ಹುಣಸೂರು ದ್ವಾರಕೀಶ್ ಚುನಾವಣಾ ನಂಟು
ವಿಜಯ ಸಂಕೇಶ್ವರ್ ಅವರು 2004 ರಲ್ಲಿ ಕನ್ನಡನಾಡು ಪಕ್ಷ ಕಟ್ಟಿ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದರಂತೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಹಲವಾರು ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಹುಣಸೂರಿನಿಂದ ದ್ವಾರಕೀಶ್ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿದ್ದರು.
ಅಂಶಿ ಪ್ರಸನ್ನಕುಮಾರ್
ಮೈಸೂರು(ಏ.17): ದ್ವಾರಕೀಶ್ ಮೈಸೂರು ಜಿಲ್ಲೆಯ ಹುಣಸೂರಿನವರು. 2004 ರಲ್ಲಿ ಕನ್ನಡನಾಡು ಪಕ್ಷದಿಂದ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಿಜಯ ಸಂಕೇಶ್ವರ್ ಅವರು 2004 ರಲ್ಲಿ ಕನ್ನಡನಾಡು ಪಕ್ಷ ಕಟ್ಟಿ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದರಂತೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಹಲವಾರು ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಹುಣಸೂರಿನಿಂದ ದ್ವಾರಕೀಶ್ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿದ್ದರು.
1,36,054 ಸ್ವೀಕೃತ ಮತಗಳ ಪೈಕಿ 60,258 ಮತಗಳನ್ನು ಪಡೆದ ಜೆಡಿಎಸ್ಸಿನ ಜಿ.ಟಿ. ದೇವೇಗೌಡರು ಜಯ ಗಳಿಸಿದರು. ಕಾಂಗ್ರೆಸ್ಸಿನ ಎಸ್. ಚಿಕ್ಕಮಾದು- 46,126, ಬಿಜೆಪಿಯ ಬಿ.ಎಸ್. ಮರಿಲಿಂಗಯ್ಯ- 19,967, ಪಕ್ಷೇತರರಾದ ಹೊಸೂರು ಕುಮಾರ್- 4,272, ಕನ್ನಡನಾಡು ಪಕ್ಷದ ಬಿ.ಎಸ್. ದ್ವಾರಕೀಶ್- 2,265, ಜನತಾಪಕ್ಷದ ಪಿ. ಮಹದೇವ- 1,876, ಅರಸು ಸಂಯುಕ್ತ ಪಕ್ಷದ ವಿ. ಪಾಪಣ್ಣ- 651 (ಕಣದಿಂದ ನಿವೃತ್ತರಾಗಿದ್ದರು), ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜೇಗೌಡ- 639 ಮತ ಗಳಿಸಿದ್ದರು.
ನಟನೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ಗೆದ್ದು ಬೀಗಿದ ಪ್ರಚಂಡ ಕುಳ್ಳ
ದ್ವಾರಕೀಶ್ ಅವರು ಐದನೇ ಸ್ಥಾನಕ್ಕೆ ಹೋಗಿ, ಠೇವಣಿ ನಷ್ಟವಾಗಿದ್ದರಿಂದ ಮತ್ತೆಂದು ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.