ನಟ ಜಗ್ಗೇಶ್ ಪುತ್ರ ಆಸ್ಪತ್ರೆಗೆ ದಾಖಲು; ಸೊಳ್ಳೆ ಬ್ಯಾಟ್ ಹಿಡಿದಿರುವ ವಿಡಿಯೋ ವೈರಲ್!
ತೀವ್ರ ಜ್ವರದಿಂದ ನಟ ಯತಿರಾಜ್ ಜಗ್ಗೇಶ್ ಆಸ್ಪತ್ರೆಗೆ ದಾಖಲು. ಅಂಕಲ್‌ನ ಹೊಡಿತೀನಿ ಸುಬ್ಬಿ ಎಂದಿರುವ ವಿಡಿಯೋ ವೈರಲ್...

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ದ್ವಿತಿಯ ಪುತ್ರ ಯತಿರಾಜ್ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸ್ವತಃ ಯತಿರಾಜ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟ ಎಲ್ಲರಿಗೂ ಡೆಂಗ್ಯೂ ಜ್ವರದಿಂದ ಎಚ್ಚರ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.
'ನಿಮಗೆ ಜ್ವರ ಇದ್ದರೆ ಪ್ಲೀಸ್ ಚೆಕ್ ಫಾರ್ ಡೆಂಗ್ಯೂ. ಸುರಕ್ಷಿತವಾಗಿರಿ' ಎಂದು ಯತಿರಾಜ್ ಜಗ್ಗೇಶ್ ವಿಡಿಯೋಗೆ ಕ್ಯಾಪ್ಶನ್ ಬರೆದಿದ್ದಾರೆ. ನಿವಾಸದಲ್ಲಿ ಯತಿರಾಜ್ ತಮ್ಮ ಮುದ್ದಾದ ಶ್ವಾನದ ಜೊತೆ ಸೋಫಾ ಮೇಲೆ ಕುಳಿತುಕೊಂಡು ಸೊಳ್ಳೆ ಬ್ಯಾಟ್ ಹಿಡಿದು ಅಕ್ಕ ಪಕ್ಕ ಇರುವ ಸೊಳ್ಳೆಗಳನ್ನು ಹೊಡೆದು ಸಾಯಿಸುತ್ತಿದ್ದಾರೆ. ಇದಾದ ಮೇಲೆ ಸೊಳ್ಳೆ ಫೋಟೋ ಹಾಕಿ ಡಾಲಿ ಧನಂಜಯ್ ಸೂಪರ್ ಹಿಟ್ ಡೈಲಾಗ್ 'ಅಂಕಲ್‌ನ ಹೊಡಿತೀನಿ ಸುಬ್ಬಿ' ಸೇರಿಸಿದ್ದಾರೆ. ಇದಾದ ಮೇಲೆ ಆಸ್ಪತ್ರೆಯಲ್ಲಿ ಯತಿರಾಜ್ ದಾಖಲಾಗಿದ್ದು ಡ್ರಿಪ್ಸ್ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಮತ್ತೊಮ್ಮೆ ಕೊನೆಯಲ್ಲಿ avoid dengue stay safe ಅನ್ನೋ ಫೋಟೋ ಸೇರಿಸಿದ್ದಾರೆ.
ಸೀರೆಯಲ್ಲಿ ಎಷ್ಟು ಸೌಂದರ್ಯ ಇದೆ ಅಂತ ಅಶ್ವಿನಿ ಮೇಡಂ ನೋಡಿ ಅನ್ಸುತ್ತೆ; ನೆಟ್ಟಿಗರಿಂದ ಮೆಚ್ಚುಗೆ
ಆದಷ್ಟು ಬೇಗ ಗುಣಮುಖರಾಗಿ ಬನ್ನಿ, ನನಗೂ 10 ದಿನಗಳ ಹಿಂದೆ ಡೆಂಗ್ಯೂ ಬಂದಿತ್ತು, ಚೆನ್ನಾಗಿ ರೆಸ್ಟ್ ಮಾಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇಷ್ಟು ದೊಡ್ಡ ವಿಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತಮ್ಮ ಉದಾಹರಣೆ ಕೊಟ್ಟು ಎಚ್ಚರಿಗೆ ನೀಡಿದ್ದಾರೆ.
ಸುದೀಪ್ ಸರ್ ಹೇಳ್ದಂಗೆ ನಡೆಯಲ್ವಾ?; ಕರೆದು ರಿಜೆಕ್ಟ್ ಮಾಡಿದ್ದಲ್ಲದೇ ಟೆಲಿಕಾಸ್ಟ್ ಮಾಡಿದ್ದರು: ಚಿತ್ರಾಲ್ ರಂಗಸ್ವಾಮಿ
ಯತಿರಾಜ್ 2016ರಲ್ಲಿ ತರ್ಲೆ ನನ್ನ ಮಕ್ಕಳು ಸಿನಿಮಾದಲ್ಲಿ ನಟಿಸಿದ್ದರು. ಇದಾದ ಮೇಲೆ 2001ರಲ್ಲಿ ಜಿಪುಣ ನನ್ನ ಗಂಡ ಮತ್ತು 2019ರಲ್ಲಿ ಗೋಸಿ ಗ್ಯಾಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲನಟನಾಗಿ ತಂದೆಯ ಸಾಕಷ್ಟು ಸಿನಿಮಾಗಳಲ್ಲಿ ಯತಿ ಅಭಿನಯಿಸಿ ಚಿಕ್ಕ ವಯಸ್ಸಿನಲ್ಲೇ ಅಭಿಮಾನಿಗಳನ್ನು ಗಳಿಸಿದ್ದರು.