ಇದೀಗ ತೂಗುದೀಪ ಶ್ರೀನಿವಾಸ್‌ ಅವರ ಕುಟುಂಬದ ಕತೆ ಪುಸ್ತಕವಾಗಿ ಮೂಡಿ ಬರುತ್ತಿದೆ. ಎರಡು ಭಾಗಗಳಲ್ಲಿ ಪ್ರಕಟವಾಗುತ್ತಿರುವ ಈ ಪುಸ್ತಕದ ಹೆಸರು ತೂಗು​ದೀಪ ದರ್ಶನ. ಮೀನಿಂಗ್‌ ಫುಲ್‌ ಲೈಫ್‌ ಸ್ಟೋರಿ ಎನ್ನು​ವುದು ಇದರ ಸಬ್‌ ಟೈಟಲ್‌.

ಪತ್ರ​ಕರ್ತ ವಿನಾ​ಯಕರಾಮ್‌ ಕಲ​ಗಾರು ಈ ಪುಸ್ತಕ ಬರೆಯುತ್ತಿದ್ದಾರೆ. ಮೀನ ತೂಗುದೀಪ ಹೇಳಿದ ಕತೆಗಳು ಇಲ್ಲಿ ಪ್ರಮುಖವಾದುದು. ತೂಗುದೀಪ ಶ್ರೀನಿವಾಸ್‌ ಜೀವನ, ಅವರ ಮಕ್ಕಳಾದ ದರ್ಶನ್‌, ದಿನಕರ್‌, ದಿವ್ಯ ಅವರು ಬೆಳೆದು ಬಂದ ಬಗೆ ಈ ಪುಸ್ತಕದ ವಸ್ತು. ಸದ್ಯ ಪುಸ್ತಕದ ಮೊದಲ ಭಾಗದ ಮುಖಪುಟವನ್ನು ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮೊದಲ ಭಾಗ ಬಿಡುಗಡೆಯಾಗಲಿದೆ ಎನ್ನುತ್ತಾರೆ ವಿನಾಯಕರಾಮ್‌. ಜೋಹರ್‌ ಪಬ್ಲಿಕೇಷನ್‌ ಇದನ್ನು ಪ್ರಕಟಿಸಿದೆ.

'ಒಂದು ಮುಂಜಾನೆ.... ಎಂದು ಹಾಡುತ್ತಾ ಪತ್ನಿ ಜೊತೆ ಪಾರ್ಕ್‌ನಲ್ಲಿ ಸುತ್ತಾಡಿದ ದರ್ಶನ್