ಕಿರುತೆರೆಯ ಜನಪ್ರಿಯ ನಟ ಕಾರ್ತಿಕ್‌ ಜಯರಾಂ ಕಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ಇದೇ ಮೊದಲು ಅವರು ತಮಿಳಿನಲ್ಲಿ ಅಭಿನಯಿಸಿರುವ ‘ಮಾಳಿಗೈ’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ.

ದಿಲ್‌ ಸತ್ಯ ನಿರ್ದೇಶನದ ಈ ಚಿತ್ರದಲ್ಲಿ ಸ್ಟಾರ್‌ ನಟಿ ಆಂಡ್ರಿಯಾ ಜೆರೆಮಿಯಾ ನಾಯಕಿ ಆಗಿದ್ದಾರೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಹಾಗೆಯೇ ಆ್ಯಕ್ಷನ್‌ ಆಧರಿತ ಚಿತ್ರ. ಇತ್ತೀಚೆಗಷ್ಟೇ ಮಂಜು ಮಾಸ್ಟರ್‌ ಸಾಹಸ ನಿರ್ದೇಶನದಲ್ಲಿ ಆ್ಯಕ್ಷನ್‌ ಸನ್ನಿವೇಶಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ಕಾರ್ತಿಕ್‌ ಜಯರಾಂ, ಅಲ್ಲಿ ತೆಗೆದುಕೊಂಡಿದ್ದ ಕೆಲವು ಫೋಟೋಗಳನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕೊರೋನಾ ಸಂಕಷ್ಟ ದೂರವಾಗಲು ನೆನ​ಪಿ​ರಲಿ ಪ್ರೇಮ್‌ ಉರುಳು ಸೇವೆ

ಜೆಕೆ ಬಾಲಿವುಡ್‌ ಅವಕಾಶಗಳ ಜತೆಗೀಗ ನೆಗೆಟಿವ್‌ ಶೇಡ್‌ ಕ್ಯಾರೆಕ್ಟರ್‌ ಮೂಲಕ ಕಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಕಾಲಿವುಡ್‌ ಮಟ್ಟಿಗೆ ಕನ್ನಡದ ನಟರು ವಿಲನ್‌ ಆಗಿ ಅಲ್ಲಿ ಸಖತ್‌ ಮಿಂಚಿದ್ದಾರೆ. ಇಲ್ಲಿನ ಸ್ಟಾರ್‌ ನಟರಿಗೆ ಅಲ್ಲಿ ಬಹು ಬೇಡಿಕೆಯೂ ಇದೆ. ಈಗ ಆ ಸಾಲಿನಲ್ಲಿ ಜೆಕೆ ಕೂಡ ಸೇರ್ಪಡೆ ಆಗುವ ಸಾಧ್ಯತೆಗಳಿವೆ.