Puneeth Rajkumar ಜೊತೆಗಿನ ಕೊನೆ ಕ್ಷಣದ ವಿಡಿಯೋ ಹಂಚಿಕೊಂಡ ನಟ ಜಗ್ಗೇಶ್!

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ 'ರಾಘವೇಂದ್ರ ಸ್ಟೋರ್ಸ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಜಗ್ಗೇಶ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಗೆ ಕಳೆದ ಕೊನೆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. 

Kannada Actor Jaggesh Shared Last Minute Video with Puneeth Rajkumar gvd

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ (Jaggesh) 'ರಾಘವೇಂದ್ರ ಸ್ಟೋರ್ಸ್' (Raghavendra Stores) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಜಗ್ಗೇಶ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಜೊತೆಗೆ ಕಳೆದ ಕೊನೆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ವಿಡಿಯೊವೊಂದನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.

'ಮಂತ್ರಾಲಯದಲ್ಲಿ 2021ರ ಏಪ್ರಿಲ್ 5ರ ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವೀಡಿಯೋ ಕಳಿಸಿದ ಮಂತ್ರಾಲಯ ಪ್ರೋ. ನರಸಿಂಹಾಚಾರ್ಯ ಅವರಿಗೆ ಧನ್ಯವಾದ. ಪುನೀತ ಅಲ್ಲೆ ರಾಯರ ಜೊತೆ ಉಳಿದುಬಿಟ್ಟ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇನ್ನು ನಟ ಜಗ್ಗೇಶ್, ಪುನೀತ್ ರಾಜ್‌ ಕುಮಾರ್ ಅಗಲಿದಾಗಿನಿಂದಲೂ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಅವರ ಒಡನಾಟವನ್ನು ನೆನೆದು ಹಲವಾರು ಪೋಸ್ಟ್‌ಗಳನ್ನು ಮಾಡಿದ್ದಾರೆ.
 


ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ಹರಸುತ್ತಿದ್ದ: '30ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ, ಅಪ್ಪ ನನ್ನನ್ನು ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ, ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ, ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ, ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ. ಆನಂದರಾಮ ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ.

ಬ್ಯುಸಿನೆಸ್‌ಗಿಂತ ಭಾವನೆ ದೊಡ್ಡದ್ದು, ಪುನೀತ್ ರಾಜ್‌ಕುಮಾರ್ James Teaser ರಿಲೀಸ್!

ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ, ನಿನ್ನ ತಂದೆಯ ದ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ, ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯ ಭೇಟಿ ಹೇಗೆ ಮರೆಯಲಿ. ಪ್ರೀತಿಯ ಆತ್ಮವೆ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ, ನನ್ನ ಕಡೆ ಉಸಿರಿನವರೆಗು ನಿನ್ನ ನೆನಪು ಒಡನಾಟ ನನ್ನಮನದಲ್ಲಿ ಉಳಿಸಿಕೊಳ್ಳುವೆ. ನಿನ್ನ ಆತ್ಮ ಎಲ್ಲೆ ಇರಲಿ ಶಾಂತಿಯಿಂದ ಉಳಿಯಲಿ I love you ಚಿನ್ನ' ಎಂದು ಜಗ್ಗೇಶ್ ಭಾವನಾತ್ಮಕವಾಗಿ ನೋವನ್ನು ವ್ಯಕ್ತಪಡಿಸಿದ್ದರು.
 


ಎಂಥ ಸಾವು ಇದು: ನನ್ನ ಪುಟ್ಟಗ್ರಾಮಕ್ಕೆ ನೀ ಬಂದು ಸಂಭ್ರಮಿಸಿದ ದಿನ ಹೇಗೆ ಮರೆಯಲಿ! ಮಾತು ಬರದ ನನ್ನ ತಮ್ಮನ ಕಂಡು ನೀ ಮರಗಿದ್ದು ನೆನೆದು ನನ್ನಹೃದಯ ಚಿದ್ರವಾಗಿದೆ! ನೀಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ! ಕರೆ ಮಾಡಿದರೆ ಅಣ್ಣ ಎಂದು ಕರೆ ಸ್ವೀಕರಿಸುವೆ ಎನ್ನುವಂತೆ ಭಾವ! ನೀ ಇಲ್ಲಾ ಎಂದರೆ ಮನ ನಂಬುತ್ತಿಲ್ಲಾ! ಎಂಥ ಸಾವು ಇದು! ಬದುಕಲ್ಲಿ ನಾ ಪೂಜೆ ಮಾಡದ ದಿನ ಇಂದು.

ಮರಣೋತ್ತರ ಪ್ರಶಸ್ತಿ ನೀಡಿ: ಕನ್ನಡ ನಾಡು ನುಡಿಗಾಗಿ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ. ನಮ್ಮ ಪುನೀತನಿಗೆ ಮರಣೋತ್ತರ ಪ್ರಶಸ್ತಿ ನೀಡಿ ಮಾನ್ಯ ಮುಖ್ಯಮಂತ್ರಿಗಳೆ, ಕನ್ನಡಿಗರ ಪ್ರೀತಿಗೆದ್ದ ರಾಜಣ್ಣನ ಮಗನ ಆತ್ಮಕ್ಕೆ ಗೌರವಿಸಿದಂತೆ ಆಗುವುದು ಎಂದು ನನ್ನ ವಿನಂತಿ.

ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು: ಕುವೆಂಪು ಅವರನ್ನು ನೆನೆಪು ಮಾಡಿಕೊಂಡ Jaggesh

ಬದುಕು ನಶ್ವರ: ಕನ್ನಡದ ಎಲ್ಲಾ ನನ್ನ ಸಹೋದರ ಕಲಾವಿದ ಬಂಧುಗಳು ಹಾಗು ಅವರ ಅಭಿಮಾನಿಗಳಲ್ಲಿ ವಿನಂತಿ. ನಿಮ್ಮಪಾದಗಳಿಗೆ ನಮಸ್ಕರಿಸಿ ಬೇಡುವೆ pls ದಯಮಾಡಿ ದ್ವೇಷ ಮಾಡದೆ ಪರಸ್ಪರ ಅಣ್ಣ ತಮ್ಮರಂತೆ ಬಾಳಿ Folded hands ಬದುಕು ನಶ್ವರ! ಸತ್ತಮೇಲೆ ನಾವ್ಯಾರೋ? ನೀವ್ಯಾರೋ? ದೇವರು ಕರೆದರೆ ನಾವೆಲ್ಲಾ ದೇವರ ಮಕ್ಕಳು! ಬದುಕಿದ್ದಾಗ ಒಡಹುಟ್ಟಿದವರಂತೆ ಬಾಳುವ! ಪ್ರೀತಿ ಶಾಶ್ವತ!ದ್ವೇಷ ಕ್ಷಣಿಕ! 

Kannada Actor Jaggesh Shared Last Minute Video with Puneeth Rajkumar gvd

ಇನ್ನು ಪುನೀತ್‌ ರಾಜ್‌ಕುಮಾರ್ ಅವರು ನಿಧನರಾಗಿ 4 ತಿಂಗಳು ಕಳೆದಿವೆ. ಪುನೀತ್ ಅಗಲಿಕೆಯ ಅಘಾತದಿಂದ ನಾಡಿನ ಜನತೆ ಹೊರಬಂದಿಲ್ಲ. ಸದ್ಯ ಪುನೀತ್‌ ಅಭಿನಯದ ಕೊನೆಯ ಚಿತ್ರ 'ಜೇಮ್ಸ್‌' (James) ಟೀಸರ್ ಇಂದು ಬಿಡುಗಡೆಯಾಗಿದೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಒಂದು ಗುಡ್‌ ನ್ಯೂಸ್ ಸಿಕ್ಕಂತಾಗಿದೆ. 'ಜೇಮ್ಸ್‌' ಚಿತ್ರಕ್ಕೆ ನಿರ್ದೇಶಕ ಚೇತನ್‌ ಕುಮಾರ್‌ (Chetan Kumar) ಆ್ಯಕ್ಷನ್‌ ಕಟ್‌ ಹೇಳಿದ್ದು, ಕಿಶೋರ್‌ ಪತ್ತಿಕೊಂಡ (Kishore Pattikonda) ಬಂಡವಾಳ ಹೂಡಿದ್ದಾರೆ.

Latest Videos
Follow Us:
Download App:
  • android
  • ios