ಪಾಂಡಿಚೇರಿಯಲ್ಲಿರುವ ತಿರುನಲ್ಲಾರ್ ಶನಿ ದೇಗುಲಕ್ಕೆ  ಸ್ನೇಹಿತರ ಜೊತೆ ಭೇಟಿ ನೀಡಿದ ನಟ ದರ್ಶನ್.

ಒಂದಾದ ಮೇಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವ ನಟ ದರ್ಶನ್ ಇದೀಗ ಪಾಂಡಿಚೇರಿಯಲ್ಲಿರುವ ಶನಿ ದೇವರ ಮೊರೆ ಹೋಗಿದ್ದಾರೆ. ಸ್ನೇಹಿತರ ಜೊತೆ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ದುರ್ಯೋಧನನ ಪಾತ್ರ ಮಾಡಿದ್ದೇ ನಟ ದರ್ಶನ್‌ಗೆ ಕಂಟಕವಾಯ್ತಾ?

ತಿರುನಲ್ಲಾರ್‌ನ ಈ ಶನಿ ದೇವಾಲಯವನ್ನು ದರ್ಬರನ್ವೇಸ್ವರನ್‌ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿರುವ ಶನಿದೇವರ ದರ್ಶನ ಮಾಡಿದರೆ ಶನಿಭಾದೆ ತೀರುತ್ತದೆ ಎಂಬುದು ನಂಬಿಕೆ. ಈ ಪ್ರದೇಶದಲ್ಲಿದ್ದ ರಾಜ ಶನಿಪ್ರಭಾವದಿಂದ ದೂರವಾದ ಎಂಬ ಪ್ರತೀತಿ ಇದೆ. ತನ್ನ ಸುತ್ತ ಕೇಳಿ ಬರುತ್ತಿರುವ ಆರೋಪದಿಂದ ಮುಕ್ತಿ ಪಡೆಯಲು ದರ್ಶನ್ ಶನಿ ದೇವರ ಮೊರೆ ಹೋಗಿದ್ದಾರೆ. 

ದರ್ಶನ್ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಮತ್ತು ಪೋಟೋಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ 25 ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು ಆನಂತರ ಸ್ನೇಹಿತರ ನಡುವೆ ಬಿರುಕು ಮೂಡಿತ್ತು. ಇದರ ನಡುವೆ ಇಂದ್ರಜಿತ್ ಲಂಕೇಶ್ ಪ್ರವೇಶ ಮಾಡಿದರು. ಬೇಡ ಬೇಡ ಎಂದರೂ ಆಪ್ತ ನಿರ್ದೇಶಕ ಪ್ರೇಮ್‌ ಅವರನ್ನು ಎಳೆದು ತಂದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗುತ್ತಿರುವ ತೊಂದರೆಗಳ ಪರಿಹಾರಕ್ಕೆ ಶನಿ ದೇವರ ಪೂಜೆ ಮಾಡಿಸಿದ್ದಾರೆ.