ಶೇ.70 ಭಾಗ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರ ಈಗ ತೆಲುಗಿಗೆ ರೀಮೇಕ್‌ ಆಗುತ್ತಿದೆ. ಈಗಾಗಲೇ ತೆಲುಗಿನ ಕ್ಲಾಪ್‌ ಬೋರ್ಡ್‌ ಪ್ರೊಡಕ್ಷನ್‌ನ ರಾಮಕೃಷ್ಣ ನಲ್ಲಂ ಹಾಗೂ ಸ್ಟಾರ್‌ವುಡ್‌ ಪ್ರೊಡಕ್ಷನ್‌ನ ರವಿ ಕಶ್ಯಪ್‌ ರೀಮೇಕ್‌ ರೈಟ್ಸ್‌ ಖರೀದಿ ಮಾಡಿದ್ದು, ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಏಕ ಕಾಲಕ್ಕೆ ಬಿಡುಗಡೆ ಆಗುತ್ತಿದೆ.

‘ಹೊಸಬರ ಚಿತ್ರವೊಂದು ಹೀಗೆ ಬಿಡುಗಡೆಗೂ ಮುನ್ನವೇ ಬೇರೆ ಭಾಷೆಯಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವುದು, ಅಲ್ಲೂ ರೀಮೇಕ್‌ ಆಗುತ್ತಿರುವುದು ಖುಷಿ ವಿಚಾರ. ರೀಮೇಕ್‌ ಕೆಲಸಗಳು ಈಗಾಗಲೇ ಶುರುವಾಗಿರುವ ಕಾರಣ ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇವೆ. ತೆಲುಗಿನ ಈ ಎರಡೂ ನಿರ್ಮಾಣ ಸಂಸ್ಥೆಗಳು ನನ್ನ ಈ ಹಿಂದಿನ ಚಿತ್ರಗಳನ್ನು ನೋಡಿದ್ದಾರೆ. ಜತೆಗೆ ‘ಓಲ್ಡ್‌ ಮಾಂಕ್‌’ ಚಿತ್ರದ ಕತೆ ಅವರಿಗೆ ಇಷ್ಟವಾಗಿ ತಮ್ಮ ಭಾಷೆಯಲ್ಲೂ ನಿರ್ಮಿಸಲು ಮುಂದಾಗಿದ್ದಾರೆ’ ಎನ್ನುತ್ತಾರೆ ನಟ ಶ್ರೀನಿ.

ಶ್ರೀನಿ- ಅದಿತಿ ಕಾಂಬಿನೇಷನ್‌ನ 'ಓಲ್ಡ್‌ ಮಾಂಕ್‌' ಹೇಗಿರುತ್ತೆ?

ಈ ಚಿತ್ರದ ಮೂಲಕ ಹಳೆಯ ಕಲಾವಿದರು ಮತ್ತೆ ಬಣ್ಣ ಹಚ್ಚಿರುವುದು. ಈ ಪೈಕಿ ಆರ್‌ ಟಿ ರಮಾ, ಬೆಂಗಳೂರು ನಾಗೇಶ್‌ ಪ್ರಮುಖರು. ಅಲ್ಲದೆ ಡಿಂಗ್ರಿ ನಾಗರಾಜ್‌, ಎಸ್‌ ನಾರಾಯಣ್‌. ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್‌, ಸುಜಯ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ.