ಕನ್ನಡ ಚಿತ್ರರಂಗದಲ್ಲಿ ಪಂಚ್‌ ಡೈಲಾಗ್‌ ಹೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಧ್ರುವ ಸರ್ಜಾ ಆರತಕ್ಷತೆಗೆ ತನ್ನ ಅಭಿಮಾನಿಗಳನ್ನು ಸ್ಪೆಶಲ್ ಆಗಿ ಆಹ್ವಾನಿಸಿದ್ದಾರೆ. ಇಂದು ಜೆ.ಪಿ.ನಗರದ ಸಂಸ್ಕೃತಿ ಬೃಂದಾವನದಲ್ಲಿ ಆರತಕ್ಷತೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಧ್ರುವ ಸರ್ಜಾ ಆರತಕ್ಷತೆಗೆ ನಿಮ್ಮ ನೆಚ್ಚಿನ ಸ್ಟಾರ್ ಬಂದಿದ್ರಾ? ಹೋಗೋಣ ಬನ್ನಿ

 

ವೈಟ್‌ ಆ್ಯಂಡ್ ಪಿಂಕ್‌ ಡಿಸೈನರ್‌ ವೇರ್‌ನಲ್ಲಿ ಕಂಗೊಳಿಸುತ್ತಿರುವ ಧ್ರುವ ಹಾಗೂ ಪ್ರೇರಣಾ ಪ್ರತಿಯೊಬ್ಬ ಅಭಿಮಾನಿಯನ್ನು ಮಾತನಾಡಿಸಿದ್ದಾರೆ. ಅವರಿಗೆ ಔತಣ ಕೂಟವನ್ನು ಹಮ್ಮಿಕೊಂಡಿದ್ದಾರೆ. ಕೆಲ ಫ್ಯಾನ್ಸ್‌ ರಿಸೆಪ್ಷನ್ ಹಾಲ್ ಮುಂಭಾಗ ಆವರಣದಲ್ಲಿ ಕಿದ್ವಾಯಿ ಅವರೊಂದಿಗೆ ಕೈ ಜೋಡಿಸಿ ರಕ್ತದಾನ ಆಯೋಜನೆ ಮಾಡಿದ್ದಾರೆ. ಇನ್ನು ಅಂಜನೇಯನ ಭಕ್ತನಾದ ಧ್ರುವಾಗೆ ಸರ್ಪ್ರೈಸ್‌ ನೀಡಲು ಅಭಿಮಾನಿಯೊಬ್ಬರು ರಾಮ-ಹನುಮನ ಅವತಾರ ಧರಿಸಿ ಬಂದು ಎಲ್ಲರ ಗಮನ ಸೆಳೆದಿದ್ದರು.

ಅಭಿಮಾನಿಗಳನ್ನು ದೇವರೆಂದು ಭಾವಿಸುವ ಧ್ರುವ ಸರ್ಜಾ ಯಾವುದೇ ಭೇದ- ಭಾವ ಮಾಡದೇ ಅವರಿಗೂ ದುಬಾರಿ ಲಗ್ನ ಪತ್ರಿಕೆಯನ್ನು ನೀಡಿದ್ದಾರೆ. ನವೆಂಬರ್ 24 ರಂದು ಧ್ರುವ-ಪ್ರೇರಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಕುಟುಂಬಸ್ಥರು ಮತ್ತು ಕನ್ನಡ ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು.