ಸಿಂಪಲ್ ಸುನಿ 'ಸಖತ್'ನಲ್ಲಿ ಕುರುಡನಾದ ಗಣೇಶ್
ಹೀರೋ ಪಾತ್ರಕ್ಕೆ ನಿಜಕ್ಕೂ ಕಣ್ಣಿಲ್ಲವೋ ಅಥವಾ ಕಣ್ಣಿಲ್ಲದ ರೀತಿಯಲ್ಲಿ ಆತ ನಾಟಕ ಮಾಡುತ್ತಾನೋ ಎಂಬ ಕೌತುಕದ ಪ್ರಶ್ನೆಯನ್ನು ಟೀಸರ್ ಹುಟ್ಟುಹಾಕಿದೆ.
ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಸಿಂಪಲ್ ಸುನಿ (Simple Suni) ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಸಖತ್' (Sakath) ಸಿನಿಮಾದ 'ಸಖತ್ ಬಾಲು' (Sakath ) ಟೀಸರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಹೀರೋ ಪಾತ್ರಕ್ಕೆ ನಿಜಕ್ಕೂ ಕಣ್ಣಿಲ್ಲವೋ ಅಥವಾ ಕಣ್ಣಿಲ್ಲದ ರೀತಿಯಲ್ಲಿ ಆತ ನಾಟಕ ಮಾಡುತ್ತಾನೋ ಎಂಬ ಕೌತುಕದ ಪ್ರಶ್ನೆಯನ್ನು ಟೀಸರ್ (Teaser) ಹುಟ್ಟುಹಾಕಿದೆ. ಅಲ್ಲದೇ ಕಚಗುಳಿ ಇಡುವ ಡೈಲಾಗ್ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿ ಕಾಣಬಹುದಾಗಿದೆ.
'ಸಖತ್' ಸಿನಿಮಾದಲ್ಲಿ ಗಣೇಶ್ ಜೊತೆ ನಿಶ್ವಿಕಾ ನಾಯ್ಡು (Nishwika Naidu), ಸುರಭಿ (Surabhi) ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು (Rangayana Raghu), ಸಾಧು ಕೋಕಿಲ (Sadhu Kokila), ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕೆದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ತಯಾರಾಗಿದ್ದು, ನಿಶಾ ವೆಂಕಟ್ ಕೋನಂಕಿ ಮತ್ತು ಸುಪ್ರಿತ್ ಬಂಡವಾಳ ಹಾಕಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ಶಾಂತ್ ಕುಮಾರ್ ಸಂಕಲನ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ 'ಸಖತ್' ಸಿನಿಮಾಗಿದೆ.
ಇನ್ನು ಈ ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ (Vihan) ನಟಿಸುತ್ತಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ಬಾಲು ಪಾತ್ರದಲ್ಲಿ ವಿಹಾನ್ ಮಾಡುತ್ತಿದ್ದು, ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ ಎಂದು ಗಣೇಶ್ ಇತ್ತಿಚೆಗಷ್ಟೇ ಟ್ವೀಟ್ (Tweet) ಮಾಡಿದ್ದರು. ಬಾಲು & ಜ್ಯೂನಿಯರ್ ಬಾಲು (ವಿಹಾನ್) ನಿಂದ ಡಬ್ಬಿಂಗ್ ಮುಕ್ತಾಯ. ನಮ್ಮಿಬ್ಬರ ಮಾತಿನ ಪುಳಕ ಹಾಗೂ ಕಣ್ ಚಳಕ ನಿಮಗೆ ಮಕ್ಕಳ ದಿನಾಚರಣೆ (Childrens Day) ದಿನಾಂಕದ ಹತ್ತಿರ ಚಿತ್ರಮಂದಿರದಲ್ಲಿ ಕಾಣಸಿಗಲಿದೆ. ನಿಮ್ಮ ಹಾರೈಕೆಯಿರಲಿ ಎಂದು ನಟ ಗಣೇಶ್ ಹೇಳಿದ್ದರು.
'ಸಖತ್' ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಬಾಯ್ ವಿಹಾನ್
'ಸಖತ್' ಚಿತ್ರದ ಟೀಸರ್ ಬಿಡುಗಡೆ ಕುರಿತು, 'ನಮಸ್ಕಾರ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಗೌರವಾನ್ವಿತ ಜನರಿಗೆ ನನ್ನ ತುಂಬು ಪ್ರೀತಿಯ ಧನ್ಯವಾದಗಳು. ಗೌರವಾನ್ವಿತರಾದ ಶ್ರೀ ಗೋಲ್ಡನ್ ಸ್ಟಾರ್ ಗಣೇಶ್ ಅವರ ಎಲ್ಲಾ ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕವಾಗಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ನಮ್ಮ ಹೆಮ್ಮೆಯ 'ಸಖತ್' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಎಲ್ಲರೂ ಟೀಸರ್ ನೋಡಿ, ನಮ್ಮ ಚಲನಚಿತ್ರಕ್ಕೆ ಹರಸಿ ಹಾರೈಸಿ. ಚಿತ್ರವು ಇದೇ ನವೆಂಬರ್ 12 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅಮೋಘ ಶಂಭು ಹೇಳಿದ್ದಾರೆ.