Asianet Suvarna News Asianet Suvarna News

19 ವರ್ಷಗಳ ನಂತರ ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾ ಮತ್ತೆ ರಿಲೀಸ್; ಏನಿದರ ಹಿಂದಿನ ಪ್ಲ್ಯಾನ್?

2005ರಲ್ಲಿ ರಿಲೀಸ್ ಆದ ಸಿನಿಮಾ ಈಗ ಮತ್ತೆ ರಿಲೀಸ್. ದರ್ಶನ್ ಜೈಲು ಸೇರಿದ ಮೇಲೆ ರೀ- ರಿಲೀಸ್ ಮಾಡಲು ಕಾರಣ ಏನು?

Kannada actor Darshan shastri film re release on july 12th vcs
Author
First Published Jul 11, 2024, 4:21 PM IST

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಾವ ಸಿನಿಮಾನೂ ರಿಲೀಸ್ ಆಗುತ್ತಿಲ್ಲ. ಓಟಿಟಿಯಲ್ಲಿ ಈಗಾಗಲೆ ಇರುವ ಸಿನಿಮಾ ನೋಡಿ ಬೇಸರವಾಗಿದೆ ಎಂದು ಸಿನಿ ರಸಿಕರು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಒಂದಲ್ಲ ಒಂದು ಬ್ಯಾಡ್ ನ್ಯೂಸ್ ಕೇಳಿ ಬರುತ್ತಿದೆ. ಅದರಲ್ಲೂ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ ನಟ ದರ್ಶನ್ ಜೈಲು ಸೇರಿ ಸುಮಾರು ಸಮಯ ಆಯ್ತು. ನಂಬಿ ಬಂಡವಾಳ ಹಾಕಿರುವ ನಿರ್ಮಾಪಕರು ತಲೆ ಕೆಡಿಸಿಕೊಂಡು ಕೂತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ದರ್ಶನ್ ಹಳೆ ಸಿನಿಮಾವೊಂದು ರಿಲೀಸ್ ಆಗುತ್ತಿದೆ....

ಹೌದು! ಇಷ್ಟು ದಿನ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಡಾ. ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿತ್ತು. ಈಗ ದರ್ಶನ್ ಪರಪ್ಪನ ಅಗ್ರಹಾರ ಸೇರಿದ ಮೇಲೆ ಹಳೆ ಸಿನಿಮಾ 'ಶಾಸ್ತ್ರಿ' ರೀ-ರಿಲೀಸ್ ಮಾಡುತ್ತಿದ್ದಾರೆ. ಜುಲೈ 12ರಂದು ದರ್ಶನ್ ಮತ್ತು ಮಾನ್ಯಾ ನಟಿಸಿರುವ ಶಾಸ್ತ್ರಿ ಸಿನಿಮಾ ರಿಲೀಸ್ ಹಿಂದಿನ ಉದ್ದೇಶ ಏನಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಈ ಚಿತ್ರದಲ್ಲಿ ಬುಲೆಟ್ ಪ್ರಕಾಶ್, ಹನುಮಂತೇ ಗೌಡ, ಜಿಕೆ ಗೋಂವಿದ್ ರಾವ್, ಚಿತ್ರ ಶಿನಾಯ್ ಸೇರಿದಂತೆ ದೊಡ್ಡ ತಾರ ಬಳಗವಿದೆ. 

ಸೆಕ್ಯೂರಿಟಿ ಗಾರ್ಡ್‌ಗೆ ದುಬಾರಿ ಫೋನ್ ಗಿಫ್ಟ್‌ ಕೊಟ್ಟ ಯೂಟ್ಯೂಬರ್ ಸಮೀರ್; ಚಪ್ಪಾಳೆ ಎಂದ ನೆಟ್ಟಿಗರು!

2005ರಲ್ಲಿ ರಿಲೀಸ್ ಆದ ಈ ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿದೆ. ಪಿಎನ್‌ ಸತ್ಯ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೆ ಯೂಟ್ಯೂನ್‌ನಲ್ಲಿ ಫುಲ್ ಸಿನಿಮಾ ಇದ್ದರೂ ಮತ್ತೆ ರೀ-ರಿಲೀಸ್ ಮಾಡಲು ಕಾರಣವೇನು? ಈ ಸಿನಿಮಾ ನೋಡಲು ಜನರು ಬಂದ್ರೆ ಮತ್ತೆ ದರ್ಶನ್ ಮೇಲೆ ಬಂಡವಾಳ ಹಾಕಬಹುದು ಅನ್ನೋ ಲೆಕ್ಕಾಚಾರ ಇದೆಯಾ? ನೆಟ್ಟಿಗರಿಗೆ ಏನ್ ಏನೋ ಯೋಚನೆಗಳು ಬರುತ್ತಿದೆ....

ಜೈಲಿನಿಂದಲೇ ಮನವಿ ಮಾಡಿದ ದರ್ಶನ್; ವಕೀಲರ ಮಾತು ಕೇಳಿ ಕಣ್ಣೀರಿಟ್ಟ ಫ್ಯಾನ್ಸ್‌

ದರ್ಶನ್ ಮನವಿ:

ಅಭಿಮಾನಿಗಳಿಗೆ ದರ್ಶನ್‌ ಬಗ್ಗೆ ಮಾಹಿತಿ ಸಿಗುತ್ತಿರುವುದೇ ಮಾಧ್ಯಮಗಳು ಮತ್ತು ವಕೀಲರಿಂದ. ನಿನ್ನೆ ಇದ್ದಕ್ಕಿದ್ದಂತೆ ದರ್ಶನ್‌ರನ್ನು ಭೇಟಿ ಮಾಡಿದ ವಕೀಲರು ಹೊರ ಬಂದು ಮಾಹಿತಿ ಹಂಚಿಕೊಂಡರು. ಮುಂದಿನ ನಡೆ ಏನು ಅಂತ ನಿರ್ಧಾರ ತೆಗೆದುಕೊಳ್ಳಲು ಭೇಟಿ ಮಾಡಿದ್ದು, ಬೇರೆ ಏನೂ ಮಾತನಾಡಲು ಸಾಧ್ಯವಿಲ್ಲ. ಹೋಗಿದ ತಕ್ಷಣ ಅಭಿಮಾನಿಗಳ ಬಗ್ಗೆ ಕೇಳಿದರು ಯಾರೂ ಪಾಪ ಯಾವುದೇ ತರ ತೊಂದರೆ ಮಾಡಿಕೊಳ್ಳುವುದು ಬೇಡ ಅಂದ್ರು ಏಕೆಂದರೆ ಅವರಿಗೆ ಫ್ಯಾನ್ಸ್‌ಗಳು ಅಂದ್ರೆ ತುಂಬಾ ಇಷ್ಟ' ಎಂದು ದರ್ಶನ್ ಪರ ವಕೀಲರು ಮಾತನಾಡಿದ್ದಾರೆ. 

Latest Videos
Follow Us:
Download App:
  • android
  • ios