ಘನವಾದ ಉದ್ದೇಶ ಇರುವ ಸಿನಿಮಾ ತೋತಾಪುರಿ 2: ಜಗ್ಗೇಶ್
ಬಹು ನಿರೀಕ್ಷಿತ ತೋತಾಪುರಿ 2 ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡ ನಟ ಜಗ್ಗೇಶ್....

- ‘ತೋತಾಪುರಿ’ ಮೊದಲ ಭಾಗವನ್ನು ಈಗಲೂ ಓಟಿಟಿಯಲ್ಲಿ ನೋಡಿ ಜನ ಮೆಚ್ಚಿಕೊಳ್ಳುತ್ತಾರೆ. ಐಎಎಸ್, ಐಪಿಎಸ್ ಅಧಿಕಾರಿಗಳೂ ನನಗೆ ಫೋನ್ ಮಾಡಿ ಹೇಳಿದ್ದಾರೆ. ಅಮೆರಿಕಾಗೆ ಹೋಗಿದ್ದಾಗ ಅಲ್ಲೂ ಜನ ಚಿತ್ರ ಮೆಚ್ಚಿಕೊಂಡಿದ್ದನ್ನು ತಿಳಿಸಿದರು. ಆ ಭಾಗದಲ್ಲಿ ಎಲ್ಲಾ ಪಾತ್ರಗಳ ಪರಿಚಯ ಆಗಿದೆ. ಚಿತ್ರದ ಕೊನೆಯಲ್ಲಿ ಧನಂಜಯ ಬರುತ್ತಾರೆ. ತೋತಾಪುರಿ ಎರಡನೇ ಭಾಗದಲ್ಲಿ ಕಥೆ ತೀವ್ರವಾಗುತ್ತದೆ. ಕೊನೆಯಲ್ಲಿ ಒಂದು ಅಪೂರ್ವ ಸಂದೇಶ ಇರುತ್ತದೆ.
- ನನಗೆ ಗಂಭೀರ ವಿಷಯವನ್ನೂ ತಮಾಷೆ ರೂಪದಲ್ಲಿ ಹೇಳುವುದರಲ್ಲಿ ಜಾಸ್ತಿ ನಂಬಿಕೆ. ಬಹುಪಾಲು ಜನ ತಮಾಷೆ ಹೆಚ್ಚು ಇಷ್ಟ ಪಡುತ್ತಾರೆ. ಇಂಥಾ ಕತೆಗಳನ್ನು ಮಾಡಿದಾಗ ಗಂಭೀರವಾಗಿ ಹೇಳುವುದಕ್ಕೆ ಆಗುವುದಿಲ್ಲ. ತಮಾಷೆ ಮೂಲಕ ಹೇಳಿದಾಗ ಹೆಚ್ಚು ತಾಕುತ್ತದೆ.
ಈರೇಗೌಡನ ಪ್ರೀತಿಯಲ್ಲಿ ಶಕೀಲಾ ಬಾನು: ಬಿಡುಗಡೆಗೆ ರೆಡಿ ಆಗಿದೆ 'ತೋತಾಪುರಿ-2'
- ಮನುಷ್ಯ ಜೀವನದಲ್ಲಿ ಕೊನೆಗೆ ಆತ್ಮ ಮಾತ್ರ ಉಳಿಯುವುದು. ಜಾತಿ ವ್ಯತ್ಯಾಸ ಇತ್ಯಾದಿಗಳು ಇಲ್ಲಿ ಬದುಕಿರುವಾಗ ಮಾತ್ರ. ಈ ಸಿನಿಮಾ ಕೂಡ ಅದನ್ನು ಧ್ವನಿಸುತ್ತದೆ. ಮನುಷ್ಯರನ್ನು ಮನುಷ್ಯರ ಥರ ನೋಡಬೇಕು ಅಂತ ಹೇಳುತ್ತದೆ.
- ಇಲ್ಲಿ ಒಳ್ಳೆಯ ಕಥೆ ಇದೆ, ಮನ ಮುಟ್ಟುವ ಪಾತ್ರಗಳಿವೆ. ಒಳ್ಳೆಯ ಪ್ಯಾಕೇಜ್ ಇದೆ. ಒಬ್ಬ ಹಳ್ಳಿಯ ಟೇಲರ್, ಅವನ ಸುತ್ತಮುತ್ತ ಇರುವ ಸಮಸ್ಯೆಯನ್ನು ಪರಿಹರಿಸುವ ವಿಶಿಷ್ಟತೆ ಇದೆ. ಇದು ವಾಸ್ತವಕ್ಕೆ ಹತ್ತಿರವಾಗಿರುವ ಸಿನಿಮಾ.
ಕಾಶಿಯಲ್ಲಿ ಜಗಣ್ಣ; ಮಹಾಮಂತ್ರ ದೀಕ್ಷೆ ನೀಡಿದ ಗುರುವರ್ಯರು!
- ನಾನು ಈಗ ಕಲಾವಿದ ಮಾತ್ರ ಅಲ್ಲ. ನನಗೆ ಈಗ ಜವಾಬ್ದಾರಿ ಇದೆ. ದುಡ್ಡಿಗಾಗಿ, ಹೆಸರಿಗಾಗಿ ಸಿನಿಮಾ ಮಾಡೋದಿಲ್ಲ. ಒಳ್ಳೆ ವಿಷಯ, ಸಂದೇಶ ಇರುವ ಸಿನಿಮಾ ಮಾಡಬೇಕು ನಾನು. ಹಾಗಾಗಿಯೇ ಈಗೀಗ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ತೋತಾಪುರಿ ಚಿತ್ರದಲ್ಲಿ ನಟಿಸಿದ್ದಕ್ಕೆ ಕಾರಣವೇ ಇದರ ಘನವಾದ ಕತೆ.
- ಈ ಚಿತ್ರದಲ್ಲಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಧನಂಜಯ್ ಅಪರೂಪದ ಪಾತ್ರ ಮಾಡಿದ್ದಾರೆ. ಆತ ಮರ್ಯದಸ್ಥ ಕಲಾವಿದ. ತೆರೆಯ ಮೇಲೆ, ತೆರೆಯ ಆಚೆ ಒಂದೇ ಥರ ಇರುತ್ತಾನೆ. ಹಿರಿಯರಿಗೆ ಮರ್ಯಾದೆ ಕೊಡುತ್ತಾನೆ. ಅವನಿಗೆ ಅಪೂರ್ವ ಭವಿಷ್ಯ ಇದೆ.