ಕಾನೂನಿನ ಅಗಾಧ ಸಾಧ್ಯತೆಗಳನ್ನು ನಿರ್ದೇಶಕರು ಇಲ್ಲಿ ತುಂಬಾ ಸೂಕ್ಷ್ಮವಾಗಿ, ಸ್ಪಷ್ಟವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಏನೆಲ್ಲಾ ಹೇಳಬೇಕೋ ಅದನ್ನೆಲ್ಲಾ ಹೇಳಿದ್ದಾರೆ ಮತ್ತು ರೋಚಕವಾಗಿಯೂ ಹೇಳಿದ್ದಾರೆ. 

ಆರ್‌.ಎಸ್‌.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನಿಖೆಯಲ್ಲಿ ಪೊಲೀಸರ ಪ್ರಾಮುಖ್ಯತೆ, ವಾದದಲ್ಲಿ ಲಾಯರ್‌ಗಳ ಚಾಕಚಕ್ಯತೆ, ದುರಾಸೆಯ ಅಗಾಧತೆ ಮತ್ತು ಕಾನೂನಿನ ಮಹತ್ವ ತಿಳಿಸುವ ಲೀಗಲ್‌ ಥ್ರಿಲ್ಲರ್‌ ಮತ್ತು ಕೋರ್ಟ್ ರೂಮ್‌ ಡ್ರಾಮಾ. ಮಧ್ಯಮ ವರ್ಗದ ಹುಡುಗನೊಬ್ಬನನ್ನು ಒಂದು ಹುಡುಗಿಯ ಅತ್ಯಾಚಾರ ಮತ್ತು ಕೊಲೆಯ ಆರೋಪದಲ್ಲಿ ಬಂಧಿಸುವಲ್ಲಿಗೆ ಕತೆ ಶುರು. ಆತ ನಿರಪರಾಧಿ ಎಂದು ಅವನ ಅಪ್ಪ ಅಮ್ಮ ನೇಮಿಸಿದ ಲಾಯರ್ ಹಾಗೂ ಆತನೇ ಅಪರಾಧಿ ಎಂದೂ ಪ್ರಾಸಿಕ್ಯೂಟರ್‌ ಪರಸ್ಪರ ವಾದಕ್ಕೆ ನಿಲ್ಲುವಲ್ಲಿ ಕತೆ ಒಂದು ಹಂತ ಮೇಲೆ ಹೋಗುತ್ತದೆ.

ಕಾನೂನಿನ ಅಗಾಧ ಸಾಧ್ಯತೆಗಳನ್ನು ನಿರ್ದೇಶಕರು ಇಲ್ಲಿ ತುಂಬಾ ಸೂಕ್ಷ್ಮವಾಗಿ, ಸ್ಪಷ್ಟವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಏನೆಲ್ಲಾ ಹೇಳಬೇಕೋ ಅದನ್ನೆಲ್ಲಾ ಹೇಳಿದ್ದಾರೆ ಮತ್ತು ರೋಚಕವಾಗಿಯೂ ಹೇಳಿದ್ದಾರೆ. ಅವರು ಕತೆಯನ್ನು ನಿರೂಪಿಸುವಲ್ಲಿ ಅನವಶ್ಯಕ ಕತೆಗಳನ್ನು, ವಿವರಗಳನ್ನು ತರುವುದಿಲ್ಲ. ಹಾಗಾಗಿ ಇದು ಕೋರ್ಟ್‌ ಡ್ರಾಮಾ ವಿಭಾಗಕ್ಕೆ ನಿಷ್ಟವಾದ ಕುತೂಹಲಕರ ಕತೆ.

ಅದಕ್ಕೆ ತಕ್ಕಂತೆ ಅತ್ಯುತ್ತಮ ಕಲಾವಿದರ ದಂಡೇ ಇಲ್ಲಿದೆ. ಅವರೆಲ್ಲರೂ ಅವರವರ ಪಾತ್ರಕ್ಕೆ ಜೀವ ತುಂಬಿ ಈ ಕತೆಯನ್ನು ಮತ್ತಷ್ಟು ಸಶಕ್ತಗೊಳಿಸಿದ್ದಾರೆ. ಮಧ್ಯದಲ್ಲಿ ನಿರೂಪಣೆಯಲ್ಲಿ ಕೊಂಚ ಬಿಗಿತನ ಬೇಕಿತ್ತು ಅಂತ ಅನ್ನಿಸುತ್ತದೆ. ಆದರೆ ದ್ವಿತೀಯಾರ್ಧದ ತಿರುವುಗಳು ಕತೆಯಲ್ಲಿ ಮುಳುಗುವಂತೆ ಮಾಡುತ್ತದೆ.

ಚಿತ್ರ: ದ ಜಡ್ಜ್‌ಮೆಂಟ್‌
ನಿರ್ದೇಶನ: ಗುರುರಾಜ ಕುಲಕರ್ಣಿ
ತಾರಾಗಣ: ರವಿಚಂದ್ರನ್‌, ದಿಗಂತ್, ಮೇಘನಾ ಗಾಂವ್ಕರ್‌, ಧನ್ಯಾ ರಾಮ್‌ಕುಮಾರ್‌, ಲಕ್ಷ್ಮೀ ಗೋಪಾಲಸ್ವಾಮಿ
ರೇಟಿಂಗ್: 3

ಸಿನಿಮಾ ಮುಗಿಯುವಾಗ ಒಬ್ಯ ವ್ಯಕ್ತಿಯ ಜೀವನದಲ್ಲಿ ಕಾನೂನು ಎಷ್ಟು ಮಹತ್ವ ವಹಿಸುತ್ತದೆ ಎಂಬ ಹೊಳಹನ್ನು ದಾಟಿಸುತ್ತದೆ. ಹಾಗಾಗಿ ಕೋರ್ಟ್‌ ಕಲಾಪ, ಕೇಸುಗಳ ರೆಫರೆನ್ಸ್‌ ಇತ್ಯಾದಿಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟ ಬರವಣಿಗೆ ತಂಡದ ಶ್ರಮ ಶ್ಲಾಘನೀಯ. ಇದೊಂದು ಕಾನೂನು ಕಲಾಪಗಳ ಕುರಿತು ಅಚ್ಚರಿ ಮತ್ತು ಆತಂಕ ಎರಡನ್ನೂ ಹುಟ್ಟಿಸಬಹುದಾದ ಕುತೂಹಲಕರ ಥ್ರಿಲ್ಲರ್.