ಬೆಂಗಳೂರು(ಜ. 07)  ದಬಾಂಗ್ 3 ಚಿತ್ರದ ನಂತರ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಚಡ್ಡಿ ದೋಸ್ತ್ ಗಳಾಗಿದ್ದಾರೆ. ಸಿನಿಮಾ ಪ್ರಮೋಶನ್ ಗೆ ಒಟ್ಟೊಟ್ಟಿಗೆ ಓಡಾಡಿದ್ದ ನಾಯಕರಿಗೆ ಪ್ರಭುದೇವ್ ಸಹ ಸಾಥ್ ಕೊಟ್ಟಿದ್ದರು. ಇದೀಗ ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಅವರಿಗೆ ಅಮೂಲ್ಯ ಗಿಫ್ಟ್ ಒಂದನ್ನು ನೀಡಿದ್ದಾರೆ.

ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಗೆ ಬಿಎಂಡಬ್ಲ್ಯೂ ಎಂ5 ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದರಿಂದ ಖುಷಿಯಾಗಿರುವ ಕಿಚ್ಚ ತಮ್ಮ ಸಂತಸವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

15 ವರ್ಷಗಳ ನಂತರ ಪ್ರಶಸ್ತಿ ಸ್ವೀಕರಿಸಿದ ಸುದೀಪ್

ನನ್ನ ಮತ್ತು ಕುಟುಂಬದ ಮೇಲೆ ಸಲ್ಮಾನ್ ಖಾನ್  ಪ್ರೀತಿ ತೋರಿರುವುದಕ್ಕೆ ಧನ್ಯವಾದ . ಇಷ್ಟು ದೊಡ್ಡ ಉಗುಗೊರೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ. ನಿಜಕ್ಕೂ ಈ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಜತೆಗೆ ಕೆಲಸ ಮಾಡಿರುವುದು ನನಗೊಂದು ಗೌರವ ಹಾಗೂ ನೀವು ನನ್ನ ಮನೆಗೆ ಭೇಟಿ ನೀಡಿರುವುದು ನನ್ನ ಪಾಲಿಗೆ ದೊಡ್ಡ ಉಡುಗೊರೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.