Asianet Suvarna News Asianet Suvarna News

ರಾಜಮೌಳಿ ಚಿತ್ರದಲ್ಲಿ ಸುದೀಪ್ ಇಲ್ಲ; ಏನೀ ಗಾಳಿ ಮಾತು?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ರಾಜಮೌಳಿ ನಿರ್ದೇಶನದ 'RRR'ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಕಿಚ್ಚ ಸುದೀಪ್‌ ಏನು ಹೇಳುತ್ತಾರೆ ಕೇಳಿ

Kannada actor Kiccha sudeep clarifies rumours about rajamouli RRR film
Author
Bangalore, First Published Jan 20, 2020, 12:31 PM IST
  • Facebook
  • Twitter
  • Whatsapp

‘ರಾಮಮೌಳಿ ನಿರ್ದೇಶನದ ‘ಆರ್ ಆರ್‌ಆರ್’ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ ಅನ್ನೋ ಸುದ್ದಿ ಹಬ್ಬುತ್ತಿದೆ. ಇದು ನಿರಾಧಾರ. ಈ ಸಂಬಂಧ ನನ್ನನ್ನು ಯಾರೂ ಭೇಟಿಯಾಗಿಲ್ಲ,
ಸಿನಿಮಾದ ಬಗ್ಗೆ ಯೂ ಮಾತುಕತೆ ನಡೆದಿಲ್ಲ.’

ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

ಇದು ಕಿಚ್ಚ ಸುದೀಪ್ ಸ್ಪಷ್ಟನೆ. ಟ್ವಿಟ್ಟರ್ ನಲ್ಲಿ ಆರ್‌ಆರ್‌ಆರ್ ಸಿನಿಮಾ ಪೋಸ್ಟರ್ ಜೊತೆಗೆ ತನ್ನ ಹೆಸರು ಟ್ರೋಲ್ ಆಗ್ತಿರುವ ಫೋಟೋ ಟ್ಯಾಗ್ ಮಾಡಿ ಅವರು ಈ ವಿಚಾರ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್ಆರ್’ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿತ್ತು. ಆದರೆ ಇದೀಗ ಆ ಸುದ್ದಿಗೆ ತೆರೆ ಬಿದ್ದಿದೆ.

ಈ ವ್ಯಕ್ತಿಗಾಗಿ 15 ವರ್ಷ ಬಳಿಕ 'ಪ್ರೈಡ್‌ ಆಫ್‌ ಕನ್ನಡ ಸಿನಿಮಾ' ಅವಾರ್ಡ್‌ ಸ್ವೀಕರಿಸಿದ ಕಿಚ್ಚ!

ಫ್ಯಾಂಟಮ್‌ ಹೆಸರು ಬದಲಾವಣೆ ಚಿಂತನೆ

ಫ್ಯಾಂಟಮ್ ಹೆಸರು ಬದಲಾವಣೆಗೆ ಚಿಂತನೆ ಕಿಚ್ಚ ಸುದೀಪ್ ಈಗ ‘ಕೋಟಿಗೊಬ್ಬ 3’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ತಿಂಗಳ ಕೊನೆಗೆ ಚಿತ್ರೀಕರಣ ಮುಗಿಯಲಿದೆ. ನಂತರ ಸುದೀಪ್, ಜಾಕ್ ಮಂಜು ನಿರ್ಮಾಣದ ‘ಫ್ಯಾಂಟಮ್’ಚಿತ್ರದಲ್ಲಿ ಬ್ಯುಸಿ ಆಗಲಿದ್ದಾರೆ. ಜಾಕ್ ಮಂಜು ಪ್ರಕಾರ ಈ  ಚಿತ್ರಕ್ಕೆ ಫೆಬ್ರವರಿ ಎರಡನೇ ವಾರದಿಂದ ಚಿತ್ರೀಕರಣ ಶುರು. ಈ ನಡುವೆ ನಿರ್ದೇಶಕ ಅನೂಪ್
ಭಂಡಾರಿ ಹಾಗೂ ನಿರ್ಮಾಪಕ ಜಾಕ್ ಮಂಜು ಟೈಟಲ್ ಚೇಂಜ್ ಮಾಡಲು ಚಿಂತನೆ ನಡೆಸಿದ್ದಾರಂತೆ.

"

Follow Us:
Download App:
  • android
  • ios