗೆ ಹೆಸರು ಮಾಡಿರುವ ರವಿಚಂದ್ರನ್ .ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ನಟ. ತನ್ನ ಇಬ್ಬರು ಮಕ್ಕಳನ್ನು ಚಿತ್ರರಂಗಕ್ಕೆ ಕರೆತರಲು ಕ್ರಿಯೇಟಿವ್ ಕಾನ್ಪೆಪ್ಟ್ ಇರುವ ಚಿತ್ರಗಳ ಮೂಲಕ ಜನರ ಮುಂದಿಡುತ್ತಿದ್ದಾರೆ.

 

ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾಯಿಸಿಕೊಂಡಿದ್ದಾರೆ. ಮೊದಲೆರಡು ಚಿತ್ರಗಳಲ್ಲಿ ಮನೋರಂಜನ್ ಎಂದು ಹೆಸರಿದ್ದು ಮೂರನೇ ಚಿತ್ರಕ್ಕೆ 'ಮನು ರಂಜನ್' ಎಂದು ಬದಲಾಯಿಸಿಕೊಂಡಿರುವುದು ಗಾಂಧೀನಗರದಲ್ಲಿ ಸದ್ದು ಮಾಡಿ ಸುದ್ದಿಯಾಗುತ್ತಿದೆ.

ಕ್ರೇಜಿಸ್ಟಾರ್ ಪತ್ನಿಗೆ ಹುಟ್ಟುಹಬ್ಬದ ಸಂಭ್ರಮ; ಮಗನಿಂದ ಸ್ಪೆಶಲ್ ವಿಶ್!

 

ಕೆಲ ಮೂಲಗಳ ಪ್ರಕಾರ ರವಿಚಂದ್ರನ್ ಪುತ್ರ ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ ಈ ಕಾರಣಕ್ಕೆ ಮನೋ ಬದಲು 'ಮನು' ಎಂದು ಮಾಡಿಕೊಂಡಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೆಸರು ಬದಲಾಯಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ 'ರಂಗಿತರಂಗ' ಚಿತ್ರದ ನಟಿ ರಾಧಿಕಾ ಚೇತನ್‌ ತಮ್ಮ ಹೆಸರನ್ನು ರಾಧಿಕಾ ನಾರಾಯಣ ಎಂದು ಬದಲಾಯಿಸಿಕೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್ ಮೊದಲ ಹೆಸರು ನವೀನ್ ಕುಮಾರ್. ರಚಿತಾ ರಾಮ್ ಮೊದಲ ಹೆಸರು ಬಿಂದ್ಯಾ ರಾಮ್. ಮೋಹಕ ತಾರೆ ರಮ್ಯಾ ಹೆಸರು ದಿವ್ಯ ಸ್ಪಂದನ. ಹೀಗೆ ಹೆಸರು ಬದಲಾಯಿಸಿಕೊಂಡ ನಟ- ನಟಿಯರು ಚಿತ್ರರಂಗದಲ್ಲಿ ಶ್ಯಾನೆ ಟಾಪಾಗವ್ರೇ!

‘ಪ್ರಾರಂಭ’ದಲ್ಲೇ ಲಿಪ್ ಲಾಕ್; ಸಿಕ್ಕಿಬಿದ್ದ ಖ್ಯಾತ ನಟನ ಪುತ್ರ!