ನಟ ಚೇತನ್ ಅಹಿಂಸ ಪರ ನಿಂತ ಕಿರಣ್ ಶ್ರೀನಿವಾಸ್; 'ವಿರೋಧವಿದ್ದರೂ ಚರ್ಚಿಸೋಣ'!
ನಟ ಚೇತನ್ ಬ್ರಾಹ್ಮಣರ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ವಿರೋಧ ವ್ಯಕ್ತವಾಗಿದೆ. ನಟ ಕಿರಣ್ ಶ್ರೀನಿವಾಸ್ ಚೇತನ್‌ಗೆ ಈ ವಿಷಯದಲ್ಲಿ ಬೆಂಬಲ ನೀಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಿದ ನಟ ಚೇತನ್, ಅಹಿಂಸ ಜಾತಿ ವಿಷಯವಾಗಿ ಹೇಳಿದ ಮಾತು ರಾಜಕೀಯ ಹಾಗೂ ಜಾತಿಯ ಚರ್ಚೆಯಾಗಿ ತಿರುವು ಪಡೆದುಕೊಂಡಿದೆ. ಈ ವಿಚಾರವಾಗಿ ಚೇತನ್ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕೂಡ ಹಾಜರಾಗುತ್ತಿದ್ದಾರೆ. ಇದೀಗ ಚೇತನ್ ಬೆಂಬಲಕ್ಕೆ ಕಿರಣ್ ಶ್ರೀನಿವಾಸ್ ನಿಂತಿದ್ದಾರೆ.
'ಜಾತಿ ಅಸ್ಪೃಶ್ಯತೆ ಬಗ್ಗೆ ಮಾತನಾಡಿದ್ದರೆ, ಅದನ್ನು ನಿವಾರಿಸಲು ಸಾಧ್ಯವಿಲ್ಲ. ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಅದನ್ನು ಬಗೆಹರಿಸಿ ಕೊಳ್ಳಬೇಕು,' ಎಂದು ಕಿರಣ್ ಹೇಳಿರುವುದರ ಬಗ್ಗೆ ವೆಬ್‌ಸೈಟ್ ಒಂದು ಸುದ್ದಿ ಮಾಡಿದೆ.
'ತಾರತಮ್ಯದ ವಿರುದ್ಧ ಹೋರಾಟ ನಿರಂತರ, ಹಿಂದೆ ಸರಿಯುವ ಮಾತೇ ಇಲ್ಲ'
'ಸಂವಿಧಾನ ಮತ್ತು ಸರಕಾರದ ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದು ಚೇತನ್ ಹೇಳಿದ್ದಾರೆ. ನನ್ನ ವಿಚಾರಧಾರೆ, ಅನಿಸಿಕೆ, ಅಭಿಪ್ರಾಯ ಹಾಗೂ ಜಾತಿ ವ್ಯವಸ್ಥೆ ಮತ್ತು ಅದರಿಂದ ಆಗುವ ಶೋಷಣೆ ವಿರುದ್ಧ ನನ್ನ ಮಾತುಗಳನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ನನ್ನ ಹೋರಾಟ ಮುಂದುವರೆಸುತ್ತೇನೆ, ಎಂದು ಚೇತನ್ ಹೇಳಿದಾರೆ. ನನ್ನ ಬೆಂಬಲ ಅವರಿಗೆ ಇದೆ. ಅವರು ನನ್ನ ಆತ್ಮೀಯ ಗೆಳೆಯ. ಚೇತನ್‌ಗೆ ಎಲ್ಲರೂ ಬೆಂಬಲಿಸೋಣ, ಬೆಂಬಲಿಸದೇ ಇದ್ದರೂ ಪರ್ವಾಗಿಲ್ಲ. ಚೇತನ್ ಅಭಿಪ್ರಾಯಕ್ಕೆ ವಿರೋಧವಿದ್ದರೂ, ಸಹ ಚರ್ಚೆ ಮೂಲಕ ನಿಲುವಿಗೆ ಬರೋಣ. ಶಾಂತಿಯುತವಾಗಿ ಸಮಸ್ಯೆಗಳನನ್ನು ಬಗೆಹರಿಸಿಕೊಳ್ಳೋಣ. ಜಾತಿ ವ್ಯವಸ್ಥೆಯಿಂದಾಗುತ್ತಿರುವ ಶೋಷಣೆ ಬಗ್ಗೆ ರಾಜ್ಯದಲ್ಲಿ ಚರ್ಚೆ ಅರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ವಿರೋಧಿಸುವವರೂ ಇದ್ದಾರೆ. ಅದಕ್ಕೆ ಅವರ ವಾದಗಳನ್ನು ತಾಳ್ಮೆಯಿಂದ ಆಲಿಸಬೇಕಿದೆ,' ಎಂದು ಕಿರಣ್ ಶ್ರೀನಿವಾಸ್ ಹೇಳಿದ್ದಾರೆ.