ಧನಂಜಯ್ ನಿರ್ಮಾಣಕ್ಕೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ದಾಸ ಸರಳತೆಗೆ ಅಭಿಮಾನಿಗಳು ಫಿದಾ...

ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ 'ಟಗರು ಪಲ್ಯ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗುತ್ತಿದ್ದು ಅದ್ಧೂರಿಯಾಗಿ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೆದಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಟ್ಟಿದ್ದಾರೆ. 

ವೇದಿಕೆ ಮೇಲೆ ಮಾತನಾಡಿದ ದರ್ಶನ್ ಚಿತ್ರತಂಡದ ಪ್ರತಿಯೊಬ್ಬ ಕಲಾವಿದರನ್ನು ಹೊಗಳಿದ್ದಾರೆ. ಈಗಾಗಲೆ ಟ್ರೈಲರ್ ನೋಡಿದ್ದೆ ಮತ್ತೊಮ್ಮೆ ನೋಡುತ್ತಿರುವೆ ನಮ್ಮ ನೆಲದ ಸೊಗಡು ಇದರಲ್ಲಿದೆ ಎಂದು ದರ್ಶನ್ ಹೊಗಳಿದ್ದರೆ. 

'ಟ್ರೈಲರ್ ನೋಡಿದ ಕ್ಷಣ ಖುಷಿ ಆಯ್ತು. ಮೊನ್ನೆ ಮತ್ತೆ ನೋಡಿದಾಗ ಇವರಿಗೆ ಹೇಳಿದೆ ಟಗರು ಪಲ್ಯ ಅಂತ ಯಾಕೆ ಸಿನಿಮಾಗೆ ಹೆಸರು ಇಟ್ಟಿದ್ದು ಎಂದು. ಟಗರು ಖಲಿಜಾ ಬೋಟಿ ಅಂತ ಏನಾದರೂ ಇಡಬೇಕಿತ್ತು ಅಲ್ವಾ ಎಂದೆ. ಆ ಮೇಲೆ ಸಿನಿಮಾ ಕಥೆಗೆ ತಕ್ಕಂತೆ ಇದೆ ಎಂದು ಸುಮ್ಮನಾದೆ. ಅಮೃತಾ ತುಂಬಾ ಚೆನ್ನಾಗಿ ನಟಿಸಿದ್ದೀಯ. ನಮ್ಮದು ಚಿಕ್ಕ ಚೊಕ್ಕ ನೀಟ್ ಆದ ಇಂಡಸ್ಟ್ರಿ. ಇಲ್ಲಿಗೆ ನಿನಗೆ ಆತ್ಮೀಯ ಸ್ವಾಗತ' ಎಂದು ದರ್ಶನ್ ಮಾತನಾಡಿದ್ದಾರೆ. 

ಸೀರೆಯ ಮಹಿಮೆಯೋ? ಮೊಗದ ಕಾಂತಿಯೋ ನಾ ಅರಿಯೆ ಸಖಿ; ನೆನಪಿರಲಿ ಪ್ರೇಮ್‌ ಮಗಳ ಫೋಟೋ ವೈರಲ್!

'ಟಗರು ಲಪ್ಯ ಸಿನಿಮಾದ ಬಗ್ಗೆ ನಮ್ಮ ಜನರಿಗೆ ಹೇಳಬೇಕಾ? ನಮ್ಮ ಸೋಗಡಿನ ಸಿನಿಮಾ ಇಲ್ಲ ಅಂತಾರೆ....ಆದರೆ ಅಂತ ಸಿನಿಮಾ ಮಾಡಿದರೆ ನೋಡಲ್ಲ. ಇದು ಎಲ್ಲಾಆ ಸೊಗಡು ತುಂಬಿರುವ ಸಿನಿಮಾ. ಅದು ಟ್ರೈಲರ್‌ನಲ್ಲಿ ಕಾಣಿಸುತ್ತದೆ. ಹೀರೋಗಳು ಏನ್ ಮಾಡ್ತಾರೆ ಅಂತ ಜನರು ಕೇಳುತ್ತಾರೆ ಅವರಿಗೆ ನಾನು ಇಂದು ಎದೆ ಮುಟ್ಟಿಕೊಂಡು ಹೇಳುತ್ತೀನಿ ...ಕೆಲವು ಹೀರೋಗಳು ಪ್ರೊಡ್ಯೂಸ್ ಮಾಡುತ್ತಾರೆ ಅಂತ. ಡಾಲಿ ಫಿಕ್ಚರ್ ದೊಡ್ಡ ಪ್ರೊಡಕ್ಷನ್ ಕಂಪನಿ ಆಗಲಿ ಇದು ಅವರ ಮೂರನೇ ಸಿನಿಮಾ. ಇದರಲ್ಲಿ ಎರಡು ವಿಧಗಳಿದೆ. ಹಠದಿಂದ ಬೆಳೆಯೋದು ಬೇರೆ ಛಲದಿಂದ ಬೆಳೆಯೋದು ಬೇರೆ. ಹಠದಿಂದ ಬೆಳೆಯುವುದಕ್ಕಿಂತ ಚಲದಿಂದ ಬೆಳೆಯಲಿ. ನಟನೆ ಕಲಿಯಲು ಎಲ್ಲೋ ಹೋಗಬೇಕಿಲ್ಲ ಎಂಜಿನಿಯರಿಂಗ್ ಮಾಡಿ ಇಲ್ಲಿಗೆ ಬಂದುಬಿಡಿ' ಎಂದು ದರ್ಶನ್ ಧನಂಜಯ್, ನಾಗಭೂಷಣ್ ಅಮೃತಾ ಕಾಲೆಳೆದಿದ್ದಾರೆ. 

ಒಂದು ಸಲವೂ ಕಟ್ ಮಾಡದೆ ಬೆಳೆಸಿದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿ ಪ್ರೇಮ್ ಪುತ್ರಿ; ಫೋಟೋ ವೈರಲ್!

'ನಾವು ಚಿಕ್ಕ ನಟ ನಿಮ್ಮ ಬ್ಯಾನರ್‌ನಲ್ಲಿ ನನಗೂ ಅವಕಾಶ ಕೊಡಿ. ದಯವಿಟ್ಟು ನಿಮ್ಮ ಬ್ಯಾನರ್‌ನಲ್ಲಿ ಒಂದು ಚಾನ್ಸ್‌ ಕೊಡಿ ಖಂಡಿತ ಬಂದು ಸಿನಿಮಾ ಮಾಡ್ತೀನಿ. ನಮಗೆ ಅದು ಇಂದು ಅಂತಿಲ್ಲ ಕೆಲಸ ಮಾಡುತ್ತೇವೆ ನಾನು ಇನ್ನೂ ಬೆಳೆಯುತ್ತಿರುವ ನಟ' ಎಂದಿದ್ದಾರೆ ದರ್ಶನ್. 

YouTube video player