ಚಿತ್ರ ಮುಹೂರ್ತದಲ್ಲಿ ಕಾಣಿಸಿಕೊಂಡ ದರ್ಶನ್. ನಾಡ ಹಬ್ಬ ಹಾಗೂ ಶೂಟಿಂಗ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಚಿತ್ರಮಂದಿರಗಳು ಎದುರಿಸುತ್ತಿರುವ ಸಂಕಷ್ಟವನ್ನು ನೀಗಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾ ರಿಲೀಸ್ ಆಗಲೇಬೇಕೆಂಬುವುದು ಇಡೀ ಚಿತ್ರರಂಗದ ಒಟ್ಟಾರೆ ಆಶಯ. ಲಾಕ್‌ಡೌನ್ ಪ್ರಾರಂಭದಿಂದಲೂ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ದರ್ಶನ್ ಬರೋಬ್ಬರಿ 8 ತಿಂಗಳ ನಂತರ ಕ್ಯಾಮೆರಾ ಎದುರು ಬಂದಿದ್ದಾರೆ. ಬ್ಯಾಕ್ ಟು ನಾರ್ಮಲ್ ಲೈಫ್ ಬಗ್ಗೆ ಏನು ಹೇಳಿದ್ದಾರೆ ಕೇಳಿ.
ದರ್ಶನ್ ಸಿನಿಮಾ ರಾಬರ್ಟ್ ಬರಲಿ: ರವಿಚಂದ್ರನ್
ಕೃಷ್ಣ ಪರಮಾತ್ಮ ಮುಹೂರ್ತ:
ಲಾಕ್‌ಡೌನ್ ಅನ್‌ಲಾಕ್ ಆದ ಬಳಿಕ ಅನೇಕ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದರು. ಹಲವರು ಮುಹೂರ್ತವಿಟ್ಟರು. ಇನ್ನೂ ಕೆಲವರು ಚಿತ್ರಮಂದಿರ ತೆರೆದು 100% ವೀಕ್ಷಕರು ಬರಲಿ ಎಂದು ಕಾಯುತ್ತಿದ್ದಾರೆ. ಈ ನಡುವೆ ಬರೋಬ್ಬರಿ 8 ತಿಂಗಳ ನಂತರ ದರ್ಶನ್ ಕ್ಯಾಮೆರಾ ಎದುರು ಕಾಣಿಸಿಕೊಂಡಿದ್ದಾರೆ.
ಹೌದು. ಕೆಲವು ದಿನಗಳ ಹಿಂದೆ ಆರ್ ಆರ್ ನಗರದಲ್ಲಿ ನಡೆದ 'ಶ್ರೀ ಕೃಷ್ಣ ಪರಮಾತ್ಮ' ಚಿತ್ರ ಮುಹೂರ್ತದಲ್ಲಿ ದರ್ಶನ್ ಭಾಗಿಯಾಗಿದ್ದರು. ಧ್ರುವನ್ ಅಭಿನಯದ ಈ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.
"
ತಿಂಡಿ ಮಿಸ್ ಮಾಡುತ್ತಿರುವ ದರ್ಶನ್:
ರಾಬರ್ಟ್ ರಿಲೀಸ್ ನಿರೀಕ್ಷೆಯಲ್ಲಿರುವ ದರ್ಶನ್ ತಮ್ಮ ಮುಂದಿನ 'ರಾಜವೀರ ಮದಕರಿ ನಾಯಕ' ಸಿನಿಮಾ ಶೂಟಿಂಗ್ ಶುರು ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿ ಮಾಧ್ಯಮ ಮುಂದೆ ಮಾತನಾಡಿದ್ದಾರೆ. 'ಮೇಕಪ್ ಕ್ಯಾಮೆರಾ ಅಲ್ಲ, ನಾನು ಇಡ್ಲಿ ವಡೆ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಶೂಟಿಂಗ್ ಇದ್ರೆ ನಮಗೆ ಮೂರ್ನಾಲ್ಕು ಬಗೆಯ ತಿಂಡಿಗಳು ತಿನ್ನಬಹುದಿತ್ತು ಆದರೀಗ ಸಿಂಗಲ್ ಟಿಫನ್ ಅಷ್ಟೆ,' ಎಂದು ಹೇಳಿದ್ದಾರೆ.
ಡಿ-ಬಾಸ್ ಸಿನಿ ಲೈಫ್‌ನ ಫಸ್ಟ್ ನಾಯಕಿ ಯಾರು ಗೊತ್ತಾ?
ನಾಡಹಬ್ಬ ದಸರ ಬಗ್ಗೆಯೂ ಹೇಳಿದ್ದಾರೆ. ' ದಸರಾ ನನಗೆ ಮಾತ್ರವಲ್ಲ ಎಲ್ಲರಿಗೂ ಮಿಸ್ ಆಗ್ತಿದೆ. ಏನು ಮಾಡೋಕೆ ಆಗಲ್ಲ. ನಮ್ಮ ಸಿನಿಮಾ ರಾಬರ್ಟ್ ಥಿಯೇಟರ್ 100% ಓಪನ್ ಆದಾಗ ರಿಲೀಸ್ ಆಗುತ್ತದೆ,' ಎಂದಿದ್ದಾರೆ.
