ಅಯ್ಯೋ!! ಬುಲೆಟ್ ಪ್ರಕಾಶ ಮಾಡಿರೋ ಫಿಲ್ಮ್, ಮಿಸ್ ಮಾಡದೇ ನೋಡ್ಬೇಕು.... ಅವರ ಹಾಸ್ಯಕ್ಕೆ ಕನ್ನಡಿಗರು ಫುಲ್ ಫಿದಾ ಆಗೋಗಿದ್ದರು. ಆದರೆ, ಇತ್ತೀಚೆಗೆ ಅವರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇಲ್ಲ. ದೇಹದ ತೂಕ ಕಾರಣವೇ? ಅಥವಾ ಅನಾರೋಗ್ಯವೇ? 

ಚಿತ್ರರಂಗದಿಂದ ದೂರ ಸರಿದಿರುವ ಬುಲೆಟ್ ಪ್ರಕಾಶರ ಮೊಗದಲ್ಲಿ ನಗಿಸುವ ಕಳೆ ಇದೆ. ನೋಡಿದರೆ ಸಾಕ, ಏನೋ ನಮ್ಮ ಮೊಗದಲ್ಲಿಯೂ ನಗೆ ಹೊರ ಸೂಸುತ್ತದೆ. ಅಪ್ಪಟ ಹಾಸ್ಯ ಕಲಾವಿದ. ಕನ್ನಡಿಗರನ್ನು ನಗಿಸುವುದಕ್ಕಾಗಿಯೇ ಜೀವನವನ್ನು ಮುಡುಪಾಗಿಟ್ಟವರು. ತೂಕ ಇಳಿಸಿಕೊಳ್ಳಲು ಯತ್ನಿಸಿದ್ದರು. ಇದೀಗ ಅನಾರೋಗ್ಯಕ್ಕೀಡಾಗಿದ್ದಾರೆ. ವಿಪರೀತ ಬಳಲಿದ್ದಾರೆ. ಅದಕ್ಕೆ ಹೆಚ್ಚು ಚಿತ್ರಗಳಲ್ಲಿ ನಟಿಸಲೂ ಆಗುತ್ತಿಲ್ಲ. ಆದರೂ, 'ಸಾಯೋ ತನಕ ಮುಖಕ್ಕೆ ಬಣ್ಣ ಹಚ್ಚುವುದನ್ನು ನಿಲ್ಲಿಸುವುದಿಲ್ಲ...' ಎನ್ನುವ ಮೂಲಕ ಬುಲೆಟ್ ಮತ್ತೊಮ್ಮೆ ಸಾವಿನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅನಾರೋಗ್ಯದಿಂದ ಬಳಲಿ ಬೆಂಡಾಗಿರುವ ಈ ಅದ್ಭುತ ಹಾಸ್ಯ ಕಲಾವಿದ, "ಇಂಥ ಪರಿಸ್ಥಿತಿ ಯಾರಿಗೂ ಬರುವುದೂ ಬೇಡ...' ಎಂದಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಭಾರತದಲ್ಲಿ ಪಾಲ್ಗೊಂಡು ಬುಲೆಟ್ ತಮ್ಮ ಸುಖ ದುಃಖಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. 

‘ಕಲಾ ಸರಸ್ವತಿ ನನ್ನನ್ನು ಒಡಲಲ್ಲಿ ಹಾಕಿಕೊಂಡಿದ್ದಾಳೆ. ಎಲ್ಲರ ಜೀವನದಲ್ಲಿಯೂ ಹಿಂದೆ ಮುಂದೆ ಆಗುತ್ತದೆ. ಬಟ್ ನನಗಾಗಿರುವ ಸಮಸ್ಯೆ ಯಾರನ್ನೂ ಕಾಡುವುದು ಬೇಡ,’ಎಂದಹೇಳಿ ಕಣ್ಣೇರಿಟ್ಟಿದ್ದಾರೆ.

ಜೂ. ದರ್ಶನ್ ನೋಡಿ ಡಿಂಪಲ್ ಬೆಡಗಿ ಶಾಕ್!

ಇನ್ನು ಬುಲೆಟ್ ಹಾಗೂ ಜಾಲೆಂಜಿಂಗ್ ಸ್ಟಾರ್ ದರ್ಶನ್ ಒಡನಾಟ ಎಲ್ಲರಿಗೂ ಗೊತ್ತು. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಬುಲೆಟ್‌ಗೆ ಸಾಥ್ ನೀಡಿರುವವರು ದರ್ಶನ್. ಆದುದರಿಂದ ಮಜಾ ಭಾರತದಲ್ಲಿ ಜೂ. ದರ್ಶನ್ ಅವಿನಾಶ್‌ರನ್ನ ಕರೆಸಿ ಬುಲೆಟ್‌ಗೆ ಸರ್ಪ್ರೈಸ್ ನೀಡಿದ್ದಾರೆ.

ಅವಿನಾಶ್ ಹಾಗೂ ಇನ್ನಿತರ ಕಲಾವಿದರನ್ನು ಕಂಡು ‘ಕಲೆ ಅನ್ನುವುದು ಯಾರಪ್ಪನ ಸ್ವತ್ತೂ ಅಲ್ಲ, ಕಲೆ ಇರುವುದು ಸತ್ಯ. ಅದು ಎಷ್ಟು ಸತ್ಯವೋ ಕಲಾವಿದ ಇರುವುದೂ ಅಷ್ಟೇ ಸತ್ಯ. ಕಲೆಗೆ ಎಂದೂ ಸಾವಿಲ್ಲ...’ ಎಂದು ಪ್ರಕಾಶ್ ಕಾರ್ಯಕ್ರಮದಲ್ಲಿ ಹೇಳಿದ್ದರು.