ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್‌ ಟ್ಟೀಟರ್‌ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಎಲ್ಲರನ್ನೂ ಸದಾ ನಗಿಸುತ್ತಾ ತಮ್ಮಲಿರುವ ಜ್ಞಾನವನ್ನು ಹಂಚಿಕೊಳ್ಳುತ್ತಾರೆ. ಆದರೆ ಅದೇ ತಾಳ್ಮೆಯನ್ನು ಕೆಲವು ಕಿಡಿಕೇಡಿಗಳು ದುರ್ಬಳಕೆ ಮಾಡಿದ್ದಾರೆ. ನಕಲಿ ಖಾತೆ ತೆರೆದು ಜಗ್ಗಣ್ಣ ಹೇಳಿರುವ ಹಾಗಿಯೇ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಸೂಕ್ಷವಾಗಿ ಗಮನಿಸಿ ಆಲ್‌ಲೈನ್‌ ಮೂಲಕ ಸೈಬರ್ ಕ್ರೈಂಗೆ ದೂರು ದಾಖಲಿಸಿದ್ದಾರೆ, ಜಗ್ಗೇಶ್.

ಕನ್ನಡ ಸ್ವಲ್ಪ ಗೊತ್ತು ಎನ್ನುವವರು ಚಿತ್ರರಂಗ ಹರಾಜು ಹಾಕುತ್ತಿದ್ದಾರೆ; ಕನ್ನಡಿಗರಿಗೆ ಜಗ್ಗೇಶ್‌ ಸಲಾಂ

ಜಗ್ಗೇಶ್‌ ಹೆಸರಿನಲ್ಲಿರುವ ನಕಲಿ ಖಾತೆಯಿಂದ ಹಿಂದಿ ಭಾಷೆ ಹೇರಿಕೆ ಬಗ್ಗೆ ಟ್ಟೀಟ್‌ ಮಾಡಲಾಗಿದೆ. ಇದನ್ನು ಕಡೆಗಣಿಸಿ 'ಕೆಲವರು ಹೀಗೆ ಸೆಲೆಬ್ರಿಟಿಗಳ ಪೇಜ್‌ ಹಾಗೂ ಅವರಿಗೆ ಮುಜುಗರ ಉಂಟು ಮಾಡುವುದು ದಂಧೆಯಾಗಿದೆ. Don't worry ಬಿ ಹ್ಯಾಪಿ. ಸೈಬರ್‌ ಕ್ರೈಂ ಸಿಇಡಿ ಇದೆ. ನನ್ನ ವೈಯಕ್ತಿಕ ದೂರು ಎಂದು ಭಾವಿಸಿ ಈ ಕೃತ್ಯದ ವಿರುದ್ಧ ಕಾನೂನು ಕ್ರಮಕ್ಕೆ ಬೇಡಿಕೆ ಧನ್ಯವಾದಗಳು,' ಎಂದು ಜಗ್ಗೇಶ್ ಟ್ಟೀಟ್‌ ಮಾಡಿದ್ದಾರೆ.

 

ನಾನು ಹೆದರಲ್ಲಾ:
'ನನ್ನ ಹೆಸರಲ್ಲಿ ಟ್ವೀಟರ್ ಪೇಜ್ ಕ್ರಿಯೇಟ್ ಮಾಡು ದುರ್ಬಳಕೆ ಮಾಡಿ ಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ಆನ್‌ಲೈನ್‌ ಕಂಪ್ಲೇಂಟ್‌ ಕೊಟ್ಟಿರುವೆ. ಈ ರೀತಿ ಯತ್ನಗಳಿಗೆ ನಾನು ಹೆದರಲ್ಲ. ನನ್ನ ಅಭಿಮಾನಿಗಳು ಇವನ್ನೆಲ್ಲ ನಂಬೋಲ್ಲಾ. ನಿ ಮ್ಮ ಕಾರ್ಯ ನೀವು ಮುಂದುವರಿಸಿ, ನಮ್ಮ ಕಾರ್ಯ ನಾವು ಮಾಡುತ್ತೇವೆ. ಒಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಮಜವಾಗಿದೆ. ಬೆಸ್ಟ್  ಆಫ್‌ ಲಕ್‌,  ಭೇಟಿಯಾಗುವೆ,' ಎಂದು ಫೇಕ್‌ ಪೇಜ್‌ ಕ್ರಿಯೇಟ್‌ ಮಾಡಿದ ಅಡ್ಮಿನ್‌ಗೆ ಕೇಳಿದ್ದಾರೆ.

 

ಈಗಾಗಲೇ ಫೇಕ್‌ ಖಾತೆ ಹಿಂದಿರುವ Ip ಅಡ್ರಸ್‌ ಅನ್ನು ಪತ್ತೆ ಹಚ್ಚಲಾಗಿದೆ. ದಯವಿಟ್ಟ ಅಮಾಯಕರು ಅನಾವಶ್ಯಕವಾಗಿ ರೀ ಟ್ಟೀಟ್‌ ಮಾಡಿ ಸಮಸ್ಯೆಗೆ ಸಿಲುಕಿ ಕೊಳ್ಳಬೇಡಿ ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.

ಹುಂಬತನ ಬಿಡಿ, ಮಾಸ್ಕ್ ಧರಿಸಿ ಓಡಾಡಿ; ಜಗ್ಗೇಶ್ ಕಳಕಳಿಯ ಮನವಿ 

ಒಟ್ಟಿನಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ಹೀಗೆ ನಡೆಯುವುದು ನಿಲ್ಲಬೇಕು. ನಮ್ಮ ನೆಚ್ಚಿನ ಸ್ಟಾರ್ ನಟರನ್ನು ದೇವರೆಂದು ಭಾವಿಸುವ ಅಭಿಮಾನಿಗಳನ್ನು ತಪ್ಪು ದಾರಿಗೆ ಎಳೆದಂತಾಗುತ್ತದೆ. ಇದರಿಂದ ನೀವು ಮಾಡುವ ತಮಾಷೆ ಕೆಲಸದಿಂದ ನಟರ ಹೆಸರಿಗೆ ಧಕ್ಕೆ ಬರುತ್ತದೆ, ಎಂಬುವುದು ನೆನಪರಿಲಿ.