Asianet Suvarna News Asianet Suvarna News

'ಸಖತ್' ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಬಾಯ್ ವಿಹಾನ್

  • ವಿಹಾನ್ ಎಂಟ್ರಿಗೆ ಕೌಂಟ್ ಡೌನ್ ಶುರು
  • ಸಖತ್ ಥ್ರಿಲ್ಲಾದ ಗೋಲ್ಡನ್ ಸ್ಟಾರ್ ಗಣೇಶ್
  • ಮಕ್ಕಳ ದಿನಾಚರಣೆಯಂದು ಚಿತ್ರ ಬಿಡುಗಡೆ
Sandalwood Golden star Ganesh son Vihan dubbed for sakkat movie dpl
Author
Bangalore, First Published Oct 17, 2021, 12:37 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ(Sandalwood) ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಪುತ್ರ ವಿಹಾನ್ (Vihan) ಮತ್ತೆ ಬಿಗ್  ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿರುವುದು ಗೊತ್ತೆ ಇದೆ. ಅಪ್ಪನ 'ಸಖತ್' (Sakkat) ಸಿನಿಮಾದಲ್ಲಿ ಬಾಲ ನಟನ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ಬಾಲು ಪಾತ್ರದಲ್ಲಿ ವಿಹಾನ್ ಮಿಂಚುತ್ತಿದ್ದು, ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ. ಮಾತಿನ ಮನೆಯಲ್ಲಿ ಮಗನ ಪಾತ್ರ ಪೋಷಣೆ ಗಮನಿಸಿದ ಗೋಲ್ಡನ್ ಸ್ಟಾರ್ ಸಖತ್ ಥ್ರಿಲ್ಲಾಗಿದ್ದಾರೆ. ಈ ಬಗ್ಗೆ ಗಣೇಶ್ ಟ್ವೀಟ್‌ವೊಂದನ್ನು (Tweet) ಹಂಚಿಕೊಂಡಿದ್ದಾರೆ.

ಬಾಲು & ಜ್ಯೂನಿಯರ್ ಬಾಲು (ವಿಹಾನ್) ನಿಂದ ಡಬ್ಬಿಂಗ್ ಮುಕ್ತಾಯ. ನಮ್ಮಿಬ್ಬರ ಮಾತಿನ ಪುಳಕ ಹಾಗೂ ಕಣ್ ಚಳಕ ನಿಮಗೆ ಮಕ್ಕಳ ದಿನಾಚರಣೆ (Childrens Day) ದಿನಾಂಕದ ಹತ್ತಿರ ಚಿತ್ರಮಂದಿರದಲ್ಲಿ ಕಾಣಸಿಗಲಿದೆ. ನಿಮ್ಮ ಹಾರೈಕೆಯಿರಲಿ ಎಂದು ನಟ ಗಣೇಶ್, ಡಬ್ಬಿಂಗ್ ಮನೆಯಲ್ಲಿನ ಫೋಟೋ ಹಂಚಿಕೊಂಡು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರವು ನವೆಂಬರ್ 14 ಮಕ್ಕಳ ದಿನಾಚರಣೆಯಂದು ಬಿಡುಗಡೆಯಾಗ್ತಿದ್ದು, ತೆರೆ ಮೇಲೆ ಮಗನನ್ನು ಕಣ್ತುಂಬಿಕೊಳ್ಳೋದಕ್ಕೆ ಗಣೇಶ್ ಕಾತುರರಾಗಿದ್ದಾರೆ. 

ನೆನಪುಗಳಾದವು ಕಂಠಪೂರ್ತಿ, ಕನಸುಗಳಾದವು ತುಂಬಾ ಜಾಸ್ತಿ.. ಮುಂಗಾರು ಮಳೆ ತಂಡ ಒಂದೇ ಕಡೆ!

ಈ ಹಿಂದೆ ಗಣೇಶ್ ಮಗನ ಸಂಭ್ರಮ ಶೂಟಿಂಗ್ ಸೆಟ್‌ನಲ್ಲಿ ನೋಡುತ್ತಿದ್ದೇನೆ. ಅವನಿಗೆ ನಟನೆ ಮೇಲೆ ತುಂಬಾ ಆಸಕ್ತಿ ಇದೆ. ದೊಡ್ಡ ಪಾತ್ರ ಆಗಿರುವುದರಿಂದ ನಾನೇ ಖುದ್ದಾಗಿ ಸೆಟ್‌ಗೆ ಕರೆದುಕೊಂಡು ಬಂದು ಚಿತ್ರೀಕರಣಕ್ಕೆ ತಯಾರಿ ಮಾಡುತ್ತಿದ್ದೇನೆ. ನಿರ್ದೇಶಕರು ದೃಶ್ಯವನ್ನು ಹೇಳುವಾಗ ಕೇಳಿಸಿಕೊಳ್ಳುವ ಅವನ ತಾಳ್ಮೆ, ಮುಗ್ಧತೆಯನ್ನು ನೋಡಿ ಖುಷಿ ಆಗುತ್ತಿದೆ. ಎಂದು ತಿಳಿಸಿದ್ದರು. ಇನ್ನು ಗಣೇಶ್ ಪುತ್ರಿ ಚಾರಿತ್ರ್ಯ (Charitrya) ಕೂಡಾ 'ಚಮಕ್' (Chamak) ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು. ಹಾಗೂ 'ಗೀತಾ' (Geeta) ಚಿತ್ರದಲ್ಲಿ ವಿಹಾನ್ ನಟಿಸಿ ಆ ಚಿತ್ರಕ್ಕೂ ಸ್ವತಃ ಡಬ್ಬಿಂಗ್ ಮಾಡಿದ್ದರು. 

'ಚಮಕ್' ನಂತರ ಸಿಂಪಲ್ ಸುನಿ (Simple Suni) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ಒಂದಾಗಿದ್ದು, 'ಸಖತ್' ಸಿನಿಮಾದ ಮೂಲಕ ಮೋಡಿ ಮಾಡೋದಕ್ಕೆ ಹೊರಟಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಅವರು ಕಣ್ಣು ಕಾಣದ ವ್ಯಕ್ತಿ (Blind) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು (Nishvika Naidu) ನಟಿಸಿದ್ದಾರೆ. ಜಯಂತ್ ಕಾಯ್ಕಣಿ‌ ಸಾಹಿತ್ಯ ಹೊಸೆದಿರುವ 'ಪ್ರೇಮಕ್ಕೆ ಕಣ್ಣಿಲ್ಲ' ರೊಮ್ಯಾಂಟಿಕ್ ಹಾಡು ಈಗಾಗಲೇ ಮಿಲಿಯನ್ ಮಂದಿಯ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Follow Us:
Download App:
  • android
  • ios