ಕಲಾವಿದರು ಯಾರೇ ಎಷ್ಟೇ ಕಷ್ಟದಲ್ಲಿರಲಿ ಅವರಿಗೆ ಮೊದಲು ಸ್ಪಂದಿಸುವುದು ಚಾಲೇಂಜಿಂಗ್ ಸ್ಟಾರ್ ದರ್ಶನ್. ಬಲಗೈಯಲ್ಲಿ ಪ್ರೀತಿಯಿಂದ ಮಾಡಿದ ಸಹಾಯ ಎಡಗೈಗೆ ತಿಳಿಯದಂತೆ ನೋಡಿಕೊಳ್ಳುತ್ತಾರೆ. ಕಲಾವಿರು, ಅಭಿಮಾನಿಗಳು ಅಷ್ಟೇ ಅಲ್ಲದೆ ಪ್ರಾಣಿ ಮೇಲೂ ಅಷ್ಟೇ ಪ್ರೀತಿ ತೋರಿಸುತ್ತಾರೆ.

ಇತ್ತೀಚಿಗೆ ದರ್ಶನ್‌ ಸೈನಿಕರ ಬಗ್ಗೆ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ' ರಿಯಲ್‌ ಹೀರೋ ಸೈನಿಕರು ನಾನು ಡಮ್ಮಿ ಹೀರೋ. ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ನಾವು ಶಾಲೆ ಕಾಲೇಜು ಸೇರುವ ಮುನ್ನ ಅಪ್ಲಿಕೇಶನ್‌ ಸಲ್ಲಿಸುತ್ತೇವೆ ಆದರೆ ಅವರು ಸೇನೆಗೆ ಸೇರುವ ಮುನ್ನ ಡೆತ್ ಅಪ್ಲಿಕೇಶನ್‌ಗೆ ಸೈನ್‌ ಮಾಡುತ್ತಾರೆ. ಅಲ್ಲಿ ಸೈನಿಕರು ಗುದ್ದಾಡೋಕೆ ನಾವು ಇಲ್ಲಿ ನೆಮ್ಮದಿಯಾಗಿರುವುದು. ಇತ್ತೀಚಿಗೆ ಜನರಲ್ಲಿ ಮರವು ಜಾಸ್ತಿಯಾಗಿದೆ. ಬೆಳಗ್ಗೆ ಹೇಳಿದ್ದನ್ನು ಸಂಜೆ ಮರೆಯುತ್ತಾರೆ ಅದಿಕ್ಕೆ  ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ಅವಕಾಶ ಸಿಕ್ಕರೆ ಖಂಡಿತಾ ಸೈನಿಕರ ಬಗ್ಗೆ ಸಿನಿಮಾ ಮಾಡುತ್ತೇನೆ ' ಎಂದು ವೆಬ್‌ಸೈಟ್‌ವೊಂದರಲ್ಲಿ  ಮಾತನಾಡಿದ್ದಾರೆ.

ಪಂಚೆ ಆ್ಯಡಲ್ಲಿ ದರ್ಶನ್; ಮರೆಯಾಗದ ಸಾಮಾಜಿಕ ಕಾಳಜಿ!

ಅಷ್ಟೇ ಅಲ್ಲದೆ ಯೋಧರ ಕುಟುಂಬಕ್ಕೆ ಆದ್ಯತೆ ನೀಡಿ ಎಂದು ಹೇಳುತ್ತಾ 'ವಿದೇಶದಲ್ಲಿ ಮಕ್ಕಳಿಗೆ ಶಾಲೆ ಮುಗಿದ ನಂತರ ಯುದ್ಧಕ್ಕೆ ಸನ್ನದ್ಧರಾಗುವಂತೆ  ಮಾಡುತ್ತಾರೆ ಇದು ನಮ್ಮಲ್ಲಿಯೂ ಆರಂಭವಾಗಬೇಕು. ಯೋಧರಿಗೆ ನಮ್ಮ ಅನುಕಂಪ ಬೇಡ ಅವರಿಗೆ ನಮ್ಮ ಸಹಾಯ ಬೇಕು ಅಷ್ಟೆ.  ಎಷ್ಟೋ ಮಕ್ಕಳು ಅವರ ತಂದೆಯ ಮುಖವನ್ನು ನೋಡೇ ಇರುವುದಿಲ್ಲ ಅವರಿಗೆ ಸರಿಯಾಗಿ ಅಹಾರ ಸಿಗುತ್ತದೆಯೋ ಇಲ್ವೋ ಎಂದು ನೋಡಬೇಕು' ಎಂದು ಹೇಳಿದ್ದಾರೆ.

ಇತ್ತೀಚಿಗೆ ಮುನಿರತ್ನ ಕುರುಕ್ಷೇತ್ರ 100 ಸಂಭ್ರಮದಲ್ಲಿ ನಿರ್ಮಾಪಕ ಮುನಿರತ್ನ ದರ್ಶನ್‌ ಅವರನ್ನು ಕ್ಯಾಪ್ಟನ್‌ ಅಭಿನಂದನ್‌ ಪಾತ್ರದಲ್ಲಿ ನೋಡಬೇಕು ಎಂದು ಹೊಸ ನಿರ್ಮಾಣದ ಬಗ್ಗೆ ಸೂಚನೆ ನೀಡಿದ್ದಾರೆ. ಇದೇ ವರ್ಷ ಚಿತ್ರೀಕರಣ ಶುರು ಮಾಡುವುದಾಗಿಯೂ ಹೇಳಿದರು.

ಪುಸ್ತಕ ರೂಪದಲ್ಲಿ ಬರಲಿದೆ 'ತೂಗುದೀಪ್ ದರ್ಶನ್ ಕಥೆ'!