'ತಾರತಮ್ಯದ ವಿರುದ್ಧ ಹೋರಾಟ ನಿರಂತರ, ಹಿಂದೆ ಸರಿಯುವ ಮಾತೇ ಇಲ್ಲ'
* ನಟ ಚೇತನ್ ರಿಂದ ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ.
* ಬಸವನಗುಡಿ ಪೊಲೀಸರಿಂದ ಮುಂದುವರಿದ ವಿಚಾರಣೆ..
* ಜಯನಗರ ಎಸಿಪಿ ಶ್ರೀನಿವಾಸ್ ರಿಂದ ವಿಚಾರಣೆ
* ಸಂಪೂರ್ಣ ಹೇಳಿಕೆ ವಿಡಿಯೋ ರೆಕಾರ್ಡ್ ಮಾಡಿಕೊಂಡ ಪೊಲೀಸರು
ಬೆಂಗಳೂರು(ಜೂ. 16) ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ಬಗ್ಗೆ ವಿವಾದಕಾರಿ ಹೇಳಿಕೆ ನೀಡಿದ್ದ ಆರೋಪ ಎದುರಿಸುತ್ತಿರುವ ನಟ ಚೇತನ್ ಅಹಿಂಸಾ ಬಸವನಗುಡಿ ಪೊಲೀಸರ ಪ್ರಶ್ನೆಗೆ ಉತ್ತರಿಸಿ ಹೊರಗೆ ಬಂದಿದ್ದಾರೆ.
ಕಾನೂನಿನ ಮೇಲೆ ಅಪಾರ ನಂಬಿಕೆ ಇದೆ. ಜಾತಿ, ಜನಾಂಗದ ವಿರುದ್ಧ ಹೋರಾಟ ಮಾಡ್ತಿಲ್ಲ. ಕೆಲವರು ಹುಟ್ಟಿದ ತಕ್ಷಣ ಶ್ರೇಷ್ಠ.. ಕೆಲವರು ಕೀಳು ಅಂಥ ಮಾಡಬಾರದು. ತಾರತಮ್ಯ ವಿರುದ್ಧ ಹೋರಾಟ ಮಾಡ್ತೀವಿ. ಈ ಹೋರಾಟವನ್ನ ಮುಂದುವರಿಸುತ್ತೇವೆ. ನಮಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೆಯಿದೆ ಎಂದರು.
ನಟನ ವಿರುದ್ಧ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ದೂರು
ವಿಚಾರಣೆಗೆ ಅಗತ್ಯವಿದ್ದಲ್ಲಿ ಮತ್ತೇ ಬರ್ತೇನೆ. ಜೂನ್ 18ಕ್ಕೆ ಮತ್ತೇ ಬರಲು ಹೇಳಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ಕೊಡ್ತೀನಿ. ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.