Asianet Suvarna News Asianet Suvarna News

ಹಸಿದ ಕೋತಿಗೆ ಹಣ್ಣು ನೀಡಿ 'ಲಕ್ಷ್ಮೀ ಬಾರಮ್ಮಾ' ಚಂದು ಮಾನವೀಯತೆ!

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಆಹಾರವಿಲ್ಲದೇ ಅಲೆದಾಡುತ್ತಿರುವ ಕೋತಿ, ನಾಯಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ನಟ ಚಂದನ್.

Kannada actor Chandan kumar feeds monkeys and Stary dogs in Nandi hills
Author
Bangalore, First Published Apr 7, 2020, 1:56 PM IST

ಚೀನಾದಿಂದ ಬಂದ ಮಹಾಮಾರಿ ಕೊರೋನಾ ವೈರಸ್‌ ಇಡೀ ಭಾರತವನ್ನು ಆಕ್ರಮಿಸುತ್ತಿದೆ. ಕೋವಿಡ್‌-19 ಎಂಬ ಮಾರಾಣಾಂತಿಕ ವೈರಸ್‌ನಿಂದ ಪಾರಾಗಲು ಭಾರತ  21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದೆ.  ಇದರ ಪರಿಣಾಮ ಅನೇಕ ವೃತ್ತಿ ಕ್ಷೇತ್ರಗಳ ಕಾರ್ಮಿಕರಿಗೆ ವರ್ಕ್‌ ಫ್ರಂ ಹೋಂ ಹಾಗೂ ಕೆಲವರಿಗೆ ಅನಿವಾರ್ಯವಾಗಿ ರಜೆ ಘೋಷಿಸಲಾಗಿದೆ. ಇದರಿಂದ ಆಯಾ ದಿನ ದುಡಿದು, ಹೊಟ್ಟೆ ತುಂಬಿಸಿಕೊಳ್ಳುವ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ. ಜನರ ಹಸಿವನ್ನು ನೀಗಿಸಲು ಅನೇಕ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ದನ ಸಹಾಯ ಮಾಡುತ್ತಿದ್ದಾರೆ.  ಸಾರ್ವಜನಿಕರು ತಮ್ಮ ಕೈಲಾದಷ್ಟು ಸಹಾಯವನ್ನು ಪ್ರಾಣಿ, ಪಕ್ಷಿಗಳಿಗೂ ಮಾಡುತ್ತಿದ್ದಾರೆ.

ಲಾಕ್‌ಡೌನ್‌ನಲ್ಲಿಯೂ ಮಾನವೀಯತೆ ಮೆರೆದ ನಟಿ; ಬೀದಿ ಶ್ವಾನಗಳಿಗೆ ಊಟ ವ್ಯವಸ್ಥೆ!

ಈಗಾಗಲೇ ಬೀದಿ ನಾಯಿಗಳಿಗೆ 21 ದಿನಗಳ ಕಾಲ ಆಹಾರ ನೀಡಲು ನಟಿ ಸಂಯುಕ್ತಾ ಹೊರನಾಡು ತಂಡವೊಂದನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ನಟ ಚಂದನ್‌ ಕುಮಾರ್ ಕೋತಿಗಳಿಗೆ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಮನವೀಯತೆ ಮೆರೆಯುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರವಾದ ಪ್ರವಾಸಿ ತಾಣವೆಂದೆರ ನಂದಿ ಬೆಟ್ಟ, ಅಲ್ಲಿ ಜನರಿಂದಾನೇ ಕೋತಿಗಳಿಗೆ ಆಹಾರ ಸಿಗುವುದು. ಇಲ್ಲವಾದರೆ  ಅವುಗಳ ಪಾಡು ಕೇಳುವವರೇ ಇರುವುದಿಲ್ಲ. ನಟ ಚಂದನ್ ಕೋತಿಗಳಿಗೆ ಬಾಳೆ ಹಣ್ಣು ಹಾಗೂ ಅಲ್ಲಿನ ನಾಯಿಗಳಿಗೆ ಬಿಸ್ಕೆಟ್‌ ಹಿಡಿದು ಹೊರಟಿದ್ದಾರೆ. 

 

ಇದನ್ನು ಒಂದು ದಿನ ಮಾಡಿ ಹಾಗೇ ಬಿಟ್ಟಿಲ್ಲ, ಚಂದನ್‌ ಪ್ರತಿ ದಿನವೂ ಹೋಗಿ ಪ್ರಾಣಿಗಳಿಗೆ ಆಹಾರ ನೀಡಿ ಬರುತ್ತಾರೆ. ಇದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್ಡೇಟ್‌  ಮಾಡುತ್ತಲೇ ಇದ್ದಾರೆ. ಸದ್ಯಕ್ಕೆ ಧಾರಾವಾಹಿಗಳ ಚಿತ್ರೀಕರಣಕ್ಕೆ  ಬ್ರೇಕ್‌ ಬಿದ್ದಿದ್ದು, ಚಂದನ್‌ ಪ್ರಾಣಿಗಳಿಗೆ ಆಹಾರ ನೀಡುತ್ತಾ, ಜಿಮ್‌ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಕೈಲದಾಷ್ಟು ಸಹಾಯವನ್ನು ಅಗತ್ಯವಿರುವವರಿಗೆ, ಪಶು ಪಕ್ಷಿಗಳಿಗೆ ಮಾಡಿದರೆ ಮಾನವ ಪ್ರಕೃತಿಯೊಂದಿಗೆ ಬೆರೆಯಲು ಕಲಿತಂತೆ ಆಗುತ್ತದೆ. ಅಲ್ಲದೇ ಇಂಥದ್ದೊಂದು ಕೆಟ್ಟ ಸಂದರ್ಭ ಮತ್ತೊಮ್ಮೆ ಬರದಂತೆ ಮಾಡಲು ನಿಸರ್ಗದೊಂದಿಗಿನ ಸಹ ಜೀವನ, ಸಬ ಬಾಳ್ವೆ ಈಗಿನ ಅಗತ್ಯವೂ ಹೌದು. 

 

 
 
 
 
 
 
 
 
 
 
 
 
 

Day 2..! Pls join the cause guys.. it's so simple.. just help...😊😊 . . #feed #hungry #animals #birds

A post shared by CHANDAN KUMAR 🇮🇳 (@chandan_kumar_official) on Apr 3, 2020 at 8:55pm PDT

Follow Us:
Download App:
  • android
  • ios