Asianet Suvarna News Asianet Suvarna News

ಸುದೀಪ್ ಸರ್ ಹೇಳ್ದಂಗೆ ನಡೆಯಲ್ವಾ?; ಕರೆದು ರಿಜೆಕ್ಟ್‌ ಮಾಡಿದ್ದಲ್ಲದೇ ಟೆಲಿಕಾಸ್ಟ್ ಮಾಡಿದ್ದರು: ಚಿತ್ರಾಲ್ ರಂಗಸ್ವಾಮಿ

ವೇದಿಕೆ ಮೇಲೆ ಕರೆಸಿ ಸರಿಯಾಗಿ ಮಾತನಾಡಿಸದೇ ರಿಜೆಕ್ಟ್ ಮಾಡಿದ್ದು ಬೇಕೆಂದು ಮಾಡಿದಂತೆ ಇತ್ತು ಎಂದು ಬೇಸರ ವ್ಯಕ್ತ ಪಡಿಸಿದ ಚಿತ್ರಾಲ್.
 

Kannada actress Chitral Rangaswamy upset with bigg boss and sudeep for rejecting on stage BBK10 vcs
Author
First Published Oct 16, 2023, 11:56 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಲು ಚಿತ್ರಾಲ್ ರಂಗಸ್ವಾಮಿ ಆಯ್ಕೆ ಆಗಿದ್ದರು. ಹೊಸ ರೀತಿಯಲ್ಲಿ ವೋಟಿಂಗ್ ನಡೆಯುತ್ತಿದೆ ಎಂದು ವೇದಿಕೆ ಮೇಲೆ ಕರೆಸಿ ಕಡಿಮೆ ವೋಟ್‌ ಬಂದಿದೆ ಎಂದು ರಿಜೆಕ್ಟ್‌ ಮಾಡಿ ವಾಪಸ್ ಕಳುಹಿಸಿದ್ದರು. ಇದರಿಂದ ಬೇಸರಗೊಂಡ ಚಿತ್ರಾಲ್ ತಮ್ಮ ನೋವು ಹಂಚಿಕೊಂಡಿದ್ದಾರೆ.

'ನಾಲ್ಕು ವಾರ ಲಗೇಜ್ ಪ್ಯಾಕ್ ಮಾಡಿಕೊಂಡಿದ್ದೇ ನಮ್ದೇ ಒಂದಿಷ್ಟು ದುಡ್ಡು ಖರ್ಚಾಗಿರುತ್ತದೆ. ಅಲ್ಲಿಂದ ಬಂದ್ಮೇಲೆ ಎಲ್ಲರೂ ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗಲ್ಲ. 40% ಬಂದವರು ಮನೆ ಪ್ರವೇಶ ಮಾಡಿದ್ದಾರೆ ನನಗೆ 38% ಬಂದಿದ್ದು..ಎರಡು ಪರ್ಸೆಂಟ್ ಅಷ್ಟು ದೊಡ್ಡ ವ್ಯತ್ಯಾಸ ಮಾಡುತ್ತೆ ಅಂತ ಗೊತ್ತಿರಲಿಲ್ಲ. ಬೆಳಗ್ಗೆವರೆಗೂ ವಿಡಿಯೋ ಮಾಡಿ ಮನೆಯವರನ್ನು ಸೇರಿಸಿಕೊಂಡು ಕೊನೆಯಲ್ಲಿ ಹೀಗೆ ಮಾಡಿದ್ದು ಬೇಸರ ಅಯ್ತು. ನನಗೆ ಸ್ಟ್ರಾಂಗ್ ಮೈಂಡ್ ಇದೆ ಆದರೆ ಮನೆಯವರಿಗೆ ಆರಾಮ್ ಆಗಿ ಎಂದು ಹೇಳಲು ಆಗಲ್ಲ. ತಾಯಿಗೆ ಡಯಾಬಿಟಿಕ್ಸ್‌ ಇರುವುದರಿಂದ ಅವರ ಮುಂದೆ ನನ್ನ ನೋವು ಹೇಳಿಕೊಳ್ಳುವುದಿಲ್ಲ. ಖಂಡಿತಾ ಸುದೀಪ್‌ ಸರ್‌ಗೆ ಇದೆಲ್ಲಾ ಗೊತ್ತಿರುವುದಿಲ್ಲ. ಸುದೀಪ್‌ ಸರ್‌ಗೆ ಈ ಆಗುತ್ತಿರುವುದು ಗೊತ್ತಿರುವುದಿಲ್ಲ, ಗೊತ್ತಿದ್ದರೆ ಖಂಡಿತಾ ಆರ್ಟಿಸ್ಟ್‌ಗಳಿಗೆ  ನೋವಾಗಲು ಅಥವಾ ಮೋಸವಾಗಲು ಬಿಡುತ್ತಿರಲಿಲ್ಲ.  ಸುದೀಪ್‌ ಸರ್‌ದು ಏನೂ ನಡೆಯಲ್ವಾ ಶೋನಲ್ಲಿ ಅಂತ ನನಗೆ ಗೊತ್ತಿಲ್ಲ ಆದರೆ ಈ ರೀತಿ ಆಗಿದೆ ಎಂದು ಗೊತ್ತಾದರೆ ಸುದೀಪ್ ಸರ್ ಖಂಡಿತಾ ಆಕ್ಷನ್ ತೆಗೆದುಕೊಳ್ಳುತ್ತಿದ್ದರು.'ಎಂದು ಚಿತ್ರಾಲ್ ಕನ್ನಡ ಖಾಸಗಿ ಟಿವಿಯಲ್ಲಿ ಮಾತನಾಡಿದ್ದಾರೆ.

ಇದು ಶರ್ಟಾ ಸ್ವೆಟ್ರಾ?; ಹೋಟೆಲ್‌ ವೇಟರ್‌ ತರ ಕಾಣಿಸುತ್ತಿರುವೆ ಎಂದು 'ಲಕ್ಷಣ' ಕಾಲೆಳೆದ ನೆಟ್ಟಿಗರು!

'ರಿಜೆಕ್ಟ್ ಮಾಡಲು ನನ್ನನ್ನು ಕರೆದುಕೊಂಡ್ರಾ? ಸುದೀಪ್ ಸರ್ ಎಲ್ಲರ ಪೋಷಕರನ್ನು ಮಾತನಾಡಿಸಿದರು ನನ್ನ ತಾಯಿ ಅವರನ್ನು ಮಾತನಾಡಿಸಿಲ್ಲ, ವೇದಿಕೆ ಮೇಲೆ ನನಗೆ ಡಿಟೇಲ್ ಆಗಿ ಪ್ರಶ್ನೆ ಕೇಳಿಲ್ಲ ಆಮೇಲೆ ವಿಡಿಯೋ ಹಂಗಿತ್ತು ಎಲ್ಲನೂ ಪ್ರಶ್ನೆಯಾಗಿ ಉಳಿದುಕೊಂಡಿದೆ. ರಿಜೆಕ್ಟ್‌ ಆದ ಮೇಲೆ ನಾನು ಕ್ಯಾರವಾನ್‌ನಲ್ಲಿ ಕುಳಿತುಕೊಂಡಿದ್ದೆ ಆಗಲೂ ಏನೋ ಟ್ವಿಸ್ಟ್‌ ಇದೆ ಅನ್ನೋ ರೀತಿಯಲ್ಲಿ ಯೋಚನೆ ಮಾಡುತ್ತಿದ್ದೆ. ಮತ್ತೆ ಕರೆಯುತ್ತಾರೆ ಮತ್ತೆ ಏನೋ ಹೇಳುತ್ತಾರೆ ಅಂದುಕೊಂಡಿದ್ದೆ. ಎಲ್ಲಾದಕ್ಕಿಂತ ಹೆಚ್ಚಾಗಿ ರಿಜೆಕ್ಟ್ ಆಗಿರುವುದನ್ನು ಟಿವಿಯಲ್ಲಿ ತೋರಿಸಿದರು ಅದನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ತುಂಬಾ ರಿಜೆಕ್ಟ್‌ ಆಗಿದ್ದೀನಿ ಸೀರಿಯಲ್‌ ಮಾಡಿ ಅದೆಷ್ಟೋ ವರ್ಷಗಳು ಕಳೆದಿದೆ. ಒಂದು ಆಡಿಷನ್‌ಗೆ 700 ರೂ ಚರ್ಚು ಆಗುತ್ತದೆ ತಿಂಗಳಿನಲ್ಲಿ ಅದೇ ನನಗೆ 7000 ಸಾವಿರ ಖರ್ಚು ಆಗುತ್ತದೆ. ನನಗೆ ಸೀರಿಯಲ್ ಊಟ ಹಾಕುತ್ತಿಲ್ಲ ಸಣ್ಣ ಪುಟ್ಟ ಮೇಕಪ್ ಆರ್ಟಿಸ್ಟ್‌ಗಳು ಸಣ್ಣ ಪುಟ್ಟ ಬ್ರ್ಯಾಂಡ್‌ಗಳು ಮತ್ತು ಅಲ್ಲಿ ಇಲ್ಲಿ ವಾಯ್ಸ್‌ ಓವರ್‌ಗಳು' ಎಂದು ಚಿತ್ರಾಲ್ ಹೇಳಿದ್ದಾರೆ.

Follow Us:
Download App:
  • android
  • ios