ಲಾಕ್‌ಡೌನ್‌ನಲ್ಲಿಯೂ ಮಾನವೀಯತೆ ಮೆರೆದ ನಟಿ; ಬೀದಿ ಶ್ವಾನಗಳಿಗೆ ಊಟ ವ್ಯವಸ್ಥೆ!
ಮಹಾಮಾರಿ ಕೊರೋನಾ ವೈರಸ್ ಕಾಟ ಹೆಚ್ಚಾಗುತ್ತಿದ್ದಂತೆ ಇಡೀ ಭಾರತವೇ ಲಾಕ್‌ಡೌನ್ ಮಾಡಿಕೊಂಡು ಗೃಹಬಂಧನದಲ್ಲಿದೆ . ಊಟ, ನೀರು ಇಲ್ಲದೆ ಬೀದಿ ನಾಯಿಗಳು ಅಲೆದಾಡುತ್ತಿವೆ . ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಸಂಯುಕ್ತಾ ಹೊರನಾಡ್ ತನ್ನದೇ ಒಂದು ತಂಡ ಕಟ್ಟಿಕೊಂಡು ಬೀದಿ ನಾಯಿಗಳಿಗೆ ಆಹಾರ ವ್ಯವಸ್ಥೆ ಮಾಡಿದ್ದಾರೆ......
ಕನ್ನಡ ಚಿತ್ರರಂಗದ ಹೆಸರಾಂತ ನಟಿ ಸುಧಾ ಬೆಳವಾಡಿ ಪುತ್ರಿ ಸಂಯುಕ್ತಾ ಹೊರನಾಡ್
ಲಾಕ್‌ಡೌನ್‌ನಿಂದ ಆಹಾರವಿಲ್ಲದೆ ಅಲ್ಲೆದಾಡುತ್ತಿರುವ ನಾಯಿಗಳಿಗೆ ಊಟದ ವ್ಯವಸ್ಥೆ ಮಾಡಿದ ಸಂಯುಕ್ತ
ಸುಮಾರು 60 ಜನರ ತಂಡ ಕಟ್ಟಿಕೊಂಡು ಬೀದಿ ನಾಯಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಪ್ರತಿ ನಿತ್ಯ ಸುಮಾರು 1800 ಶ್ವಾನಗಳಿಗೆ ಆಹಾರ ಒದಗಿಸುತ್ತಿರುವ ತಂಡವಿದು.
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಪ್ರತಿಯೊಂದು ಏರಿಯಾದಲ್ಲಿ ನಾಯಿಗಳಿಗೆ ಆಹಾರ ವ್ಯವಸ್ಥೆ ಮಾಡಿದ್ದಾರೆ.
ಸಂಯುಕ್ತ ತಂಡದವರು ಮಾಡುತ್ತಿರುವ ಕೆಲಸಕ್ಕೆ ಸಂಸದ ತೇಜಸ್ವಿ ಸೂರ್ಯ ಸಾಥ್
ನಾಯಿಗಳಿಗೆ ಆಹಾರ ಒದಗಿಸಲು ಫಂಡ್ ಕಲೆಕ್ಷನ್ ಮಾಡಿದ್ದಾರೆ.
ಈ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸಂಯುಕ್ತ ತಂಡದವರು ಮಾಡುವ ಕೆಲಸಕ್ಕೆ ಸಾಥ್ ನೀಡುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ .
ಸಂಯುಕ್ತ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ