ಕನ್ನಡ ಚಿತ್ರರಂಗದ ಒನ್‌ ಆ್ಯಂಡ್ ಓನ್ಲಿ ಬಾಕ್ಸ್‌ ಆಫೀಸ್ ಸುಲ್ತಾನ,ಅಭಿಮಾನಿಗಳ ಯಜಮಾನ ಹಾಗೂ ಪ್ರಾಣಿ ಪ್ರೇಮಿಗಳ ಒಡೆಯ ಹೊಸ ವರ್ಷದ ಪ್ರಯುಕ್ತ ಪುತ್ರ ವಿನೀಶ್‌ ಜೊತೆ ಕುದುರೆ ಸವಾರಿ ಹೊರಟ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಕೀನ್ಯಾದ ಕಾಡಲ್ಲಿ ಗಜರಾಜನೊಂದಿಗೆ ದಿನ ಕಳೆದ ಡಿ-ಬಾಸ್!

ಡಿ-ಕಂಪನಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಅಪ್ಲೋಡ್‌ ಮಾಡಲಾಗಿದ್ದು ಲಿಂಕ್‌ನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಕ್ಟೋಬರ್‌ನಲ್ಲಿ ಕೀನ್ಯಾದ ಮಾಸಿಯಾ ಮಾರಾದಲ್ಲಿ ಗಜರಾಜನೊಂದಿಗೆ  ಪ್ರೊಫೆಷನಲ್‌ ಕ್ಯಾಮೆರಾ ಬಳಸುತ್ತಿರುವ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.  ಹಾಗೂ ಹಾಟ್ ಏರ್‌ ಬಲೂನ್‌ನಲ್ಲಿ ಕಾಣಿಸಿಕೊಂಡ ದರ್ಶನ್‌ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. 

 

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾದ ದರ್ಶನ್ ಬೇರೆ ದೇಶಗಳಿಗೆ ತೆರಳಿ ಪ್ರಾಣಿ ಬಗ್ಗೆ ತೋರಿಸುತ್ತಿರುವ ಪ್ರೀತಿ ಹಾಗೂ ಕಾಳಜಿಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.