ನಟ ದರ್ಶನ್‌ ತೋಟದ ಮನೆಯಲ್ಲಿ ಬೈಕ್ ಓಡಿಸಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್ ದರ್ಶನ್ ಕೆಲ ದಿನಗಳಿಂದ ಮೈಸೂರಿನ ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಕ್ಕ ಪಕ್ಕದ ಊರುಗಳಿಗೆ ತೆರಳಿ ಮೇಕೆ-ಕುರಿ, ಕುದುರೆಗಳನ್ನು ತಮ್ಮ ತೋಟಕ್ಕೆ ಕರೆ ತಂದಿದ್ದಾರೆ. ಅವುಗಳ ಜೊತೆ ಸಮಯ ಕಳೆಯುತ್ತಾ ದರ್ಶನ್‌ ಬೈಕ್ ಓಡಿಸಿದ್ದಾರೆ.

"

ಚಿರು ಸಾವಿನ ಬಗ್ಗೆ ಆರೋಪ: ದರ್ಶನ್ ಪ್ರತಿಕ್ರಿಯೆ ಮುಖಕ್ಕೆ ಹೊಡೆದಂಗಿತ್ತು..! 

ಹೌದು! ಇದು ಹಳದಿ ಬಣ್ಣದ ಜಾವಾ ಬೈಕ್ ಆಗಿದ್ದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಬೈಕ್ ಎಮೋಜಿ ಹಾಕಿದ್ದಾರೆ. ದಚ್ಚು ಶೇರ್ ಮಾಡಿದ ಕಲವೇ ನಿಮಿಷಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ. 

View post on Instagram

ಈ ಹಿಂದೆ ಧಾರಾವಾಡದ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಅವರ ಹಾಲಿನ ಡೈರಿಗೆ ಭೇಟಿ ನೀಡಿ ಮೇಕೆ-ಕುರಿಗಳನ್ನು ತಂದಿದ್ದಾರೆ. ಅಲ್ಲದೆ ದಾವಣಗೆರೆ ಮಲ್ಲಿಕಾರ್ಜುನ್‌ ಫಾರ್ಮ್‌ಹೌಸ್‌ಗೆ ಹಳದಿ ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿದ್ದಾರೆ. ಹಲವು ವರ್ಷಗಳ ನಂತರ ದರ್ಶನ್‌ರನ್ನು ಭೇಟಿ ಮಾಡಿರುವ ಕಾರಣ ಗೆಳೆಯನಿಗೆ ಎರಡು ಕಪ್ಪು ಬಣ್ಣದ ಕುದುರೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಶೂಟಿಂಗ್‌ ಇಲ್ಲದೆ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ದರ್ಶನ್‌ ತೋಟದಲ್ಲಿ ಪ್ರಾಣಿಗಳ ಜೊತೆ ಕಳೆಯುತ್ತಾ ಅವುಗಳ ಆರೈಕೆ ಮಾಡುತ್ತಿದ್ದಾರೆ.