ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹೆಣ್ಣು ಮಗುವಿಗೆ ತಂದೆಯಾ ಸಂಭ್ರಮದಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗಾಂಧಿ ಜಯಂತಿ (Gandhi Jayanti) ದಿನವೇ ಹೆಣ್ಣು ಮಗು ಹುಟ್ಟಿರುವುದು ಮತ್ತೊಂದು ಸ್ಪೆಷಲ್. ನಿನ್ನ ಸಂಜೆ ಕೆಆರ್‌ ರೋಡ್‌ನಲ್ಲಿರುವ (KR Road) ಅಕ್ಷ ಆಸ್ಪತ್ರೆಗೆ ಪ್ರೇರಣಾ ದಾಖಲಾಗಿದ್ದರು. ಇಂದು ಬೆಳಗ್ಗೆ 8.30ಕ್ಕೆ ಆಪರೇಷನ್‌ ಥಿಯೇಟರ್‌ ಪ್ರವೇಶಿಸಿದ್ದಾರೆ. 

ಸರ್ಜಾ ಕುಟುಂಬಕ್ಕೆ ರಾಯನ್ ರಾಜ್‌ ಸರ್ಜಾ (Raayan Raj Sarja) ಎಂಟ್ರಿ ಕೊಟ್ಟಾಗಲೇ ಸಂಭ್ರಮ ಮನೆ ಮಾಡಿತ್ತು ಈಗ ಧ್ರುವ ಸರ್ಜಾ ಹೆಣ್ಣು ಮಗು ಎಂಟ್ರಿ ಆದ್ಮೇಲೆ ಡಬಲ್ ಧಮಾಕ ಸೆಲೆಬ್ರೆಷನ್. ಆಪರೇಷನ್ ಥಿಯೇಟರ್‌ ಹೋರಗೆ ಧ್ರುವ ಆಸ್ಪತ್ರೆ ಗೌನ್ ಧರಿಸಿ ಕಾಯುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೆಪ್ಟೆಂರ್ 3ರಂದು ಧ್ರುವ ಸರ್ಜಾ ಮತ್ತು ಪ್ರೇರಣಾ ಬೇಬಿ ಬಂಪ್ ಫೋಟೋ ಹಂಚಿಕೊಳ್ಳುವ ಮೂಲಕ ಹೊಸ ಅತಿಥಿ ಅಗಮನದ ಬಗ್ಗೆ ಸಿಹಿ ಸುದ್ದಿ ನೀಡಿದ್ದರು. ಸೆಪ್ಟೆಂಬರ್ 8ರಂದು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಸಂಪ್ರದಾಯದ ಪ್ರಕಾರಣ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ (Traditional Baby Shower) ನಡೆದಿತ್ತು. ಕೆಲವು ದಿನಗಳ ಹಿಂದೆ ಪ್ರೇರಣಾ ಆಪ್ತ ಸ್ನೇಹಿತರು ಮಾಡ್ರನ್ ಬೇಬಿ ಶವರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಧ್ರುವ ಮತ್ತು ಪ್ರೇರಣಾ ಅವರಿಗೆ ಆಲ್ ದಿ ಬೆಸ್ಟ್‌ ವಿಶ್‌ಗಳು ಹರಿದು ಬರುತ್ತಿದೆ. 

ಈ ಹಿಂದೆ ಖಾಸಗಿ ಸಂದರ್ಶನದಲ್ಲಿ ಗಂಡು ಮಗು ಬೇಕಾ ಹೆಣ್ಣು ಮಗು ಬೇಕಾ ಎಂದು ಧ್ರುವ ಸರ್ಜಾಗೆ ಪ್ರಶ್ನೆ ಮಾಡಲಾಗಿತ್ತು. ಆಗ 'ಯಾವ ಮಗು ಹುಟ್ಟರೂ ಖುಷಿನೇ. ಈಗಾಗಲೆ ನಮ್ಮ ಗಂಡು ಮಗು ರಾಯನ್ ಇದ್ದಾನೆ ಹೆಣ್ಣು ಮಗು ಆಗಬೇಕು. ಪರ್ಸನಲ್ ಆಗಿ ನನಗೆ ಹೆಣ್ಣು ಮಗು ಅಂದ್ರೆ ತುಂಬಾನೇ ಇಷ್ಟ. ಹೆಣ್ಣು ಮಗುನೇ ಆಗಬೇಕು' ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಪ್ರೇರಣಾ ಪ್ರೆಗ್ನೆಂಟ್ ಆದ ಮೇಲೆ ಮುಖದಲ್ಲಿ ಸಖತ್ ಗ್ಲೋ ಬಂದಿದೆ ಎಂದು ನೆಟ್ಟಿಗರು ಹೆಣ್ಣು ಮಗುನೇ ಆಗೋದು ಎಂದು ಈ ಹಿಂದೆ ಗೆಸ್ ಮಾಡಿದ್ದರು. 

ಆಪರೇಷನ್ ಥಿಯೇಟರ್‌ನಲ್ಲಿ ಪತ್ನಿ ಪ್ರೇರಣಾ: ಸಿಹಿ ಸುದ್ದಿಗಾಗಿ ಹೊರಗಡೆ ಕಾಯುತ್ತಿರೋ Dhruva Sarja

ಅಣ್ಣನ ಮಗ ರಾಯನ್ ರಾಜ್ ಸರ್ಜಾ ಹುಟ್ಟಿದ ದಿನವೇ ಆಸ್ಪತ್ರೆ ಮುಂದೆ ಧ್ರುವ ಅಭಿಮಾನಿಗಳ ಜೊತೆ ಸೇರಿಕೊಂಡು ರಸ್ತೆಯಲ್ಲಿ ಪಟಾಕಿ ಹೊಡೆದು ಸ್ವೀಟ್ ಹಂಚಿದ್ದರು. ಅಲ್ಲದೆ ರಾಯನ್ ಹುಟ್ಟಿದ ಎರಡು ಮೂರು ದಿನಕ್ಕೆ ಮನೆಗೆ ಬೆಳ್ಳಿ ತೊಟ್ಟಿಲು ಗಿಫ್ಟ್ ಮಾಡಿದ್ದರು. ಈಗ ತಮ್ಮ ಮಗುವೇ ಎಂಟ್ರಿ ಆಗಿದೆ ಅದ್ಮೇಲೆ ಧ್ರುವ ಮನೆಯಲ್ಲಿ ಸಂಭ್ರಮದ ಬಗ್ಗೆ ಪ್ರಶ್ನೆ ಮಾಡ್ಬೇಕಾ? 

ಧ್ರುವ ಸಿನಿಮಾ:

ಜೋಗಿ ಪ್ರೇಮ್‌ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್‌ ಚಿತ್ರಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಕಳೆದ ಒಂದು ವಾರದಿಂದ ಮುಂಬೈನ ಯಶ್‌ ರಾಜ್‌ ಫಿಲಮ್ಸ್‌ ಸ್ಟುಡಿಯೋದಲ್ಲಿ ಹಾಡುಗಳ ರೀರೆಕಾರ್ಡಿಂಗ್‌ ನಡೆಯುತ್ತಿದೆ. ಸೆ.27ರಿಂದ ಶೂಟಿಂಗ್‌ ಶುರು ಮಾಡಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ನಾಲ್ಕನೇ ಚಿತ್ರ ಇದಾಗಿದ್ದು, ನಿರ್ಮಾಪಕರಾದ ಕೋನಾ ವೆಂಕಟ್‌, ಸುಪ್ರೀತ್‌ ನೂರು ದಿನಗಳ ಕಾಲ ಈ ಚಿತ್ರಕ್ಕೆ ಶೂಟಿಂಗ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. ಚಿತ್ರಕ್ಕಾಗಿ ಎರಡು ಕಡೆ ಸೆಟ್‌ಗಳನ್ನು ಹಾಕಲಾಗುತ್ತಿದೆ. ಬೆಂಗಳೂರಿನ ಸುಂಕದಕಟ್ಟೆಬಳಿ ಬರುವ ಸೀಗೇಹಳ್ಳಿ ಹತ್ತಿರ 20 ಎಕರೆಯಲ್ಲಿ ಒಂದು ದೊಡ್ಡ ಸೆಟ್‌ ಕೆಲಸ ಬಹುತೇಕ ಮುಕ್ತಾಯಗೊಂಡಿದೆ. ಈ ಸೆಟ್‌ನಲ್ಲಿ ಚಿತ್ರದ ಶೇ.80 ಭಾಗ ಚಿತ್ರೀಕರಣ ನಡೆಯಲಿದೆ. ಹಲವು ವರ್ಷಗಳಿಂದ ಬಾಗಿಲು ಹಾಕಿಕೊಂಡಿರುವ ಮೈಸೂರ್‌ ಲ್ಯಾಂಫ್ಸ್‌ನ ಒಂದು ಭಾಗದ ಬಾಗಿಲು ತೆಗೆಸಿ ಅಲ್ಲಿಯೂ ಸೆಟ್‌ ಹಾಕುವ ತಯಾರಿ ನಡೆಯುತ್ತಿದೆ.ಚಿತ್ರದ ಖಳನಾಯಕನ ಪಾತ್ರಕ್ಕಾಗಿ ಸಂಜಯ್‌ ದತ್‌ರನ್ನು ಸಂಪರ್ಕಿಸಿದ್ದು, ಮಾತುಕತೆ ಹಂತದಲ್ಲಿದೆ. ಸಂಜಯ್‌ ದತ್‌ ಜತೆಗೆ ಬೇರೆ ಬೇರೆ ಭಾಷೆಯ ದೊಡ್ಡ ಕಲಾವಿದರು ಕೂಡ ಈ ಚಿತ್ರದಲ್ಲಿ ಇರಲಿದ್ದಾರೆ ಎಂದು ಪ್ರೇಮ್‌ ಹೇಳುತ್ತಾರೆ.