ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ 5.5 ಮಿಲಿಯನ್ ವೀಕ್ಷಣೆ ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು ತುಂಬಾ ವೈರಲ್ ಆಗಿದ್ದು ತಮ್ಮ ಚಿತ್ರದ ಈ ಹಾಡಿನ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಸುದೀಪ್ ಕೃತಜ್ಞತೆ ಸಲ್ಲಿಸಿದ್ದಾರೆ. 

ಸುದೀಪ್ ಅಭಿಮಾನಿಗಳಿಗಂತೂ ತಮ್ಮ ನೆಚ್ಚಿನ ನಟನ ಹಾಡಿಗೆ ಫಿದಾ ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಹಾಡನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಈ ಹಾಡು ಚಿತ್ರಕ್ಕೆ ಸಾಕಷ್ಟು ದೊಡ್ಡ ಮಟ್ಟದಲ್ಲೇ ಯಶಸ್ಸು ತಮದು ಕೊಡುತ್ತದೆ ಎಂಬುದು ನಿರ್ದೇಶಕ ಶಿವ ಕಾರ್ತಿಕ್ ಭರವಸೆ. 

ಕೋಟಿಗೊಬ್ಬ 3 ಹಾಡಿನಿಂದ ಶುರು ಸ್ಟಾರ್ ವಾರ್; ವೇಗವಾಗಿ ವೀವ್ಸ್‌ ಪಡೆದದ್ದು ಯಾರು?

ಕೊರೊನಾ ಸಮಯದಲ್ಲಿಯೂ ನಮ್ಮ ಚಿತ್ರದ ಹಾಡಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕೊಟ್ಟಿದ್ದಾರೆ. ಸಿನಿಮಾಗಳಿಗಾಗಿ ಜನ ಕಾಯುತ್ತಿದ್ದಾರೆ ಎಂಬುದು ಇದೇ ಸಾಕ್ಷಿ. ಹಾಡಿನ ಯಶಸ್ಸಿನಿಮದ ನಮ್ಮ ಚಿತ್ರತಂಡಕ್ಕೆ ಗೆಲುವಿನ ಭರವಸೆ ಹೆಚ್ಚಾಗಿದ್ದು ಲಾಕ್‌ಡೌನ್ ಮುಗಿದ ಮೇಲೆ ಒಳ್ಳೆಯ ಸಮಯ ನೋಡಿಕೊಂಡು ಕೋಟಿಗೊಬ್ಬ 3 ಚಿತ್ರವನ್ನು ತೆರೆಗೆ ತರಲಾಗುವುದು ಎಂಬು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.