2019ರ ಲೋಕಸಭಾ ಚುನಾವಣೆ  ಪಕ್ಷೇತರ  ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಎದುರು ಅಪರೂಪದ  ಸನ್ನಿವೇಶವೊಂದು ಎದರಾಯ್ತು . ಮೈಸೂರು ಜಿಲ್ಲೆ ಕೆ. ಆರ್‌. ಪೇಟೆ ತಾಲೂಕಿನ  ಕಾಳಮ್ಮನ ಕೊಪ್ಪಲು  ಗ್ರಾಮದಲ್ಲಿ ಪ್ರಚಾರ ಮಾಡುತ್ತಾ  ಸಂಚರಿಸುತ್ತಿದ್ದ ದರ್ಶನ್‌ ವಾಹನಕ್ಕೆ ಜನರು ಪ್ರೀತಿಯಿಂದ ಕರೆಯುವ  ಬಸವ  ಅಡ್ಡ ಬಂದಿದ್ದ . ಜನರು ಎಷ್ಟೇ ಕೂಗಾಡಿದರು, ನೂಕಾಡಿದರು ಸರೆಯದ  ಬಸವ ದರ್ಶನ್‌ ಸ್ಪರ್ಶ ತಾಗಿದ ನಂತರ ಪಕ್ಕಕೆ ಸರೆಯಿತು . 

ಅನಾರೋಗ್ಯದಿಂದ ಬಳುತ್ತಿರುವ ಬಸವ:

ಕೆಲ ದಿನಗಳ ಹಿಂದೆ ಬಸವನನ್ನು ಸಾಕಿದ ಮಾಲೀಕ ವಿಡಿಯೋ ಮೂಲಕ ದರ್ಶನ್‌ಗೆ ಸಂದೇಶ ತಲುಪಿಸುವ ಪ್ರಯತ್ನ ಮಾಡಿದರು.  ಮೇವು, ನೀರು ಬಿಟ್ಟು ನಿತ್ರಾಣವಾಗಿರುವ ದೃಶ್ಯವನ್ನು ಹಂಚಿಕೊಂಡಿದ್ದರು. ಲಾಕ್‌ಡೌನ್‌ ಇದ್ದ ಕಾರಣ ಯಾವ ವೃದ್ಯರನ್ನೂ  ಸಂಪರ್ಕಿಸಲು ಸಾಧ್ಯವಾಗದ ಕಾರಣ ಅದೇ ಕಾಳಮ್ಮ ದೇವಾಲಯ ಆವರಣದಲ್ಲಿ ಗ್ರಾಮಸ್ಥರು ಆರೈಕೆ ಮಾಡಲು ಪ್ರಯತ್ನಿಸುತ್ತಿದ್ದರು.

ನಟ ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಕೆ.ಆರ್.ನಗರ ಬಸವನಿಗೆ ಅನಾರೋಗ್ಯ

ಬಸವನ ನೆರವಿಗೆ ಡಿ-ಬಾಸ್:

ಲಾಡ್‌ಕೌನ್‌ ಸಮಯದಲ್ಲಿ  ಬಸವ ನರಳುತ್ತಿರುವುದನ್ನು  ನೋಡಲಾಗದೆ ದರ್ಶನ್‌ ತನ್ನ ಸ್ನೇಹಿತರೊಟ್ಟಿಗೆ ಪಶು ವೈದ್ಯರನ್ನು ಕಾಳಮ್ಮನ ಕೊಪ್ಪಲಿಗೆ ಕಳುಹಿಸಿಕೊಟ್ಟಿದ್ದಾರೆ. ಚಿಕಿತ್ಸೆ ಹಾಗೂ ಔಷಧಿ  ಕೊಡಿಸಿ ಬಸವ ಬೇಗ ಗುಣಮುಖನಾಗಲು ಎಲ್ಲಾ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದಾರೆ. 

ಕೆ.ಆರ್‌. ಪೇಟೆ ಜನರು ದರ್ಶನ್‌ ನೆಚ್ಚಿನ ಬಸವನಿಗೆ ಸಹಾಯ ಮಾಡಲು ಕೇಳಿಕೊಂಡಿದ್ದರು. ಇಷ್ಟು ಬೇಗ ದರ್ಶನ್‌ ಸ್ಪಂದಿಸಿದ ಬಗ್ಗೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ದರ್ಶನ್ ಗೆ ಜೈಕಾರ ಕೂಗಿದ್ದಾರೆ.

"

ಪ್ರಾಣಿ ಪ್ರೇಮಿ ದರ್ಶನ್:

ಏನೇ ಹೇಳಿ ಮನೆ ಬಾಗಿಲಿಗೆ ಕಷ್ಟ ಎಂದು ಬಂದವರಿಗೆ ಇಲ್ಲ ಅನ್ನದೆ ಸಹಾಯ ಮಾಡುವ ದರ್ಶನ್‌ ಒಮ್ಮೆ ಪ್ರಾಣಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದ ತಕ್ಷಣವೇ ಚಿಕಿತ್ಸೆ ಕೊಡಿಸುವ ವ್ಯವಸ್ತೆ ಮಾಡುತ್ತಾರೆ. ನಾಯಿ, ಕುದುರೆ, ಹಸು, ಎತ್ತು, ಮೊಲ ಹಾಗೂ ಅನೇಕ ಪ್ರಾಣಿ- ಪಕ್ಷಿಗಳನ್ನು ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಸಾಕಿರುವ ದರ್ಶನ್‌ ಬಿಡುವಿನ ಸಮಯದಲ್ಲಿ ಅವುಗಳ ಜೊತೆ ಕಾಲ ಕಳೆಯುತ್ತಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ದರ್ಶನ್‌ ಜನರಿಗೆ ಸಹಾಯ ಮಾಡಲು ವರ್ಷಕ್ಕೆ 2 ಕೋಟಿ ಬೇಕಾಗುತ್ತದೆ ಹಾಗೂ ಪ್ರಾಣಿಗಳ ಆರೈಕೆಗೆ  ಸುಮಾರು 1 ಕೋಟಿ ಬೇಕಾಗುತ್ತದೆ ಎಂದು ಹೇಳಿದರು. ಈ ಮಾತುಗಳನ್ನು ಕೇಳಿ ಕಂಗಾಲಾಗಿದ್ದ  ಅಭಿಮಾನಿಗಳು ಈಗ  ದರ್ಶನ್‌ ಕೆಲಸಗಳನ್ನು ನೋಡಿ ಹೌದು ಎಂದು ಒಪ್ಪಿಕೊಂಡರು.