ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಪ್ರದೀಪ್ ದೊಡ್ಡಯ್ಯ ಕನ್ನಡ ಡಬ್ಬಿಂಗ್ ಬಗ್ಗೆ ತಮ್ಮ ಆಲೋಚನೆ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

ಜಗ್ಗೇಶ್‌ ಟ್ಟಿಟರ್‌‌ನಿಂದ ರಿಪ್ಲೈ ಮಾಡೋರು ಇವರೇ!; ಅಕ್ಕ-ತಮ್ಮ ಡೌಟ್‌ಗೆ ಉತ್ತರ ಸಿಗ್ತು! 

ಪ್ರದೀಪ್ ಮಾತುಗಳು:
'ದೀವಾಪಳಿ ದಿನ ನಾನು ಟಿವಿ ಹಾಕಿದೆ. ಯಾವುದೇ ಚಾನಲ್ ಹಾಕಿದ್ರೂ ಒಂದರಲ್ಲಿ ತೆಲುಗು ಸ್ಟಾರ್, ಇನ್ನೊಂದರಲ್ಲಿ ತಮಿಳು ಸ್ಟಾರ್ ಬರ್ತಿದ್ರು. ನಾನು ಚಾನೆಲ್ ಬದಲಾಯಿಸುತ್ತಲೇ ಇದ್ದೆ. ಅಂದ್ರೆ ಇದು ಕನ್ನಡ ಚಾನಲ್ ಆ ಅಂತ ಅನುಮಾನ ಬರುತ್ತಿತ್ತು. ಎಲ್ಲಿಗಪ್ಪಾ ಬಂತು ಇದು? ಸುಪ್ರೀಮ್ ಕೋರ್ಟ್‌ ಜಡ್ಜ್‌ಮೆಂಟ್ ಕೊಟ್ಟಿದೆ ಡಬ್ಬಿಂಗ್ ಮಾಡ್ಬೋದು ಅಂತ. ಅದಕ್ಕೆ ಎಲ್ಲಾ ಹಾಕೋದಾ ಟಿಆರ್‌ಪಿ ಸಕತ್ ಬರುತ್ತೆ ಅಂತ. ಒಬ್ಬ ತಾಯಿನ ಡಾ ರಾಜ್‌ಕುಮಾರ್ ನೋಡ್ಕೊಳ್ತಾ ಇದ್ರು. 2006ರಲ್ಲಿ ಅವರು ಅಗಲಿದ ನಂತರ ನೀವೆಲ್ಲಾ ನೋಡ್ಕೊಳಿ ಅಂತ ಬಿಟ್ಹೋದ್ರು. ಆಗ ಎಲ್ಲಾ ಬಂದು ಬಿಟ್ಟು, ಕಾಲು ಒತ್ತುತ್ತೀನಿ ಅಂದ್ರು. 5 ವರ್ಷ ಟ್ರೈ ಮಾಡಿದ್ರು. ಇನ್ನು ಸ್ವಲ್ಪ ಮೇಲಕ್ಕೆ ಬಂದು ಕೈ ಒತ್ತುತ್ತೀನಿ ಅಂದ್ರು. ಆದರೀಗ ನೋಡಿದ್ರೆ ಪರಿಸ್ಥಿತಿ ಕುತ್ತಿಗೆ ಹಿಸುಕಿ, ಸಾಯಿಸಿ ಬಿಟ್ಟಿದ್ದಾರೆ ಬಿಡಿ,' ಎಂದು ಪ್ರದೀಪ್ ಮಾತನಾಡಿದ್ದಾರೆ.

 

ಇಂದು 40 ವರ್ಷಗಳ ಸಿನಿ ಪಯಣ ಪೂರೈಸಿರುವ ನಟ ಜಗ್ಗೇಶ್ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. 'ಡಬ್ಬಿಂಗ್ ಬಗ್ಗೆ ಮಾತನಾಡಿದ್ದಕ್ಕೆ ಕಾನೂನು ನನಗೆ 3 ಲಕ್ಷ ದಂಡ ವಿಧಿಸಿತು. ನನ್ನ ಉದ್ಯಮದ ಪ್ರೀತಿಗೆ ಇದು ನನಗೆ ಸಿಕ್ಕ ಬಳುವಳಿ. ಇಂದು ಕನ್ನಡ ಚಿತ್ರರಂಗವೆಲ್ಲ ಕನ್ನಡಿಗರು ಇಲ್ಲದೇ, ಮುಂದೆ ಮಸಣ ಸೇರುವ ಸ್ಥಿತಿ ತಲುಪುತ್ತಾನೆ. ನನ್ನ ವಿಚಾರಕ್ಕೆ ಕೈ ಜೋಡಿಸಿದಾಗ ಇದರ ಬೆಂಬಲಿಗರು ನನಗೆ ಕನ್ನಡ ದ್ರೋಹಿ ಎಂದು ಜರಿದರು. ಕಾನೂನಿನ ಮುಂದೆ ಕನ್ನಡ ಚಿತ್ರರಂಗ ಕಂಡವರ ಪಾಲಾಯಿತು, ಎಂದು ಸಂಕಟ ತೋಡಿ ಕೊಂಡಿದ್ದಾರೆ.

ಅಮ್ಮನಿಗಾಗಿ ಜಗ್ಗೇಶ್ ಆಣೆ ಇಟ್ಟ ಲಿಂಗವಿದು; 'ನಾನು ಯಾವ ತಪ್ಪು ಮಾಡುವುದಿಲ್ಲ'! 

ಡಬ್ಬಿಂಗ್ ಪರ ನಿಂತವರಿಗೆ ಪ್ರಶ್ನೆ:
'ಆ ಕಾರ್ಯ ಮಾಡಿ ಗೆದ್ದವರಿಗೆ ಒಂದು ಪ್ರಶ್ನೆ ಕೇಳಿ, ನಿಮಗೆ ಅನ್ಯ ಭಾಷೆ ಚಿತ್ರ ನಮಗೆ ತೋರಿಸುವ ಕಾರ್ಯ ಮಾಡಿ ಗೆದ್ದರಲ್ಲ, ಅವರ ನೆಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಸೇರಿಸಲು ಹೋರಾಟ ಮಾಡುವ ಮಾರ್ಗವಾಗಲಿ, ಸಮಯವಾಗಲಿ ಇದೆಯಾ? ಒಂದು ವೇಳೆ ನೀವುಗಳು ಕನ್ನಡ ಚಿತ್ರವನ್ನು ಆಲ್ಲಿಯೇ ಬೇರು ಊರುವಂತೆ ಮಾಡಿದರೆ ನನ್ನ ತಾಯಿ ಮೇಲಾಣೆ. ನನ್ನ 40 ವರ್ಷದ ಕಲಾ ಸೇವೆ ಬದಿಗೊತ್ತಿ, ನಿಮ್ಮ ಮನೆಯ ಪಾಯಿಖಾನೆ  1 ವರ್ಷ ತೊಳೆದು, ನಿಮ್ಮ ಸೇವೆ ಮಾಡುವೆ. ಅನ್ಯಾಯವಾಗಿ ಎಷ್ಟೋ ಕನಸು ಕಟ್ಟಿ ಬರುತ್ತಿರುವ ನನ್ನ ಮುಂದಿನ ಪೀಳಿಗೆಯ ಕಂದಮ್ಮಗಳ ಕನಸು ಸರ್ವನಾಶ ಮಾಡಿಬಿಟ್ಟರು,' ಎಂದು ಜಗ್ಗೇಶ್ ಸಂಕಟ ತೋಡಿಕೊಂಡಿದ್ದಾರೆ.