ಕನ್ನಡಿಗರ ಪ್ರೀತಿಯ 'ಕೆಂಪೇಗೌಡ' ಕಿಚ್ಚ ಸುದೀಪ್‌ ಕೆಲ ದಿನಗಳ ಹಿಂದೆ 'ರಮ್ಮಿ ಸರ್ಕಲ್' ಜಾಹಿರಾತಿಗೆ ಶೂಟಿಂಗ್ ಮಾಡಿದ್ದಾರೆ.  ಆ ಫೋಟೋವನ್ನು ಟ್ಟಿಟರ್ ಖಾತೆಯಲ್ಲಿ 'ರಮ್ಮಿ ಸರ್ಕಲ್ ಜಾಹಿರಾತಿಗೆ ಶೂಟಿಂಗ್ ಮಾಡಿ ಸಿಕ್ಕಾಪಟ್ಟೆ ಮಜವಿತ್ತು.  ಸಂಜೀವ ಶರ್ಮಾ ಸರ್ ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. Awesome ತಂತ್ರಜ್ಞರು.  ಥ್ಯಾಂಕ್ಸ್‌ ' ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. 

 

ದಬಾಂಗ್‌-3 ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಬ್ಯುಸಿ ಶೆಟ್ಯೂಲ್ ನಡುವೆಯೂ ಸಮಯ ಮಾಡಿಕೊಂಡು ಇಂತಹ ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್‌-7ರಲ್ಲಿ 'ವೀಕೆಂಡ್ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ವಾಸುಕಿ ವೈಭವ್‌ ಸಂಯೋಜನೆ ಮಾಡಿರುವ ' ಮನಸ್ಸಿಂದ ಯಾರೂನೂ ಕೆಟ್ಟೋರಲ್ಲ' ಎಂಬ ಹಾಡಿಗೆ ಧ್ವನಿ ನೀಡಿದ್ದಾರೆ. ಈಗಾಗಲೆ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.