ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವಾಗ ದಿಗಂತ್ ನೀಡಿದ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ರಮ್ಯಾ ಏನ್ ತಪ್ಪು ಮಾಡಿದ್ದಾರೆ?

ಕನ್ನಡ ಚಿತ್ರರಂಗದ ದೂದ್ ಪೇಡಾ ದಿಗಂತ್ ಇತ್ತೀಚಿನ ದಿನಗಳಲ್ಲಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿರುವ ಶೈಲಿ ತುಂಬಾನೇ ಬದಲಾಗಿದೆ. ದಿ ಜಡ್ಜ್‌ಮೆಂಟ್‌ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ದಿಗಂತ್ ಈಗ ರಮ್ಯಾ ವಿರುದ್ಧ ಕೇಸ್ ಹಾಕಲು ಮುಂದಾಗಿದ್ದಾರೆ. ಬೀವು ಲಾಯರ್ ಅಥವಾ ಜಡ್ಜ್‌ ಆದರೆ ಯಾವ ಮೇಲೆ ಕೇಸ್ ಹಾಕುತ್ತೀರಾ ಹಾಗೂ ಏನೆಂದು ಹಾಕುತ್ತೀರಾ ಎಂದು ನಿರೂಪಕ ಗೌರೀಶ್ ಅಕ್ಕಿ ಪ್ರಶ್ನಿಸಿದಾಗ ದಿಗ್ಗಿ ಕೊಟ್ಟ ಉತ್ತರ ವೈರಲ್.....

'ನಿಜ ಜೀವನದಲ್ಲಿ ನಾನು ಲಾಯಲ್ ಆಗಿದ್ದರೆ ನಾನು ರಮ್ಯಾ ಅವರನ್ನು ಕರೆದು ಕೇಳುತ್ತೇನೆ ಯಾಕೆ ನೀವು ಕಾಂಗ್ರೆಸ್‌ ಪಾರ್ಟಿಯಿಂದ ಹೊರ ಬಂದ್ರಿ ಅಂತ. ಅವರು ಇನ್ಫೋರ್ಮೆಷನ್‌ ಹೆಡ್‌ ಏನೋ ಆಗಿದ್ದರಂತಲ್ಲ. ಅನದನು ಯಾಕೆ ಬಿಟ್ಟು ಬಂದ್ರಿ ಅಂತ. ಜನಕ್ಕೆ ಹೋಪ್ಸ್‌ ಇತ್ತಲ್ಲ. ರಮ್ಯಾ ಅವರು ಏನೋ ಬದಲಾವಣೆ ಮಾಡುತ್ತಾರೆ ಅಂತ ಜನರು ಅಂದುಕೊಂಡಿದ್ದರು ಎಂದು ದಿಗಂತ್ ಹೇಳಿದ್ದಾರೆ. ಇದು ತಮಾಷೆಯ ಸಂದರ್ಶನ ಆಗಿದ್ದು ಅನೇಕರು ಸೀರಿಯಲ್‌ ಕೇಸ್‌ ಎಂದುಕೊಂಡಿದ್ದಾರೆ.

Ravichandran Judgment: ಕಾನೂನು ವಿಚಾರಗಳನ್ನಿಟ್ಟುಕೊಂಡು ಹೆಣೆದ ಕುತೂಹಲಕರ ಥ್ರಿಲ್ಲರ್‌

ರಮ್ಯಾ ಜೊತೆ ಎರಡು ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವೆ. ಒಂದು ಮೀರಾ ಮಾಧವ ರಾಘವ ಅಂತ ಸಿನಿಮಾ, ಕೋರ್ಟ್‌ ರೂಮ್ ಡ್ರಾಮಾ ಕಿಂಗ್ ಟಿ ಎಸ್‌ ಸೀತಾರಾಮ್‌ ನಿರ್ದೇಶನದಲ್ಲಿ ಆ ಸಿನಿಮಾ ಮಾಡಿದ್ವಿ. ಆ ಮೇಲೆ ಮತ್ತೆ ನಾಗರಹಾವು ಸಿನಿಮಾ ಒಟ್ಟಿಗೆ ಮಾಡಿದ್ವಿ ಎಂದಿ ದಿಗಂತ್ ಹೇಳಿದ್ದಾರೆ.

ಯುವ ಜನರಿಗೆ ಮಾದರಿಯಾಗಬೇಕಿದ್ದ ಮಾಜಿ ಸಂಸದೆ ನಟಿ ರಮ್ಯಾ ಜವಾಬ್ದಾರಿ ಮರೆತುಬಿಟ್ಟರೇ?

ದಿ ಜಡ್ಜ್‌ಮೆಂಟ್‌ ಚಿತ್ರವನ್ನು ಗುರುರಾಜ್‌ ಕುಲರ್ಕಣಿ ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಇನ್ನು ಚಿತ್ರದಲ್ಲಿ ದಿಗಂತ್‌ ಜೊತೆ ಧನ್ಯಾ ರಾಮ್‌ಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮಿ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾ ಬಳಗವಿದೆ.