Asianet Suvarna News Asianet Suvarna News

ದರ್ಶನ್ ಜೊತೆ ಸ್ನೇಹ ಬೆಳಸೋದು ಕಷ್ಟ, ಉಳಿಸಿಕೊಳ್ಳೋದು ಕಷ್ಟ ಅಂತಾರಲ್ಲ, ಯಾಕಿರಬಹುದು..!?

ದರ್ಶನ್ ಆತ್ಮೀಯ ಬಳಗದಲ್ಲಿ ಹೆಚ್ಚು ಒಡನಾಟ ಹೊಂದಿದ್ದ ಸ್ಟಾರ್ ನಟ ಕಿಚ್ಚ ಸುದೀಪ್. ಇವರಿಬ್ಬರ ಮಧ್ಯೆ ಸ್ನೇಹ ಬೆಸೆದಿದ್ದು 2005ರಲ್ಲಿ ಅಂತ ಚಿತ್ರರಂಗದ ಮಂದಿ ಹೇಳುತ್ತಾರೆ. 1997ರ ಸಮಯದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸುದೀಪ್​ ಮತ್ತು ದರ್ಶನ್..

kannada actor darshan and his industry friends relationships and breakups issues srb
Author
First Published Aug 11, 2024, 2:34 PM IST | Last Updated Aug 11, 2024, 2:40 PM IST

ಫ್ರೆಂಡ್​ಶಿಪ್​ ಅಂದ್ರೆ ರಕ್ತ ಸಂಬಂಧಗಳ ಮೀರಿದ ಬಂಧ.. ಯಾರು ಯಾವಾಗ ಬೇಕಾದ್ರು ಸ್ನೇಹಿತರಾಗಬಹುದು, ಆ ಸ್ನೇಹ ಮುರಿದೂ ಬೀಳಬಹುದು. ಹಾಗೆ ನಟ ದರ್ಶನ್​ (Actor Darshan) ಕೂಡ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅಂತ ಇದ್ದವರೇ. ಆದ್ರೆ ದರ್ಶನ್​ಗೆ ಆ ಸ್ನೇಹವನ್ನ ಗಟ್ಟಿಯಾಗಿ ಇಟ್ಟುಕೊಳ್ಳೋದರಲ್ಲಿ ಸ್ವಲ್ಪ ಸಮಸ್ಯೆ ಆಗಿದೆಯೇನೋ ಅನ್ನಿಸಿ ಬಿಡುತ್ತೆ. ಯಾಕಂದ್ರೆ ದರ್ಶನ್​​ ಜೊತೆ ಸ್ನೇಹ ಬೆಳೆಸಿ ಅದನ್ನ ಕಳೆದುಕೊಂಡು ದೂರಾದವರ ಕೆಲವರಿದ್ದಾರೆ. ಆ ಬಗ್ಗೆ ಚಿಕ್ಕದೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..
 
ಚಾಲೆಂಜಿಂಗ್ ಸ್ಟಾರ್ ದರ್ಶನ್.. ಈಗ ಪರಪ್ಪನ ಅಗ್ರಹಾರ ಜೈಲಿನ ಸೆಲೆಬ್ರಿಟಿ. ಒಂದು ಕೊಲೆಯ ಆರೋಪ ದರ್ಶನ್​​ರನ್ನ 51 ದಿನಗಳಿಂದ ಜೈಲಿನಲ್ಲಿ ಕಳೆಯೋ ಹಾಗೆ ಮಾಡಿದೆ. ಇಂತಹ ದರ್ಶನ್​​​ಗೆ ದೊಡ್ಡ ಸ್ನೇಹಿತರ ಗುಂಪೇ ಇದೆ. ಆದ್ರೆ ಕೆಲವೊಬ್ರನ್ನ ಬಿಟ್ಟರೆ ಮತ್ತಿನ್ಯಾರು ದರ್ಶನ್​​ನ ನೋಡೋಕೆ ಜೈಲ್​ ಕಡೆ ವಾಕ್ ಮಾಡಿಲ್ಲ. ದರ್ಶನ್ ಇತ್ತೀಚೆಗೆ ತನ್ನ ಸುತ್ತ ಕಟ್ಟಿಕೊಂಡಿರೋ ಸ್ನೇಹಿತರ ಗ್ಯಾಂಗ್ ಅಂದ್ರೆ, ತರುಣ್ ಸುಧೀರ್, ವಿನೋದ್ ಪ್ರಭಾಕರ್, ಜಮೀರ್ ಪುತ್ರ ಝೈದ್ ಖಾನ್, ಪ್ರಜ್ವಲ್​ ದೇವರಾಜ್, ಚಿಕ್ಕಣ್ಣ, ಧನ್ವೀರ್​, ಯಶಸ್ ಸೂರ್ಯ...

ಕಿಚ್ಚ ಸುದೀಪ್ ಅಂದು ಹೇಳಿದ್ದ ಮಹಾನ್ ಸೀಕ್ರೆಟ್ ಇಂದು ಹೀಗ್ಯಾಕೆ ವೈರಲ್ ಆಗ್ತಿದೆ ನೋಡಿ!

ಸ್ಯಾಂಡಲ್​ವುಡ್​ ದಾಸ ಅಂತ ಕರೆಸಿಕೊಳ್ಳೋ ದರ್ಶನ್ ಜೊತೆ ಸ್ನೇಹ ಬೆಳೆಸಿಕೊಳ್ಳೋದು ಕಷ್ಟ. ಅದನ್ನ ಉಳಿಸಿಕೊಳ್ಳೋದು ಕಷ್ಟ ಅಂತ ಕೆಲವರು ಹೇಳ್ತಾರೆ. ಯಾಕಂದ್ರೆ ದರ್ಶನ್​ ಕ್ಯಾರೆಕ್ಟರೇ ಅಂತದ್ದು. ದರ್ಶನ್ ಎಲ್ಲರನ್ನೂ ನಂಬೋಲ್ಲವಂತೆ. ನಂಬಿದ್ರೂ ಅವರ ಸ್ನೇಹವನ್ನ ಹೆಚ್ಚು ದಿನಗಳ ವರೆಗೆ ಉಳಿಸಿಕೊಳ್ಳೋಲ್ಲವಂತೆ. ಹೀಗಾಗೆ ದರ್ಶನ್ ಜೊತೆ ಸ್ನೇಹ ಬೆಳೆಸೋದು ಕಷ್ಟ, ಉಳಿಸಿಕೊಳ್ಳೋದು ಕಷ್ಟ. ಹಾಗೆ ಸ್ನೇಹ ಬೆಳೆಸಿ ಕಳೆದುಕೊಂಡ ಕನ್ನಡದ ದೊಡ್ಡ ಸ್ಟಾರ್ ನಟರ ದಂಡೇ ಇದೆ. 

ದರ್ಶನ್ ಆತ್ಮೀಯ ಬಳಗದಲ್ಲಿ ಹೆಚ್ಚು ಒಡನಾಟ ಹೊಂದಿದ್ದ ಸ್ಟಾರ್ ನಟ ಕಿಚ್ಚ ಸುದೀಪ್. ಇವರಿಬ್ಬರ ಮಧ್ಯೆ ಸ್ನೇಹ ಬೆಸೆದಿದ್ದು 2005ರಲ್ಲಿ ಅಂತ ಚಿತ್ರರಂಗದ ಮಂದಿ ಹೇಳುತ್ತಾರೆ. 1997ರ ಸಮಯದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸುದೀಪ್​ ಮತ್ತು ದರ್ಶನ್​ ನಂತರದಲ್ಲಿ ಸ್ಟಾರ್​ ಕಲಾವಿದರಾಗಿ ಬೆಳೆದ್ರು. ಸೋಲು-ಗೆಲುವು ಏನೇ ಇದ್ದರೂ ಇಬ್ಬರ ನಡುವಿನ ಸ್ನೇಹ ಗಟ್ಟಿ ಆಗಿತ್ತು. ಸಿನಿಮಾ ಸಮಾರಂಭಗಳ ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. 

ಸೋನಲ್ ಯಾಕೆ ನಟ ದರ್ಶನ್‌ ನೋಡಲು ಇನ್ನೂ ಜೈಲಿಗೆ ಹೋಗಿಲ್ಲ? ಕಾರಣ ಬಿಚ್ಚಿಟ್ಟ ನಟಿ !

ಆದ್ರೆ 2017ರಲ್ಲಿ ಇವರಿಬ್ಬರ ಫ್ರೆಂಡ್​ಶೀಪ್​​ಗೆ ಸ್ವತಃ ದರ್ಶನ್​ ಅವರೇ ಎಳ್ಳು ನೀರು ಬಿಟ್ರು. ಆದ್ರೆ ಸುದೀಪ್ ಮಾತ್ರ ಇಂದಿಗೂ ದರ್ಶನ್ ನನ್ನ ಸ್ನೇಹಿತನೇ ಅಂತ ಹೇಳುತ್ತಾರೆ.. ದರ್ಶನ್ ಸುದೀಪ್ ಸ್ನೇಹ ಹೇಗಿತ್ತೋ ಅದೇ ತರ ನಟ ಸೃಜನ್ ಲೋಕೇಶ್​ ಹಾಗು ದರ್ಶನ್ ಕೂಡ ಇದ್ರು. ಇವರಿಬ್ಬರು ಚಡ್ಡಿ ದೋಸ್ತ್​​ಗಳು ಆಗಿದ್ದವರು. ಯಾಕಂದ್ರೆ ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್​ ಹಾಗು ಸೃಜನ್ ತಂದೆ ಲೋಕೇಶ್ ಸ್ನೇಹಿತರು. ಆ ಅಪ್ಪಂದಿರ ಸ್ನೇಹ ಮಕ್ಕಳಲ್ಲೂ ಬೆಳೆದಿತ್ತು. ನವಗ್ರಹ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ರು.

ದರ್ಶನ್ ಸೃಜನ್ ಮೈಸೂರಿನವರೇ ಆಗಿದ್ದಿದ್ರಿಂದ ಇಬ್ಬರ ಗೆಳೆತನ ಕಲ್ಲು ಬಂಡೆಯಂತಿತ್ತು. ಆದ್ರೆ ಸೃಜನ್ ದರ್ಶನ್​ ಕಲ್ಲು ಬಂಡೆಯಂತಾ ಸ್ನೇಹಕ್ಕೆ ಅದ್ಯಾರು ಸುತ್ತಿಗೆ ಏಟು ಬಿತ್ತೋ ಗೊತ್ತಿಲ್ಲ. ದರ್ಶನ್​ರಿಂದ ಸೃಜನ್ ನಿಧಾನವಾಗಿ ದೂರಾದ್ರು. ಕಾರಣ ಏನು ಅನ್ನೋದನ್ನ ಇಬ್ಬರೂ ಎಲ್ಲೂ ಹೇಳಿಕೊಳ್ಳಲಿಲ್ಲ. ಭಟ್ ದರ್ಶನ್ ರಿಂದ ಶೃಜನ್ ಅಂತರ ಕಾಯ್ದುಕೊಂಡಿರೋದಂತು ನಿಜ..

ದರ್ಶನ್ ಹಾಗು ಧ್ರುವ ಸರ್ಜಾ ಕೂಡ ಬೆಸ್ಟ್ ಸ್ನೇಹಿತರೇ ಆಗಿದ್ದವರು. ಇಬ್ಬರು. ಪ್ರೇಮ ಬರಹ ಸಿನಿಮಾದಲ್ಲಿ ಜೈ ಹನುಮಾನ್ ಅಂತ ಒಟ್ಟಿಗೆ ಹಾಡಿಗೆ ಕುಣಿದಿದ್ರು. ಆದ್ರೆ ಆ ಆಂಜನೇಯ ಕೂಡ ಇಬ್ಬರ ಸ್ನೇಹವನ್ನ ಗಟ್ಟಿಗೊಳಿಸಲಿಲ್ಲ. ಧ್ರುವ ಸರ್ಜಾ ಜೊತೆ ದರ್ಶನ್​ ಕಿತ್ತಾಡಿಕೊಂಡಿದ್ರು. ಅದಕ್ಕಾಗೆ ನನ್ನ ಕೆಲ ಪ್ರಶ್ನೆಗಳಿಗೆ ದರ್ಶನ್ ಉತ್ತರ ಕೊಡಬೇಕು ಅಂತ ಧ್ರುವ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ರು. ಇದಕ್ಕೆಲ್ಲಾ ಕಾರಣ ಪ್ರೇಮ ಬರಹ ಸಿನಿಮಾದ ವ್ಯವಹಾರದ ವಿಚಾರ ಅನ್ನೋ ಮಾತು ಸಧ್ಯ ಚಾಲ್ತಿಯಲ್ಲಿದೆ. 

ಜೈಲಿಂದ ದರ್ಶನ್ ಬಿಡುಗಡೆ ಯಾವಾಗ? ಈ ಬಗ್ಗೆ ಕಾಳಿಕಾ ಮಾತೆ ಉಪಾಸಕರು ಹೇಳಿದ್ದೇನು?

ಸ್ಯಾಂಡಲ್​ವುಡ್​ನಲ್ಲಿ 40 ವರ್ಷಗಳಿಂದ ಕೆಲಸ ಮಾಡುತ್ತಿರೋ ಸ್ಟಾರ್​​​​ ನಟ ಜಗ್ಗೇಶ್​ ರನ್ನೂ ದರ್ಶನ್ ಬಿಟ್ಟಿಲ್ಲ. ಜಗ್ಗೇಶ್​ ಹಿರಿಯ ನಟ ಅಂತಲೂ ಗೌರವಿಸದ ದರ್ಶನ್ ಸಂಗಡಿಗರು ಜಗ್ಗೇಶ್​ ಮೇಲೆ ಅಟ್ಯಾಕ್ ಮಾಡಿದ್ರು. ಜಗ್ಗೇಶ್​ರನ್ನ ಹೀನಾ ಮಾನ ಬೈದಿದ್ರು. ಇದರ ಹಿಂದೆ ದರ್ಶನ್ ಇದ್ದಾರೆ ಅನ್ನೋ ಮಾತು ಇತ್ತು. ಕೊನೆಗೆ ನಟ ಜಗ್ಗೇಶ್ ದರ್ಶನ್ ಸಹವಾಸವೇ ಬೇಡ ಅಂತ ಕಿಲ್ಲಿಂಗ್ ಸ್ಟಾರ್​ರಿಂದ ದೂರ ಉಳಿದುಕೊಂಡಿದ್ದಾರೆ.. 

ನಟ ದರ್ಶನ್ ಯಾರೊಂದಿಗೂ ಸರಿ ಇರಲ್ಲ ಅನ್ನೋದಕ್ಕೆ ಇದೊಂದು ವೀಡಿಯೋ ಸಾಕು. ಮಾಧ್ಯಮಗಳ ಜೊತೆ ಮಾತನಾಡೋ ಬರದಲ್ಲಿ ಡಾಕ್ಟರ್ ರಾಜ್​ಕುಮಾರ್​ ಮಗ ಪುನೀತ್ ರಾಜ್​ಕುಮಾರ್ ಬಳಿ ಇರೋ ಕಾರೇ ನನ್ನ ಬಳಿಯೂ ಇದೆ ಅಂತ ಮಾತನಾಡಿದ್ರು. ಇದು ಪುನೀತ್​ ಮೇಲೆ ದರ್ಶನ್​​ಗಿದ್ದ ಹಗೆತನವನ್ನ ಎತ್ತಿ ತೋರಿಸಿತ್ತು.. 

ಸಿನಿ ಇಂಡಸ್ಟ್ರಿಯಲ್ಲಿ ದರ್ಶನ್​ ಸ್ನೇಹ ಕಳೆದುಕೊಂಡವರು ಬರೋ ನಟರು ಮಾತ್ರವಲ್ಲ. ಇಲ್ಲಿ ನಿರ್ಮಾಪಕರು ಇದ್ದಾರೆ. ನಿರ್ದೇಶಕರು ಇದ್ದಾರೆ. ತನ್ನ ರಾಬರ್ಟ್​ ಸಿನಿಮಾಗೆ 50 ಕೋಟಿಗೂ ಅಧಿಕ ಬಂಡವಾಳ ಹೂಡಿದ್ದ ನಿರ್ಮಾಪಕ ಉಮಾಪತಿ ಜೊತೆಗೆ ದರ್ಶನ್ ಕಿತ್ತಾಟ ಇನ್ನೂ ಹಸಿ ಹಸಿಯಾಗೆ ಇದೆ. ಆ ಕಡೆ ದರ್ಶನ್ ಬಲಗೈ ತರ ಇದ್ದ ಸಂದೇಶ್ ನಾಗರಾಜ್​​ ಕೂಡ ದರ್ಶನ್​​ ಸ್ನೇಹದಿಂದ ನೊಂದು ಬೆಂದವರೇ. 

ಇಲ್ಲ ಮೇಡಂ, ಆ ತರ ಏನೂ ಇಲ್ಲ, ರ್‍ಯಾಪಿಡ್ ರಶ್ಮಿ ಮಾತಿಗೆ ಅಡ್ಡಡ್ಡ ತಲೆ ಅಲ್ಲಾಡಿಸಿದ ಹಿತಾ ಚಂದ್ರಶೇಖರ್!

ಇನ್ನು ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಜೋಗಿ ಪ್ರೇಮ್​​ಗೆ ಪುಡಾಂಗ್ ಅಂತ ಹೇಳಿದ್ದ ದರ್ಶನ್ ನಿರ್ದೇಶಕ ಓಂ ಪ್ರಕಾಶ್​ ರಾವ್ ಮೇಲೆ ಮುನಿಸಿಕೊಂಡಿರೋದನ್ನ ಹೊಸದಾಗೇನು ಹೇಳಬೇಕಿಲ್ಲ. ಯಾವುದೇ ಚಿತ್ರರಂಗದಲ್ಲಿ ಎರಡು ಕುಟುಂಬಗಳ ನಡುವೆ, ಇಬ್ಬರು ತಾರೆಯರ ನಡುವೆ ವೈಮಸ್ಸು ಇದ್ದೇ ಇರುತ್ತೆ. ಅದು ಜಗತ್ತಿಗೂ ಗೊತ್ತಿರುತ್ತೆ. ಹಾಗಂತ ಈ ವೈಮನಸ್ಸು ಶಾಶ್ವತವೇನೂ ಅಲ್ಲ. ಯಾವಾಗ ಬೇಕಾದರೂ ಸರಿ ಹೋಗಬಹುದು..!

Latest Videos
Follow Us:
Download App:
  • android
  • ios