Asianet Suvarna News Asianet Suvarna News

ಒಳ್ಳೆಯ ಸಾವು ಕೊಡಪ್ಪ ದೇವರೇ; 3 ವರ ಬೇಡಿದ ದ್ವಾರಕೀಶ್ ಮಾತುಗಳು ವೈರಲ್

ನಟ ದ್ವಾರಕೀಶ್‌ ಹಲವು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ದೇವರಲ್ಲಿ ಬೇಡುವ 3 ವರ ಯಾವುದು ಗೊತ್ತಾ? 

Kannada actor Dwarakish 3 wishes to god in old interview goes viral vcs
Author
First Published Apr 17, 2024, 11:26 AM IST

ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸ್ವಗೃಹದಲ್ಲಿ ನಿಧನರಾಗಿರುವ ದ್ವಾರಕೀಶ್ ಅದೇ ಗೃಹ ಕೆಲವು ವರ್ಷಗಳ ಹಿಂದೆ ನೀಡಿದ ಸಂದರ್ಶನದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. 

ಸಿನಿಮಾ ಜರ್ನಿ ಹೇಗಿತ್ತು, ಮಕ್ಕಳು-ಮೊಮ್ಮಕ್ಕಳು ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಜೀವನ ಹೇಗಿದೆ? ಆರೋಗ್ಯ ಹೇಗಿದೆ ಎಂದು ತುಂಬಾ ಕ್ಯಾಶುಯಲ್ ಆಗಿ ಮಾತನಾಡಿರುವ ಸಂದರ್ಶನದಲ್ಲಿ ನಿರೂಪಕ ಕೇಳಿದ ಪ್ರಶ್ನೆ 'ಭಗವಂತ ದ್ವಾರಕೀಶ್ ಅವರ ಮುಂದೆ ನಿಂತುಕೊಳ್ಳುತ್ತಾರೆ, ಏನು ಬೇಕು ಎಂದು ಕೇಳಿದರೆ ಏನು ಕೇಳುತ್ತೀರಿ?'. ಇದ್ದಕ್ಕೆ ಕೊಟ್ಟ ಉತ್ತರ ಇಲ್ಲಿದೆ.

ಹುಣಸೂರು ದ್ವಾರಕೀಶ್ ಚುನಾವಣಾ ನಂಟು

'ನಾನು ಹೇಳುವ ಉತ್ತರ ಆಶ್ಚರ್ಯ ಆಗುತ್ತೆ ನಿಮಗೆ. ಯಾರಿಗೂ ತೊಂದರೆ ಕೊಡದೆ ನೆಮ್ಮದಿಯಾಗಿ ಹೋಗಬೇಕು ಅನ್ನೋದು ಅವನ ಅಭಿಲಾಷೆ. ಹೇಗೆ ಮನೆ ಮಾಡಬೇಕು, ಕಾರು ಖರೀದಿಸಬೇಕು ಮತ್ತು ಬಂಗಲೇ ಕಟ್ಟಬೇಕು ಅಂತ ಆಸೆ ಕಟ್ಟಿಕೊಂಡಿರುತ್ತಾನೆ ಅದೇ ತರ ಒಳ್ಳೆಯ ಸಾವು ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ನಾನು ಕೂಡ ಅದನ್ನು ಕೇಳುತ್ತೀನಿ. ನನ್ನ ಮಗ ಸಿನಿಮಾ ಮಾಡುತ್ತಿದ್ದಾನೆ ಅವನಿಗೆ ಯಶಸ್ಸು ಕೊಡಲಿ ದೇವರು ಅವನಿಗೆ ಒಳ್ಳೆಯದು ಮಾಡಿ ಆಶೀರ್ವಾದ ಮಾಡಲಿ ದೇವರು ಅಂತ ಕೇಳಿಕೊಳ್ಳುತ್ತೀನಿ. ಇರೋವರೆಗೂ ಒಳ್ಳೆ ಅರೋಗ್ಯ ಕೊಡು ಅಂತ ದೇವರಲ್ಲಿ ಕೇಳಿಕೊಳ್ಳುತ್ತೀನಿ. ಈ ಮೂರನ್ನು ಕೇಳಿಕೊಳ್ಳುವುದು ಎಂದು ದ್ವಾರಕೀಶ್ ಹೇಳಿದ್ದಾರೆ.

 

ವಿಷ್ಣುವರ್ಧನ್‌ ಜೊತೆಗೆ ಬಿರುಕು ಮೂಡಿದ್ಯಾಕೆ? ದಾದಾ ಬಗ್ಗೆ ದ್ವಾರಕೀಶ್ ನಿಜವಾಗ್ಲೂ ಆ ಮಾತು ಹೇಳಿದ್ರಾ!

ಡಾ, ರಾಜ್‌ಕುಮಾರ್ ಕಟ್ಟಾಭಿಮಾನಿ ಆಗಿದ್ದ ದ್ವಾರಕೀಶ್ ತಮ್ಮ ಆರಂಭದ ಚಿತ್ರಗಳಲ್ಲಿ ರಾಜ್‌ಕುಮಾರ್ ಫೋಟೋ, ಸಂಭಾಷಣೆ ಕೂಡ ಬಳಸುತ್ತಿದ್ದರು. ಚಿತ್ರರಂಗದ ಬಹುತೇಕ ನಟರ ಜತೆ ಏಕವಚನದಲ್ಲಿ ಮಾತಾಡುವ ಸಲಿಗೆ ಹೊಂದಿದ್ದರು. ಪತ್ರಕರ್ತರ ಜತೆಗೂ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದ ದ್ವಾರಕೀಶ್, ಚಿತ್ರರಂಗದ ರಹಸ್ಯಗಳನ್ನು ಕೂಡ ಆಗಾಗ ಹೇಳುತ್ತಿದ್ದರು.ಸಾಹಸ, ದಿಟ್ಟತನ, ಹಠಮಾರಿತನ, ಪ್ರತಿಭೆ ಇವೆಲ್ಲದರ ಸಂಗಮದಂತೆ ಇದ್ದವರು ದ್ವಾರಕೀಶ್. ಅವರು ತನ್ನನ್ನು ಕರ್ನಾಟಕದ ಕುಳ್ಳ ಅಂತಲೇ ಕರೆದುಕೊಳ್ಳುತ್ತಿದ್ದರು. ಆದರೆ ಎಲ್ಲರಿಗಿಂತ ಎತ್ತರಕ್ಕೆ ಬೆಳೆದು ನಿಂತರು. ಮಹಾನ್ ನಟರ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಕನ್ನಡ ಚಿತ್ರರಂಗದ ಸಾಧ್ಯತೆಗಳನ್ನು ತೋರಿಸಿದರು. 

Follow Us:
Download App:
  • android
  • ios