Asianet Suvarna News Asianet Suvarna News

ಕಿಚ್ಚ ಸುದೀಪ್ ಅಂದು ಹೇಳಿದ್ದ ಮಹಾನ್ ಸೀಕ್ರೆಟ್ ಇಂದು ಹೀಗ್ಯಾಕೆ ವೈರಲ್ ಆಗ್ತಿದೆ ನೋಡಿ!

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಯಾರೇ ಆಗಿರಲಿ, ಅದು ಅಲ್ಲಿ ಕೊಡುವ ಅರ್ಥವನ್ನಷ್ಟೇ ಗ್ರಹಿಸಿದರೆ ಸಾಕು. ಬದಲಿಗೆ, ಅದನ್ನು ಯಾವುದೋ ಘಟನೆಗೆ, ಇನ್ಯಾವುದೋ ಕಾಲಕ್ಕೆ ಎಳೆದುಕೊಂಡು ಹೋಗಿ ಅದಕ್ಕೊಂದು ವಿಶೇ‍ಷಾರ್ಥ ಕಲ್ಪಿಸಿ ಗಾಳಿಸುದ್ದಿ..

kannada star actor kichcha sudeep bigg boss kannada talk video becomes viral srb
Author
First Published Aug 7, 2024, 12:14 PM IST | Last Updated Aug 7, 2024, 12:14 PM IST

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಕನ್ನಡದ ದೊಡ್ಡ ಆಸ್ತಿ ಎಂಬಂತೆ ಬೆಳೆದಿದ್ದಾರೆ. ಸದ್ಯ ಮ್ಯಾಕ್ಸ್ ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ನಿಂತಿರುವ ನಟ ಸುದೀಪ್ ಅವರು ಹೇಳಿದ್ದ ಮಾತೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂ ಇರೋದೇ ಹಾಗೆ, ಇಲ್ಲಿ ಯಾವಾಗ ಯಾವ ವಿಷ್ಯ ವೈರಲ್ ಆಗುತ್ತದೆ, ಯಾರು ಯಾವುದನ್ನು ಹೈಲೈಟ್ ಮಾಡಿ ಎಲ್ಲಿಗೆ ಕನೆಕ್ಟ್ ಮಾಡುತ್ತಾರೆ ಎಂಬುದನ್ನು ಊಹಿಸುವುದು ಕೂಡ ಕಷ್ಟವೇ! 

'ಸಮ್‌ಟೈಂಸ್‌ ಗೊತ್ತಾಗಿನೂ ಗೊತ್ತಾಗ್ದೇ ಇರೋ ತರ ನಾವ್ ಇರ್ತೀವಲ್ಲಾ, ಅಲ್ಲಿಂದನೇ ಬೆಳೆತೀವಿ.. ' ಎಂದು ಸುದೀಪ್ ಮಾತನಾಡಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನಟ ಸುದೀಪ್ ಏನು ಹೇಳಿದ್ದಾರೆ ಎಂಬುದು ಎಲ್ಲರಿಗೂ ಅರ್ಥವಾಗುವ ಸಂಗತಿ. ಅದರಲ್ಲಿ ಗೂಡಾರ್ಥವೇನೂ ಇಲ್ಲ. ಆ ಸಂದರ್ಭಕ್ಕೆ ತಕ್ಕಂತೆ ಸುದೀಪ್ ಯಾರಿಗೋ ಏನನ್ನೋ ತಿಳಿಸಲು ಹೇಳಿರುತ್ತಾರೆ. ಅದೂ ಕೂಡ ಎಲ್ಲರಿಗು ಅರ್ಥವಾಗುವಂತಿದೆ. ಆದರೆ, ಅದಕ್ಕೆ ಈಗ ಬರುತ್ತಿರುವ ಕಾಮೆಂಟ್ ವಿಪರೀತ ಅರ್ಥ ಕೊಡುವಂತಿದೆ ಅಷ್ಟೇ. 

ಬಾಲಿವುಡ್ ಹಿರಿಯ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್ ಗಾಸಿಪ್‌; ಷ್ಯಡ್ಯಂತ್ರ ಯಾರದು? ಯಾಕೆ ಗೊತ್ತಾ?

ನಟ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 10ರ ವೇಳೆ ಸ್ಪರ್ಧಿ ಸಂಗೀತಾ ಶೃಂಗೇರಿ ಜೊತೆ ಮಾತನಾಡುತ್ತಾ ಈ ಮಾತು ಹೇಳಿದ್ದಾರೆ. ಬಿಗ್ ಬಾಸ್ ಕನ್ನಡದ ಆ ಎಪಿಸೋಡ್‌ನಲ್ಲಿ ಅದು ಸಂಗೀತಾಗೂ, ಎಲ್ಲರಿಗೂ ಸರಿಯಾಗಿಯೇ ಅರ್ಥವಾಗಿದೆ. ಆದರೆ, ಈಗ ಅದು ಇನ್ನೋನೋ ಅರ್ಥ ಹೊಂದಿರುವಂತೆ ಬಿಂಬಿಸಲಾಗುತ್ತಿದೆಯೇ? ಗೊತ್ತಿಲ್ಲ. ಏಕೆಂದರೆ, ಈ ಸೋಷಿಯಲ್ ಮೀಡಿಯಾದಲ್ಲಿ ಇರುವವರು ಯಾವುದಕ್ಕೆ ಯಾವ ಅರ್ಥವನ್ನು ಅದ್ಯಾವಾಗ ಕಲ್ಪಿಸುತ್ತಾರೋ ಹೇಳಲಾಗದು. 

ಆದರೆ, ಒಂದು ಸಂಗತಿಯಂತೂ ಸ್ಪಷ್ಟವಾಗಿದೆ. ನಟ ಸುದೀಪ್ ಅವರು ನಟಿ ಹಾಗು ಕಳೆದ ಸೀಸನ್ ಸ್ಪರ್ಧಿ ಸಂಗೀತಾ ಶೃಂಗೇರಿ ಅವರಿಗೆ ಹೇಳಿದ್ದ ಈ ಮಾತು ಆ ಗೇಮ್‌ಗೆ ಮಾತ್ರ ಸೀಮಿತ. ಅದು ಇನ್ಯಾವುದೇ ಘಟನೆಗೆ ಸಂಬಂಧಿಸಿದ್ದು ಅಲ್ಲ. ಮುಂದಿನ ಯಾವುದೇ ಸಿಚ್ಯೂವೇಶನ್ ನಟ ಸುದೀಪ್ ಅವರಿಗೆ ಮೊದಲೇ ಗೊತ್ತಿರಲು ಸಾಧ್ಯವಿಲ್ಲ. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಬರುವ ಯಾವುದೇ ವಿಡಿಯೋ, ಆಡಿಯೋಗಳನ್ನು ಅಂದಿನ ವಿಷಯ, ವರ್ತಮಾನಕ್ಕೆ ಅಷ್ಟೇ ಸೀಮಿತ ಗೊಳಿಸಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ರೆ, ಅದು ಅನಾವಶ್ಯಕ ಇಶ್ಯೂ ಕ್ರಿಯೇಟ್ ಮಾಡಿ ಹಲವರ ನಿದ್ದೆ ಕೆಡಿಸುವುದು ಖಂಡಿತ. 

ಜೈಲಿಂದ ದರ್ಶನ್ ಬಿಡುಗಡೆ ಯಾವಾಗ? ಈ ಬಗ್ಗೆ ಕಾಳಿಕಾ ಮಾತೆ ಉಪಾಸಕರು ಹೇಳಿದ್ದೇನು?

ಆದ್ದರಿಂದ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಯಾರೇ ಆಗಿರಲಿ, ಅದು ಅಲ್ಲಿ ಕೊಡುವ ಅರ್ಥವನ್ನಷ್ಟೇ ಗ್ರಹಿಸಿದರೆ ಸಾಕು. ಬದಲಿಗೆ, ಅದನ್ನು ಯಾವುದೋ ಘಟನೆಗೆ, ಇನ್ಯಾವುದೋ ಕಾಲಕ್ಕೆ ಎಳೆದುಕೊಂಡು ಹೋಗಿ ಅದಕ್ಕೊಂದು ವಿಶೇ‍ಷಾರ್ಥ ಕಲ್ಪಿಸಿ ಗಾಳಿಸುದ್ದಿ ಹರಿಯಬಿಡುವುದನ್ನು ನಿಲ್ಲಿಸಬೇಕು. ನಟ ಕಿಚ್ಚ ಸುದೀಪ್ ಮಾತನಾಡಿರುವ ಬಹಳಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಅವು ಸಮಾಜಕ್ಕೆ ಒಳ್ಳೆಯ ಪಾಠ ಹೇಳುತ್ತಿರುತ್ತವೆ. 

Latest Videos
Follow Us:
Download App:
  • android
  • ios