Asianet Suvarna News Asianet Suvarna News

ಶೂದ್ರನಾದರೂ ನನ್ನನ್ನು ಬೃಂದಾವನದ ಮುಂದೆ ಕೂರಿಸ್ತಾರೆ: ಜಾತಿ ವ್ಯವಸ್ಥೆ ಬಗ್ಗೆ Jaggesh ಮಾತು

ತೋತಾಪುರಿ ಸಿನಿಮಾದಲ್ಲಿ ಡಬಲ್ ಮೀನಿಂಗ್‌ ಇದೆ ಎಂದವರಿಗೆ ಉತ್ತರ ಕೊಟ್ಟ ನಟ ಜಗ್ಗೇಶ್. 

Kannada actor Jaggesh talks about casteism and totapuri film vcs
Author
First Published Oct 7, 2022, 2:41 PM IST

ನವರಸ ನಾಯಕ ಜಗ್ಗೇಶ್ ಅಭಿನಯಿಸಿರುವ ತೋತಾಪುರಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಭಾವೈಕ್ಯತೆಯನ್ನು ತೋರುಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರಾದ ವಿಜಯ್ ಪ್ರಸಾದ್. ಜಗ್ಗೇಶ್‌ಗೆ ಜೋಡಿಯಾಗಿ ಸಿಂಪಲ್ ಹುಡುಗಿ ಅದಿತಿ ಪ್ರಭುದೇವ ಮತ್ತು ಎವರ್‌ಗ್ರೀನ್‌ ನಟ ಸುಮನ್ ರಂಗನಾಥ್ ಅಭಿನಯಿಸಿದ್ದಾರೆ. ತೋತಾಪುರಿಯಲ್ಲಿರುವ ಡಬಲ್ ಮೀನಿಂಗ್ ಡೈಲಾಗ್ ಬಗ್ಗೆ ಕಿಡಿಗೇಡಿಗಳು ಹಾಸ್ಯ ಮಾಡುತ್ತಿದ್ದಾರೆ, ಚಿತ್ರಕ್ಕೆ ತಪ್ಪು ಅರ್ಥ ನೀಡುತ್ತಿದ್ದಾರೆ. ಹೀಗಾಗಿ ಸಕ್ಸಸ್‌ ಮೀಟ್‌ನಲ್ಲಿ ಜಗ್ಗೇಶ್‌ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸರಳವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.

'ನಾನು ಕಾಲೇಜ್‌ ಪಕ್ಕದಲ್ಲಿರುವುದು ಹೀಗಾಗಿ ಆ ಮಕ್ಕಳು ಮಾತನಾಡುವುದು ಗೊತ್ತಿದೆ. ಇಂದು ಆಪ್‌ಗಳ ಮೂಲಕ ನಾವು ನೇರವಾಗಿ ಎಲ್ಲವನ್ನು ನೋಡುತ್ತಿದ್ದೇವೆ ಆದರೆ ಡೈಲಾಗ್ ಮಾತನಾಡಿದರೆ ಮಾತ್ರ ಬೋಧನೆ ಶುರುವಾಗುತ್ತದೆ. ನಾನು ಯಾವುದೋ ಕಾಲದಲ್ಲಿ ಈ ತರ ಡೈಲಾಗ್ ಹಿಡೆದಿದ್ದೇನೆ. ನಿರ್ದೇಶಕ ವಿಜಯ್ ವಿಜಯ್ ಪ್ರಸಾದ್ ಈ ತರ ಸ್ಕ್ರಿಪ್ಟ್ ಬರೆಯುವುದು ಜನರ ಗಮನ ಸೆಳೆಯುವುದಕ್ಕೆ ಅಷ್ಟೆ. ನೇರವಾಗಿ ಹೇಳಿದರೆ ಯಾರೂ ಕೇಳಿಸಿಕೊಳ್ಳುವುದಿಲ್ಲ ಟ್ವಿಸ್ಟ್ ಮಾಡಿ ಹೇಳಿದರೆ ಅದನ್ನು ಗ್ರಹಿಸುತ್ತಾರೆ' ಎಂದು ಜಗ್ಗೇಶ್ ಮಾತನಾಡಿದ್ದಾರೆ. 

Kannada actor Jaggesh talks about casteism and totapuri film vcs

ಅಂತರ್ಜಾತಿ ವಿವಾಹ:

'20ನೇ ವಯಸ್ಸಿನಲ್ಲಿ ನಾನು ಅಂತರ್ಜಾತಿ ಮದುವೆ ಮಾಡಿಸಿದ್ದೆ ಆಗ ನನ್ನ ಕುಟುಂಬದವರು 10 ವರ್ಷಳ ಕಾಲ ನನ್ನನ್ನು ದೂರ ಇಟ್ಟಿದ್ದರು. ನಾನು ಜಾತಿ ಅಂದರೆ ಮುಖಕಕ್ಕೆ ಹೊಡೆಯುತ್ತೇನೆ. ಎಲ್ಲರೂ ಒಂದೇ ಎಂದು ನಾನು ಭಾವಿಸುತ್ತೇನೆ. ನಾನು ಸೂಪರ್ ಸ್ಟಾರ್ ನಟ, ಡೈರೆಕ್ಟರ್‌ ಮಗನೂ ಅಲ್ಲ ಅಥವಾ ನನ್ನ ಹಿಂದೆ ದೊಡ್ಡ ಪ್ರೊಡಕ್ಷನ್‌ ಹೌಸ್‌ ಕೂಡ ಇಲ್ಲ. ಯಾರೇ ನನ್ನನ್ನು ದ್ವೇಷ ಮಾಡಿದ್ದರೂ ಕೂಡ ನನಗೆ ಅರ್ಥ ಆಗುವುದಿಲ್ಲ. ಒಳ್ಳೆಯದಾಗಲಿ ಎಂದು ಹೇಳುವ ಸಂಸ್ಕೃತಿ ನನ್ನದು. ಸಿನಿಮಾದಲ್ಲಿ ಕಾಮಿಡಿ ಮಾಡುವ ನಾನು ನಿಜ ಜೀವನದಲ್ಲಿ ಕಾಂತ್ರಿ ಇರುವ ವ್ಯಕ್ತಿ. ಈ ಪ್ರಪಂಚದಲ್ಲಿ ಜಾತಿ ಇರಬಾರದು ಎಂದು ಪ್ರಾಮಾಣಿಕ ಕಡಿ ಇತ್ತು. ಹೀಗಾಗಿ ಅಂತರ್ಜಾತಿ ವಿವಾಹ ಮಾಡಿಸಿರುವೆ. ನನ್ನ ಮಗ ಕೂಡ ಬೇರೆ ದೇಶದವರನ್ನು ಮದುವೆಯಾಗಿದ್ದಾನೆ ಚೆನ್ನಾಗಿದ್ದಾನೆ. ಆ ಬಗ್ಗೆ ನನಗೆ ತುಂಬಾನೇ ಖುಷಿ ಇದೆ' ಎಂದು ಜಗ್ಗೇಶ್ ಹೇಳಿದ್ದಾರೆ.

ತೋತಾಪುರಿಯ ಮತ್ತೊಂದು ವೀಡಿಯೋ ರಿವೀಲ್: ಏನಿದು ಅಸಲಿ ಕತೆ?

'ನಟನೆ ನನ್ನಿಂದ ಎಲ್ಲವನ್ನು ಕಿತ್ತುಕೊಂಡರೂ ತೊಂದರೆ ಇಲ್ಲ ಆದರೆ ರಾಯರು ದೂರವಾದರೆ ನನ್ನ ಸಾವಾಗಲಿ. ನಾನು ಶೂದ್ರನಾದರೂ ನನ್ನನ್ನು ಬೃಂದಾವನದ ಮುಂದೆ ಕೂರಸ್ತಾರೆ ಅಲ್ಲಿ ವಿಷ್ಣುಸಹಸ್ರನಾಮ ಓದಿ ನನ್ನ ಎಲ್ಲ ಪೂಜೆ ಮುಗಿಸಿ ಬರುತ್ತೇನೆ ಅದು ನಮ್ಮ ಮಠ.  ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತಿ ವರ್ಷ ಗಣಪತಿ ಪೂಜೆ ಮಾಡ್ತಾರೆ ಅವರಿಗೆ ಮನಸ್ಸು ವಿಶಾಲವಾಗಿದೆ, ಈ ಧರ್ಮದವರು ಆ ಧರ್ಮದವರಿಗೆಎ ಬೈತಾರೆ ಆ ಧರ್ಮದವರು ಈ ಧರ್ಮಮದವರಿಗೆ ಬೈತಾರೆ' ಎಂದಿದ್ದಾರೆ ಜಗ್ಗೇಶ್.

ಸಿನಿಮಾ ಬಗ್ಗೆ:

'25 ಲಕ್ಷ ಕೊಟ್ಟರೆ ನಮ್ಮ ಸಿನಿಮಾಗಳ ಬಗ್ಗೆ ರಿವ್ಯೂ ಮಾಡುವ ಆಪ್‌ಗಳು ಇದೆ. ನಮ್ಮ ನಿರ್ಮಾಪಕರನ್ನು ಆ ಆಪ್‌ನವರು ಮೀಟ್ ಮಾಡಿದ್ದಾರೆ. ಆದರೆ ಇದಕ್ಕೆಲ್ಲ ನಾವು ಉತ್ತೇಜನ ಕೊಡುವುದಿಲ್ಲ. ಜನರು ನಮ್ಮ ತೋತಾಪುರಿ ಸಿನಿಮಾವನ್ನು ಮೆಚ್ಚಿದರೆ ಸಾಕು ಡೋಂಗಿ ಮಾಡದೆ ಡುದ್ದು ಕೊಟ್ಟು ನಮ್ಮ ಸಿನಿಮಾವನ್ನು ನೋಡುತ್ತಾರೆ ಎಂದು ನಾನು ಇದೆಲ್ಲ ಬೇಡ ಅಂತ ಹೇಳಿದೆ. ನಮ್ಮ ಸಿನಿಮಾ ಗಜಗಾಂಭೀರ್ಯದಿಂದ ಥಿಯೇಟರ್‌ನಲ್ಲಿ ನಡೆಯುತ್ತಿದೆ. ವಾವಮಾರ್ಗಗಳ ನೂರು ಆಟ ಗೊತ್ತು ನನಗೆ ಆದರೆ ನಾನು ಅದನ್ನೆಲ್ಲ ಮಾಡಲು ಹೋಗೋದಿಲ್ಲ. ಇವತ್ತು ತಮಿಳು ಸಿನಿಮಾ ಕನ್ನಡಕ್ಕಿಂತ ಹೆಚ್ಚು ಕಲೆಕ್ಷನ್ ಮಾಡುತಿದೆ. ಯಾಕೆಂದರೆ ಅಲ್ಲಿ ರಜನಿಕಾಂತ್ ಇದ್ದಾರೆ ತುಂಬಾ ಚೆನ್ನಾಗಿ ಅವರು ಪ್ರಚಾರ ಮಾಡಿದ್ದಾರೆ. ಕನ್ನಡದವರಿಗೆ ನಾಚಿಗೆ ಆಗಬೇಕು ಪರಸ್ಪರ ಪ್ರೀಸಿದಾಗ ಮಾತ್ರ ನಮ್ಮ ಚಿತ್ರರಂಗ ಬೆಳೆಯುತ್ತದೆ' ಎಂದು ಹೇಳಿದ್ದಾರೆ.

Follow Us:
Download App:
  • android
  • ios