ಸ್ಯಾಂಡಲ್‌ವುಡ್ ಹಿರಿಯ ನಟ ಜಗ್ಗೇಶ್, ದೇವರಾಜ್ ಹಾಗೂ ಅವಿನಾಶ್ ಬೆಳೆದು ಬಂದ ದಾರಿ ಇಂದಿನ ಪೀಳಿಗೆಗೆ ಮಾದರಿಯಾಗ ಬೇಕಿದೆ. ತಮ್ಮ ಕಷ್ಟ ದಿನಗಳ ಬಗ್ಗೆ ಜಗ್ಗೇಶ್ ಹೇಳಿದ ಮಾತುಗಳನ್ನು ಕೇಳಿ....
ಹಲವು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಅಭಿನಯಿಸಬೇಕೆಂದರೆ ಅವಕಾಶಗಳಿಗೆ ಸಾಕಷ್ಟು ಶ್ರಮಪಡೆಬೇಕಾಗಿತ್ತು. ಅದ್ಭುತ ಕಲಾವಿದರು ಹಾಗೂ ಅಮೋಘ ಚಿತ್ರಕಥೆ ಸೃಷ್ಟಿಯಾಗುತ್ತಿದ್ದ ಸಮಯ. ಅಭಿಮಾನಿಗಳನ್ನು ದೇವರೆಂದು ಕರೆದ ಮಹಾನುಭಾವರ ಪೀಳಿಗೆ ಅದಾಗಿತ್ತು. ಹಾಸ್ಯ ಮಾಡುತ್ತಾ ನಾಯಕ ನಟನಾಗಿ ಮಿಂಚಿದ ಜಗ್ಗೇಶ್, ನಟ ಹಾಗೂ ಕಳನಾಯಕನಾಗಿ ಮಿಂಚಿದ ದೇವರಾಜ್ ಹಾಗೂ ಪ್ರಣಯ ರಾಜ ಅವಿನಾಶ್ ಬಗ್ಗೆ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಜಗ್ಗೇಶ್ ಉತ್ತರಿಸಿದ್ದಾರೆ.
![]()
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ಜಗ್ಗೇಶ್ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ನೇರ ನುಡಿಯಲ್ಲಿ ಉತ್ತರಿಸುತ್ತಾರೆ. ಅವರ ಮಾತುಗಳನ್ನು ವೈದವಾಕ್ಯದಂತೆ ಜನರು ಪಾಲಿಸುತ್ತಾರೆ. 'ಕಷ್ಟ ಪಟ್ಟು ಒಂದೊಂದು ಪಾತ್ರಕ್ಕೂ ಅಲೆದರು. ಸಿಕ್ಕಾಗ ತಮ್ಮ ಟ್ಯಾಲೆಂಟನ್ನು ಪರೆದೆ ಮೇಲೆ ಮಿಂಚಿದರು. ಜಗ್ಗೇಶ್, ದೇವರಾಜ್, ಅವಿನಾಶ್ ಇನ್ನೂ ಅನೇಕರು ಪ್ರತಿಭಾವಂತರು ಬೆಳೆದು ಒಂದ ದಾರಿ ಇಂದಿನ ಪೀಳಿಗೆಗೆ ಮಾದರಿ,' ಎಂದು ಸ್ಟಾರ್‌ಮಾಗ್ ಎಂದು ಟ್ಟಿಟರ್ ಖಾತೆಯೊಂದು ಟ್ಟೀಟ್ ಮಾಡಿದೆ. ಇದಕ್ಕೆ ಜಗ್ಗೇಶ್ ಉತ್ತರಿಸಿದ್ದಾರೆ.
ನಟ ಜಗ್ಗೇಶ್ ಹೆಸರು ದುರ್ಬಳಕೆ; ಸೈಬರ್ ಕ್ರೈಂನಲ್ಲಿ ದೂರು ದಾಖಲು
ಜಗ್ಗೇಶ್ ಉತ್ತರ:
' ಅಲೆದಿಲ್ಲ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು. ತಿನ್ನಲು ಅನ್ನವಿಲ್ಲದಿದ್ದರೂ ಮುಖದಲ್ಲಿ ನಗು ಮಾಸುತ್ತಿರಲಿಲ್ಲ. ಗೆದ್ದ ಮೇಲೆ ಯಶಸ್ಸು ತೆಲೆಗೆ ಏರಲಿಲ್ಲ. ಸ್ವಾಭಿಮಾನಕ್ಕೆ ಪಡೆದದ್ದು ಏನು ಬೇಕಾದರೂ ಬಿಸಾಕಿ ಗೌರವದಿಂದ ಬದುಕಿದವರು. ಬದುಕನ್ನು ಪ್ರೀತಿಸಿ ಬೆಳೆದವರು. ಪ್ರೀತಿಗಾಗಿ ಬದುಕಿದ ತಲೆಮಾರು. ಸ್ವಲ್ಪ ಸಿಟ್ಟು ಜಾಸ್ತಿ' ಎಂದು ರೀ-ಟ್ಟೀಟ್ ಮಾಡಿದ್ದಾರೆ.
ಅತ್ತ ಪ್ರತಿಭೆಯೂ ಇಲ್ಲದೇ, ಎಲ್ಲಿಯೂ ತುಸು ಸೌಂದರ್ಯವಿಟ್ಟುಕೊಂಡು ಅವಕಾಶಗಳನ್ನು ಪಡಯದೇ ಇಂದಿನ ಅನೇಕ ನಟ, ನಟಿಯರು ಐಷಾರಾಮಿ ಜೀವನಕ್ಕೆ ಒಗ್ಗಿ ಕೊಳ್ಳುತ್ತಾರೆ. ಆದರೆ, ಹಣ ಸಾಕಾಗದೇ ಬೇಡದ, ದೇಶ ವಿರೋಧಿ ಕಾರ್ಯಗಳಿಗೆ ಕೈ ಹಾಕಿ, ಇದೀಗ ಕಂಬಿ ಎಣಿಸುವಂತಾಗಿದೆ. ಮನುಷ್ಯ ಕಷ್ಟ ಪಟ್ಟು ಸಂಪಾದಿಸಿದರೆ ಮಾತ್ರ ಕೈಯಲ್ಲಿ ಉಳಿಯುತ್ತದೆ. ನೆಮ್ಮದಿ ನಮ್ಮದಾಗುತ್ತದೆ ಎಂಬುದನ್ನು ಜಗ್ಗೇಶ್ ಮಾರ್ಮಿಕವಾಗಿ, ಸತ್ಯವನ್ನು ತಮ್ಮ ಜೀವನದ ಮೂಲಕ ಹೇಳಿದ್ದಾರೆ.
