Asianet Suvarna News Asianet Suvarna News

ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು, ಬಹುಭಾಷಾ ನಟ ಸಾಯಿಕುಮಾರ್ ಹೇಳಿದ್ದೇನು ನೋಡಿ..!

 'ಈ ಘಟನೆ ನಂಬೋಕೆ ಆಗ್ತಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು.' ಎಂದಿದ್ದಾರೆ. ಈಗಾಗಲೇ ದರ್ಶನ್​ ಕೊಲೆ ಪ್ರಕರಣ ಕುರಿತಾಗಿ ಅನೇಕರು ರಿಯಾಕ್ಷನ್​ ಕೊಟ್ಟಿದ್ದಾರೆ. ಇನ್ನು ಕೆಲವರು ದರ್ಶನ್​ ನೋಡಲು ಜೈಲಿಗೆ..

actor sai kumar talks about darshan and renukaswamy murder case srb
Author
First Published Jul 4, 2024, 12:10 PM IST

ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರ ಹತ್ಯೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 13 ದಿನ ಆಗಿದೆ. ಪ್ರೇಕ್ಷಕರನ್ನ ರಂಜಿಸಬೇಕಿದ್ದ ದರ್ಶನ್​ ಮೇಲೆ ಈಗ ಕೊಲೆ ಗಡುಕ ಅನ್ನೋ ಆರೋಪ ಬಂದಿದೆ. ಆದ್ರೆ ಈ ಆರೋಪ ಕೆಲ ದೊಡ್ಡ ಕಲಾವಿಧರಿಗೆ ಶಾಕ್ ಆಗಿದೆ. ಒಳ್ಳೆ ಸಿನಿಮಾಗಳಿಗೆ ಹೆಸರುವಾಸಿಯಾಗಬೇಕಿದ್ದ ಒಬ್ಬ ಹೀರೋ ಇಂತಹ ಕೆಲಸಕ್ಕೂ ಇಳಿತಾರಾ ಅಂತ ಹೇಳುತ್ತಿದ್ದಾರೆ. 

ಇದೀಗ ಬಹುಭಾಷ ನಟ ಸಾಯಿಕುಮಾರ್ ಕೂಡ ದರ್ಶನ್​ ಪ್ರಕರಣ ನೋಡಿ ಶಾಕ್​​ಗೆ ಒಳಗಾಗಿದ್ದಾರೆ. ಬಹುಭಾಷಾ ನಟ ಸಾಯಿ ಕುಮಾರ್​ ಪೃಥ್ವಿ ಅಂಬರ್ ಹಾಗು ಧನ್ಯಾ ರಾಮ್​ ಕುಮಾರ್ ನಟಿಸುತ್ತಿರೋ ಚೌಕಿದಾರ್ ಸಿನಿಮಾದ ಮಹೂರ್ತಕ್ಕೆ ಬಂದಿದ್ರು. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರೋ ಚೌಕಿದಾರ್ ಸಿನಿಮಾದಲ್ಲಿ ಸಾಯಿ ಕುಮಾರ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಡೆದ ಈ ಮಹೂರ್ತ ಕಾರ್ಯಕ್ರಮಕ್ಕೆ ಬಂದಿದ್ದ ಸಾಯಿ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್​​​​​​ ಜೊತೆ ಮಾತಿಗೆ ಸಿಕ್ಕಿದ್ರು. 

ಮತ್ತೆ ಕಿರುತೆರೆಗೆ ಬಂದ್ರು ಅಶ್ವಿನಿ ನಕ್ಷತ್ರ ಖ್ಯಾತಿ ಮಯೂರಿ; ಎಲ್ಲಾ ಓಕೆ, ನನ್ನ ದೇವ್ರು ಅಂತಿರೋದ್ಯಾಕೆ..?

ಆಗ ದರ್ಶನ್ ಬಗ್ಗೆಯೂ ಮಾತನಾಡಿದ್ದಾರೆ. 'ಈ ಘಟನೆ ನಂಬೋಕೆ ಆಗ್ತಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು.' ಎಂದಿದ್ದಾರೆ. 
ಈಗಾಗಲೇ ದರ್ಶನ್​ ಕೊಲೆ ಪ್ರಕರಣ ಕುರಿತಾಗಿ ಅನೇಕರು ರಿಯಾಕ್ಷನ್​ ಕೊಟ್ಟಿದ್ದಾರೆ. ಇನ್ನು ಕೆಲವರು ದರ್ಶನ್​ ನೋಡಲು ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಸದ್ಯ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ 13 ದಿನಗಳ ಕಳೆದಿದ್ದು, 14ನೇ ದರ್ಶನ್ ಭವಿಷ್ಯ ಏನಾಗಲಿದೆ ಅಂತ ಗೊತ್ತಾಗುತ್ತೆ.

ಹೇಳಲು ಆಗದೇ ಇರುವ ಹಲವಾರು ಸಂಗತಿಗಳು ನಮ್ಮ ಬಳಿ ಇವೆ, ಇನ್ಮುಂದೆ ಅವೆಲ್ಲ ಬರಲಿವೆ; ನಟ ಯಶ್..!

ಆದರೆ, ಯಾವುದೋ ಕಾರಣಕ್ಕೆ ನಟ ದರ್ಶನ್ ಅವರನ್ನು ಕೋರ್ಟ್ಗೆ ಹಾಜರು ಪಡಿಸಿಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೇಸ್ ಏನಾಗಲಿದೆ ಎಂಬುದನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ನಟಿ, ಪವಿತ್ರಾ ಗೌಡ ಈ ಕೊಲೆ ಕೇಸಿನಲ್ಲಿ ನಂಬರ್ ಒನ್ ಆರೋಪಿಯಾಗಿದ್ದು, ನಟ ದರ್ಶನ್ ಅವರು ನಂಬರ್ 2 ಆರೋಪಿ ಎನ್ನಲಾಗಿದೆ. ಉಳಿದ 15 ಜನರು ಸೇರಿದಂತೆ ಒಟ್ಟೂ 17 ಜನರು ಈ ಕೊಲೆ ಕೇಸ್‌ನಲ್ಲಿ ಆರೋಪಿಗಳಾಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 

ಕಿಡ್ನಾಪ್ ಅನ್ನೋಕೆ ಅವ್ನ ಏನೂ ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ; 'ಓಂ' ನಟ ಹರೀಶ್ ರಾಯ್!

Latest Videos
Follow Us:
Download App:
  • android
  • ios