ಡಿಸೆಂಬರ್‌ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿತಾ ಮತ್ತು ಕಿರಣ್‌ ಮುಂಬೈ ಮಾಯಾ ನಗರಿಯಲ್ಲಿ ವಾಸವಿದ್ದಾರೆ. ಕಿರಣ್ ಶ್ರೀನಿವಾಸ್‌ ಸ್ಟಾರ್‌ ಸ್ಪೂರ್ಟ್ಸ್‌ ಕನ್ನಡ ವಾಹಿನಿಯ ನಿರೂಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ತುರ್ತು ನಿಗಮ' ಚಿತ್ರ ಪ್ರಚಾರದಲ್ಲಿ ಬ್ಯುಸಿಯಾಗಿರುವ ಹಿತಾ ಗಾಡ್‌ ಆಫ್‌ ಕ್ರಿಕೆಟ್‌ ಜೊತೆ ಕಾಣಿಸಿಕೊಂಡು, ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.

ಸಪ್ತಪದಿ ತುಳಿದ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಮದುವೆ ಪೋಟೋಗಳಿವು!

ಕೆಲವು ದಿನಗಳ ಹಿಂದೆ ಹಿತಾ ಸಚಿನ್ ತೆಂಡೂಲ್ಕರ್‌ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಬರೆದುಕೊಂಡಿದ್ದಾರೆ. 'ಮುಖದಲ್ಲಿ ದೊಡ್ಡ ನಗು. ಇದಕ್ಕೆ ಕಾರಣ ನನ್ನ ಪಕ್ಕ ಇರುವ ವ್ಯಕ್ತಿ. ಟಿವಿ ಜಾಹೀರಾತಿನಲ್ಲಿ ಇವರೊಂದಿಗೆ ಕಾಣಿಸಿಕೊಂಡಿದ್ದು, ನನ್ನ ಭಾಗ್ಯ. ಇದು ಬಿಗ್ ಬಿಗ್ ಬಿಗ್ ಡೇ ' ಎಂದು ಬರೆದಿದ್ದಾರೆ. 

'ಒಂದು ವಾರದ ಮುಂಚೆಯೇ ಈ ಜಾಹೀರಾತು ಬಗ್ಗೆ ತಿಳಿಯಿತು. ಈ ದಿನಕ್ಕೆ ಕಾಯುತ್ತಿದ್ದೆ. ಸಚಿನ್ ಜೊತೆ ಸ್ಕ್ರೀನ್‌ ಹಂಚಿಕೊಂಡಿರುವುದು ನನ್ನ ಸೌಭಾಗ್ಯ,' ಎಂದು ಹಂಚಿಕೊಂಡಿದ್ದಾರೆ.

ಸಿಹಿ-ಕಹಿ ಚಂದ್ರು ಕಿರಿಯ ಪುತ್ರಿ 'ಖುಷಿ' ಹೀಗಿದ್ದಾರೆ ನೋಡಿ!

ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿಟ್ಟ ಹಿತಾ ಹಾಗೂ ಕಿರಣ್ ತಮ್ಮ ಹನಿಮೂನ್ ಫೋಟೋವೊಂದನ್ನು ಶೇರ್ ಮಾಡಿದ್ದು, ಒಬ್ಬರಿಗೊಬ್ಬರು ಒದ್ದುಕೊಂಡಂತೆ ಇತ್ತು. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. 

ಹನಿಮೂನ್‌ನಲ್ಲಿ ಗಂಡನಿಗೆ ಒದ್ದ ಸಿಹಿ-ಕಹಿ ಚಂದ್ರು ಪುತ್ರಿ?