ವಿಭಿನ್ನ ಹಾಸ್ಯ ಚಟಾಕಿ ಮೂಲಕ ಹಲವು ವರ್ಷಗಳ ಕಾಲ ಕನ್ನಡ ಸಿನಿ ಪ್ರೇಮಿಗಳ ಮುಖದಲ್ಲಿ ಮಂದಹಾಸ ತಂದ ಖ್ಯಾತ ಹಾಸ್ಯ ಕಲಾವಿದ ಬುಲೆಟ್‌ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು ಕಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆಲವು ದಿನಗಳಿಂದ ಗ್ಯಾಸ್ಟ್ರಿಕ್‌ ತೊಂದರೆ ಎದುರಾದ ಕಾರಣ ಬುಲೆಟ್‌ ಪ್ರಕಾಶ್ ಬೆಂಗಳೂರಿನ ಕನ್ನಿಂಗ್ ಹ್ಯಾಮ್‌‌ನ ಪೋರ್ಟೀಸ್‌ ಆಸ್ಪತ್ರೆಲ್ಲಿ ಡಾ. ತೇಜಸ್ವಿ ಅವರಿಂದ  2-3 ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.  'ಅಪ್ಪನಿಗೆ ಏನೂ ಅಗಿಲ್ಲ. ಚನ್ನಾಗಿದ್ದಾರೆ ಗ್ಯಾಸ್ಟ್ರಿಕ್ ಆಗಿದೆ' ಎಂದು ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಸುವರ್ಣ್‌ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಕೊನೆಯುಸಿರಿರುವರೆಗೂ ಬಣ್ಣ ಹಚ್ಚೋದು ನಿಲ್ಲಿಸೋಲ್ಲ: ಬುಲೆಟ್

ಕೆಲವು ವರ್ಷಗಳ ಹಿಂದೆ ಬುಲೆಟ್‌ ಪ್ರಕಾಶ್‌ ದೇಹದ ತೂಕ ಇಳಿಸಿಕೊಳ್ಳಲು ಯತ್ನಿಸಿ ಆರೋಗ್ಯದಲ್ಲಿ ಕೊಂಚ ಹೆಚ್ಚು ಕಡಿಮೆಯಾಗಿತ್ತು. ಆಗ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದರೆ 'ಸಾಯೋ ತನಕ ಮುಖಕ್ಕೆ ಬಣ್ಣ ಹಚ್ಚಿವುದನ್ನು ನಿಲ್ಲಿಸುವುದಿಲ್ಲ. ಕಲಾ ಸರಸ್ವತಿ ನನ್ನನ್ನು ಒಡಲಲ್ಲಿ ಹಾಕಿಕೊಂಡಿದ್ದಾಳೆ. ಎಲ್ಲರ ಜೀವನದಲ್ಲಿಯೂ ಹಿಂದೆ ಮುಂದೆ ಆಗುತ್ತದೆ. ಬಟ್‌ ನನಗಾಗಿರುವ ಸಮಸ್ಯೆ ಯಾರನ್ನೂ ಕಾಡುವುದು ಬೇಡ,'  ಎಂದು ಈ ಹಿಂದೆ ಮಜಾಭಾರತ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದರು ಬುಲೆಟ್.