ಮಠ, ಎದ್ದೇಳು ಮಂಜುನಾಥ ಖ್ಯಾತಿಯ ಗುರು ಪ್ರಸಾದ್-ಜಗ್ಗೇಶ್ ಜೋಡಿ ಮತ್ತೊಮ್ಮೆ ಒಂದಾಗಿದೆ. ಇವರಿಬ್ಬರ ಕಾಂಬಿನೇಶನ್ ನಲ್ಲಿ ‘ರಂಗನಾಯಕ’ ಎನ್ನುವ ಸಿನಿಮಾವೊಂದು ಬರಲಿದೆ. 

ಚಿತ್ರದ ತಾರಾಗಣ ಚಿತ್ರದ ನಾಯಕಿ ಸೇರಿದಂತೆ ಎಲ್ಲವೂ ಇನ್ನಷ್ಟೇ ಆಯ್ಕೆ ಆಗಬೇಕಿದೆ. ಆದರೆ ಚಿತ್ರದ ಹೆಸರು ನೋಡಿದರೆ ಎಂದಿನಂತೆ ಇದು ಗುರು ಪ್ರಸಾದ್ ಸ್ಟೈಲಿನ ಸಿನಿಮಾ. ಮನೋರಂಜನೆಯೇ ಈ ಚಿತ್ರದ ಹೈಲೈಟ್ ಎಂಬುದರಲ್ಲಿ ಅನುಮಾನವಿಲ್ಲ ಎನ್ನುತ್ತಿದೆ ಚಿತ್ರತಂಡ. ರಂಗನಾಯಕ ಚಿತ್ರವನ್ನು ನಿರ್ಮಿಸುತ್ತಿರುವುದು ಎ ಆರ್ ವಿಖ್ಯಾತ್. ‘ಪುಷ್ಪಕ ವಿಮಾನ’ ಹಾಗೂ ಇನ್ನೂ ತೆರೆಗೆ ಬರಬೇಕಿರುವ ಪ್ರಜ್ವಲ್ ದೇವರಾಜ್ ನಟನೆಯ ‘ ಇನ್ಸ್ ಪೆಕ್ಟರ್ ವಿಕ್ರಮ್’ ಚಿತ್ರಗಳ ನಂತರ ವಿಖ್ಯಾತ್ ಅವರ ಸೋಲೋ ನಿರ್ಮಾಣದ ಚಿತ್ರವಿದು. 

‘ಕಾಳಿದಾಸ ಕನ್ನಡ ಮೇಷ್ಟ್ರು’ ಟೀಸರ್ ಗೆ ಸೂಪರ್ ರೆಸ್ಪಾನ್ಸ್!

‘ಗುರುಪ್ರಸಾದ್’ ಅವರು ಬಂದು ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಎನ್ನಿಸಿತು. ಈಗಾಗಲೇ ಜಗ್ಗೇಶ್ ಹಾಗೂ ಗುರು ಅವರ ಕಾಂಬಿನೇಶನ್ ನಲ್ಲಿ ಬಂದ ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಗೆದ್ದಿವೆ. ಜಗ್ಗೇಶ್ ಅವರಿಗೆ ಸೂಕ್ತವಾದ ಕಥೆಯನ್ನೇ ಮಾಡಿಕೊಂಡಿದ್ದಾರೆ. ಬಹಳ ಮಜವಾಗಿರುವ ಸಿನಿಮಾ ಇದು ಎಂದು ವಿಖ್ಯಾತ್ ಹೇಳಿದ್ದಾರೆ. 

 

ರಂಗನಾಯಕ ಚಿತ್ರದ ಟೀಸರ್ ಗಾಗಿ ಗುರುಪ್ರಸಾದ್ ಹಾಗೂ ಜಗ್ಗೇಶ್ ಬೆಳಗಿನ ಜಾವ 4 ಗಂಟೆವರೆಗೆ ಶೂಟಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯದಲ್ಲೇ ತೆರೆಗೆ ಬರಲಿದೆ.