ಸೆಕ್ಯೂರಿಟಿ ಗಾರ್ಡ್‌ಗೆ ದುಬಾರಿ ಫೋನ್ ಗಿಫ್ಟ್ ಕೊಟ್ಟ ಯೂಟ್ಯೂಬರ್ ಸಮೀರ್; ಚಪ್ಪಾಳೆ ಎಂದ ನೆಟ್ಟಿಗರು!
ಒಮ್ಮೆ ಸಣ್ಣ ಆಸೆ ಹೇಳಿಕೊಂಡ ಸೆಕ್ಯೂರಿಟಿ ಗಾರ್ಡ್. ಮೂರು ಡಬ್ಬಗಳನ್ನು ಕೈಗೆ ಕೊಟ್ಟ ಸರ್‌ಪ್ರೈಸ್ ಮಾಡಿದ ಸ್ಯಾಮ್....
ಕನ್ನಡ ಜನಪ್ರಿಯ ಯೂಟ್ಯೂಬರ್ ಸ್ಯಾಮ್ ಸಮೀರ್ ಒಮ್ಮೆ Give away ಮಾಡಿದ್ದರು. ಆಗ ಟಿವಿ, ಓವನ್ ಮತ್ತು ಫ್ರಿಡ್ಜ್‌ನ ಬಡವರಿಗೆ ಕೊಡಿಸಿದ್ದರು.
ಆ ಸಮಯದಲ್ಲಿ ತಮ್ಮ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್‌ಗೆ ಏನು ಬೇಕು? ನಿಮ್ಮ ಆಸೆ ಏನು ಎಂದು ಕೇಳಿದಾಗ ಫೋನ್ ಬೇಕು ಎಂದಿದ್ದರು.
ಬೇಸಿಕ್ ಸೆಟ್ ಫೋನ್ ಬಳಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಸರ್ಪ್ರೈಸ್ ಮಾಡಲು ಮೂರು ಕಾಲಿ ಡಬ್ಬಗಳನ್ನು ಪ್ಯಾಕ್ ಮಾಡಿಸಿದ್ದಾರೆ. ಅದರಲ್ಲಿ ಫೊನ್ ಇರಲಿಲ್ಲ.
ಮೂರು ಡಬ್ಬಗಳನ್ನು ಓಪನ್ ಮಾಡಿ ಬೇಸರದಲ್ಲಿ ಸುಮ್ಮನಾದ ಸೆಕ್ಯೂರಿಟಿ ಗಾರ್ಡ್‌ಗೆ ಕೈಗೆ ದುಬಾರಿ ಫೋನ್ ಕೊಟ್ಟಾಗ ಮುಖದಲ್ಲಿ ಖುಷಿ ನೋಡಬೇಕಿತ್ತು.
61 ವರ್ಷದ ಸೆಕ್ಯೂರಿಟಿ ಜಯರಾಂ ಮೊದಲು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಕಾಲುಗಳ ನೋವು ಹೆಚ್ಚಾದ ಕಾರಣ ಆ ಕೆಲಸ ಬಿಟ್ಟು ಸೆಕ್ಯೂರಿಟಿ ಆಗಿದ್ದಾರೆ.
ಪತ್ನಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದರೆ, ಮಕ್ಕಳಿಬ್ಬರು ಓದುತ್ತಿದ್ದಾರೆ. ಇಂತಹ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿರುವ ಸ್ಯಾಮ್‌ಗೆ ಚಪ್ಪಾಳೆ ಎಂದಿದ್ದಾರೆ ನೆಟ್ಟಿಗರು.