ಗೌರವ ಇಲ್ಲ ಕಡೆ ಇರಲ್ಲ;ಕನ್ನಡ ಚಿತ್ರರಂಗ ತೊರೆಯಲು ನಟ ಜೆಕೆ ನಿರ್ಧಾರ!
ಎರಡು ಸಿನಿಮಾ ಮಾಡಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿರುವ ಜೆಕೆ. ಯಾರು ಗೌರವ ಕೊಟ್ಟಿಲ್ಲ ಯಾರು ಪ್ರೀತಿ ಕೊಟ್ಟಿಲ್ಲ ಎಂದ ನೆಟ್ಟಿಗರು...

2013ರಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ಐಟಿ ಹುಡುಗ ಮಾಡಲ್ ಜಯರಾಮ್ ಕಾರ್ತಿಕ್ ಜೆಕೆ ಅನ್ನೋ ಶಾರ್ಟ್ ನೇಮ್‌ಯಿಂದ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟರು. ಜೆಕೆ ಆಯ್ಕೆ ಮಾಡಿಕೊಂಡ ಕಿರುತೆರೆ ಪ್ರಾಜೆಕ್ಟ್ ಎಲ್ಲವೂ ಸೂಪರ್ ಹಿಟ್. ಕನ್ನಡ ಮಾತ್ರವಲ್ಲ ಹಿಂದೆ ಧಾರಾವಾಹಿಯಲ್ಲಿ ಜೆಕೆ ಮಿಂಚಿದ್ದಾರೆ. ಲಕ್ ಕೈ ಹಿಡಿಯುತ್ತಿದ್ದಂತೆ ಕನ್ನಡದ ಒಂದೆರಡು ಸಿನಿಮಾಗಳಿಗೆ ಸಹಿ ಮಾಡಿ ನಟಿಸಿ ರಿಲೀಸ್ ಕೂಡ ಆಗಿದೆ. ಈಗ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಹೌದು! ಎರಡು ಸಿನಿಮಾಗಳ ನಂತರ ಜಯರಾಮ್ ಕಾರ್ತಿಕ್ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ನಿರ್ಧಾರ ಮಾಡಿದ್ದಾರಂತೆ. ಇದಕ್ಕೆ ಕಾರಣ ಅಗೌರವ ಮತ್ತು ತುಳಿಯುತ್ತಿರುವ ಜನರು. ಜಿಕೆ ನಟಿಸಿರುವ ಐರಾವನ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ ಆದರೆ ಕೆಲವೊಂದು ಕಾರಣಗಳಿಂದ ತಡವಾಗುತ್ತಿದೆ. ಇದರಿಂದ ಬೇಸರಗೊಂಡು ತಮ್ಮನ್ನು ತುಳಿಯುತ್ತಿದ್ದಾರೆ ಅಗೌರವಿಸುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಅಲ್ಲದೆ ಎರಡು ಸಿನಿಮಾಗಳ ಬಳಿಕ ಗುಡ್ ಬೈ ಹೇಳುತ್ತಿರುವುದು ಬಿಗ್ ಶಾಕ್. ಇದೆಲ್ಲಾ ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಆಗಿದ್ದು ಜಿಕೆ ಸ್ಪಷ್ಟನೆ ನೀಡಬೇಕಿದೆ.
ಫೋಟೋ ಮೂಲಕ ಪ್ರೀತಿ ಅಧಿಕೃತಗೊಳಿಸಿದ ನಟ ಜೆಕೆ ಮತ್ತು ಸಮಂತಾ
ಜಯರಾಮ್ ಕಾರ್ತಿಕ್ ಕೆಲಸಗಳು:
ಎರಡು ವರ್ಷಗಳ ಕಾಲ ಅಶ್ವಿನಿ ನಕ್ಷತ್ರ ಧಾರಾವಾಹಿ ಮುಗಿಸಿದರು. ಈ ನಡುವೆ ಮತ್ತೊಂದು ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಮೇಲೆ 2015ರಿಂದ ಒಂದು ವರ್ಷಗಳ ಕಾಲ ಹಿಂದಿ ಸೀಯಾ ಕಿ ರಾಮ್ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ನಟಿಸಿದರು. ಮತ್ತೊಂದು ವರ್ಷದ ಬ್ರೇಕ್ ತಯಾರಿ ನಂತರ 2017ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಸಿ ಎರಡನೇ ರನರ್ ಅಪ್ ಸ್ಥಾನ ಗಿಟ್ಟಿಸಿಕೊಂಡರು. ಮತ್ತೊಮ್ಮೆ ಮಾಡಲಿಂಗ್ ಬ್ರೇಕ್ ತೆಗೆದುಕೊಂಡು ನಾಗಿಣಿ 2 ಧಾರಾವಾಹಿಯ ಫಸ್ಟ್ ಎಪಿಸೋಡ್‌ನಲ್ಲಿ ಆದಿಶೇಷನ ಪಾತ್ರದಲ್ಲಿ ಕಾಣಿಸಿಕೊಂಡರು.
ಇನ್ನು ಸಿನಿಮಾಗಳ ಬಗ್ಗೆ ಹೇಳಬೇಕು ಅಂದ್ರೆ ಆ ಕರಾಳ ರಾತ್ರಿ, ವಿಸ್ಮಯ, ಬೆಂಗಳೂರು 560023, ಚಂದ್ರಿಕಾ, ಜಸ್ಟ್ ಲವ, ಕೆಂಪೇಗೌಡ, ಕೆಂಪೇಗೌಡ, ವಿಷ್ಣುವರ್ಧನ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ಬೆಂಗಾಲಿ ಭಾಷೆಯ ಫೈಟರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸುದೀಪ್ ಸ್ನೇಹಿತರಾಗಿ 2012ರಲ್ಲಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆದ ಈಗ ಮತ್ತು ನಾ ನೀ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.
Jayaram Karthik: ಅಶ್ವಿನಿ ನಕ್ಷತ್ರದ ಜೆಕೆ ಈಗ ಹೇಗಾಗಿದ್ದಾರೆ ನೋಡಿ!