ರಾಬರ್ಟ್ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ್ ಕೀನ್ಯಾದ ಪ್ರಸಿದ್ದ ಕಾಡೊಂದರಲ್ಲಿ ವೈಲ್ಡ್ ಲೈಫ್ ಫೋಟೋ ಶೂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
ಪ್ರಾಣಿಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ದರ್ಶನ್ ಸಮಯ ಸಿಕ್ಕಾಗೆಲ್ಲಾ ಫೋಟೋಶೂಟ್ ಗೆಂದು ಸ್ನೇಹಿತರೊಂದಿಗೆ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಸೆರೆ ಹಿಡಿದ ಫೋಟೋಗಳಿಗೆ ಫ್ರೇಮ್ ಹಾಕಿಸಿ ಪ್ರದರ್ಶನ ವೇಳೆ ಮಾರಾಟ ಮಾಡಿ ಅದರಿಂದ ಗಳಿಸಿದ ಹಣವನ್ನು ಸಮಾಜದ ಸಹಾಯಕ್ಕೆಂದು ಬಳಸುತ್ತಾರೆ.
ಕುರುಕ್ಷೇತ್ರ ಚಿತ್ರದ ಹಿಟ್ ನಂತರ ಬಿಡುವಿಲ್ಲದೆ ರಾಬರ್ಟ್ ಶೂಟಿಂಗ್ ಗೆ ಹಾಜರಾದ ದರ್ಶನ್ ಕೊಂಚ ಬ್ರೇಕ್ ಬೇಕೆಂದು ಸ್ನೇಹಿತರೊಂದಿಗೆ ಕ್ಯಾಮೆರಾ ಹಿಡಿದು ಕೀನ್ಯಾದ ಮಾಸಿಯಾ ಮಾರಾ (Maasai Mara)ದತ್ತ ಹೊರಟಿದ್ದಾರೆ. ನಟನೆಯಷ್ಟೇ ಪೋಟೋಗ್ರಫಿಯನ್ನು ಇಷ್ಟಪಡುವ ದರ್ಶನ್ ಪ್ರೋಫೆಷನಲ್ ಕ್ಯಾಮೆರಾ ಬಳಸುತ್ತಾರೆ. ದರ್ಶನ್ ಫೋಟೋ ಸೆರೆ ಹಿಡಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವೇಳೆ ಹಾಟ್ ಏರ್ ಬಲೂನ್ ನಲ್ಲಿ ಕಾಣಿಸಿಕೊಂಡ ದರ್ಶನ್ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾದ ದರ್ಶನ್ ಬೇರೆ ದೇಶಗಳಿಗೆ ತರಳಿ ಪ್ರಾಣಿಗಳ ಬಗ್ಗೆ ತೋರಿಸುತ್ತಿರುವ ಕಾಳಜಿ ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ಹಿಂದೆ ದರ್ಶನ್ ಕ್ಲಿಕ್ಕಿಸಿದ ಆನೆ ಫೋಟೋವನ್ನು ಹಾಸ್ಯ ನಟ ಚಿಕ್ಕಣ್ಣ 1 ಲಕ್ಷ ರೂಪಾಯಿ ಕೊಟ್ಟ ಪಡೆದುಕೊಂಡಿದ್ದರು.
