ಸೀರೆಯ ಮಹಿಮೆಯೋ? ಮೊಗದ ಕಾಂತಿಯೋ ನಾ ಅರಿಯೆ ಸಖಿ; ನೆನಪಿರಲಿ ಪ್ರೇಮ್ ಮಗಳ ಫೋಟೋ ವೈರಲ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ನಟಿ ಅಮೃತಾ ಪ್ರೇಮ್ ಸೀರೆ ಲುಕ್.....
ಕನ್ನಡ ಚಿತ್ರರಂಗಕ್ಕೆ 'ಟಗರು ಪಲ್ಯ' ಸಿನಿಮಾ ಮೂಲಕ ಪಾದಾರ್ಪಣೆ ಮಾಡುತ್ತಿರುವ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ (Amrutha prem)
ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅಮೃತಾ ಈಗಾಗಲೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸ ನಮ್ಮನೆ ಹುಡುಗ ಅನ್ನೋ ಪಟ್ಟ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಕನ್ನಡತಿ ಅಮೃತಾ ರೇಶ್ಮೆ ಸೀರೆ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಎಷ್ಟು ಲಕ್ಷಣ ಎಂದಿದ್ದಾರೆ ನೆಟ್ಟಿಗರು.
ಅದರಲ್ಲೂ ಸೀರೆಗೆ ಕೈ ಫುಲ್ ಕವರ್ ಆಗುವ ರೀತಿಯಲ್ಲಿ ಬ್ಲೌಸ್ ಧರಿಸಿರುವುದು ನೆಟ್ಟಿಗರಿಗೆ ಇಷ್ಟವಾಗಿದೆ. ಪ್ರೇಮ್ ಮಗಳ ನಗುವೇ ಬಿಗ್ ಹೈಲೈಟ್.
'ದೇಸಿ ವೈಬ್ ಆರ್ ಆನ್' ಎಂದು ಅಮೃತಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.ಇದು ನವರಾತ್ರಿ 2ನೇ ದಿನ ಪ್ರಯುಕ್ತ ಎಂದು ಹೇಳಿದ್ದಾರೆ.
'ಕನ್ನಡದ ಅಪ್ಪಟ ಯುವರಾಣಿ..ಅಮೃತ ಮೇಡಂ, ನಿಮ್ಮ ತಂದೆ ರೀತಿ ನೀವು ಸೂಪರ್ ಅಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.