ಸ್ಯಾಂಡಲ್‌ವುಡ್ ಚಾರ್ಮಿಂಗ್ ಬಾಯ್, ರೈಸಿಂಗ್ ಮ್ಯಾನ್ ಮನೋರಂಜನ್ ರವಿಚಂದ್ರನ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. 'ಸಾಹೇಬ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮನೋರಂಜನ್ ಸದ್ಯಕ್ಕೆ 'ಪ್ರಾರಂಭ' ಹಾಗೂ 'ಬೃಹಸ್ಪತಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

‘ಪ್ರಾರಂಭ’ದಲ್ಲೇ ಲಿಪ್ ಲಾಕ್; ಸಿಕ್ಕಿಬಿದ್ದ ಖ್ಯಾತ ನಟನ ಪುತ್ರ!

ಕ್ರೇಜಿ ಸ್ಟಾರ್ ರವಿಚಂದ್ರನ್ ಪತ್ನಿ ಸುಮತಿ ಅಕ್ಟೋಬರ್ 28 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಪುತ್ರ ಮನೋರಂಜನ್ ತಾಯಿಯೊಂದಿಗೆ ಫೋಟೋ ಅಪ್ಲೋಡ್ ಮಾಡಿ ಶುಭಾಶಯ ಹೇಳಿದ್ದಾರೆ. 'ಸ್ವಾರ್ಥತೆಯೇ ಇಲ್ಲದ ವ್ಯಕ್ತಿ ನನ್ನ ತಾಯಿಗೆ ಹುಟ್ಟು ಹಬ್ಬದ ಶುಭಾಶಯಗಳು. ನನ್ನ ನೋವಲ್ಲಿ ಅಳುತ್ತಾ ನಾನು ಖುಷಿಯಾಗಿದ್ದಾಗ ನಗುತ್ತಾ ಇರುತ್ತಾರೆ ನನ್ನ ತಾಯಿ. ನನ್ನ ಶಕ್ತಿ ಹಾಗೂ ದೌರ್ಬಲ್ಯ ನನ್ನ ತಾಯಿ. ಆಕೆಯ ಖುಷಿ ನಮ್ಮೆಲ್ಲರ ಖುಷಿ. ಲವ್ ಯೂ ಮಾಮ್' ಎಂದು ಬರೆದುಕೊಂಡಿದ್ದಾರೆ.

 

ರೊಮ್ಯಾಂಟಿಕ್ ಮ್ಯಾನ್ ಎಂದೇ ಖ್ಯಾತಿ ಪಡೆದುಕೊಂಡಿರುವ ರವಿಚಂದ್ರನ್ ಪುತ್ರ ಮನೋರಂಜನ್ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಹು ದಿನಗಳ ಕನಸು ಎಂದು ದುಬಾರಿ ಬೈಕ್‌ ಖರೀದಿಸಿದ್ದರು.

ದುಬಾರಿ ಬೈಕ್‌ಗೆ ಒಡೆಯನಾದ ಕ್ರೇಜಿಸ್ಟಾರ್ ಪುತ್ರ !