56ರ ವಸಂತಕ್ಕೆ ಕಾಲಿಟ್ಟ ಆ್ಯಕ್ಷನ್ ಪ್ರಿನ್ಸ್‌, ಸ್ವೀಟೆಸ್ಟ್‌ ಬಾಯ್‌ ಚಿರಂಜೀವಿ ಸರ್ಜಾ ಬಗ್ಗೆ ಬರೆದ ಭಾವುಕ ಸಾಲುಗಳು ವೈರಲ್....

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಕಿಂಗ್ ಅರ್ಜುನ್‌ ಸರ್ಜಾ ಅಭಿಮಾನಿಗಳಿಗೆ ಆಗಸ್ಟ್ 15ರಂದು ಡಬಲ್ ಧಮಾಕ. ಒಂದು ಸ್ವಾತಂತ್ರ್ಯ ದಿನಾಚರಣೆಯಾದರೆ, ಮತ್ತೊಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ. ಆದರೆ ಅಳಿಯಾ ಚಿರಂಜೀವಿ ಇಲ್ಲದ ಕಾರಣ ಅತ್ಯಂತ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

'ಮನೆ ಮಗನಿಗೆ ಮನವಿ': ಅಳಿಯ ಚಿರು ಸರ್ಜಾಗೆ ಮಾವನ ಭಾವುಕ ಪತ್ರ..! 

ಸಾಮಾನ್ಯವಾಗಿ ಬರ್ತಡೇ ಸೆಲೆಬ್ರೇಷನ್ ಹೇಗಿತ್ತು, ಭಾಗಿಯಾದವರೊಟ್ಟಿಗೆ ಫೋಟೋ ಶೇರ್ ಮಾಡಿಕೊಳ್ಳುವುದು ವೆರಿ ಕಾಮನ್. ಆದರೆ ಅರ್ಜುನ್‌ ಸರ್ಜಾ ಮಾತ್ರ ತಮ್ಮ ಮುದ್ದಿನ ಅಳಿಯ ಚರಂಜೀವಿ ಪೋಟೋ ಶೇರ್ ಮಾಡಿಕೊಂಡಿದ್ದಾರೆ. 'ನನ್ನ ಬರ್ತಡೇ ದಿನ ನಮ್ಮ ಸ್ವೀಟೆಸ್ಟ್‌ ಬಾಯ್‌ ಚಿರಂಜೀವಿ ಸರ್ಜಾ ವಿಶ್‌ ಮಿಸ್‌ ಮಾಡಿಕೊಳ್ಳುತ್ತಿರುವೆ. ಮಿಸ್‌ ಯು ಚಿರು ಮಗನೇ' ಎಂದು ಬರೆದು ಚಿರುಗೆ ಮೇಕಪ್‌ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

View post on Instagram

ಜೂನ್‌ 7ರಂದು ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ ಅಗಲಿಕೆ ಚಿತ್ರರಂಗವನ್ನು ದಿಗ್ಬ್ರಮೆಗೊಳಿಸಿತ್ತು. 7 ತಿಂಗಳ ಗರ್ಭಿಯಾಗಿರುವ ಮೇಘನಾ ರಾಜ್‌ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಹಾಗೂ ಆರೋಗ್ಯವಾಗಿದ್ದಾರೆ ಎಂದು ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಫ್ರೆಂಚ್‌ ಬಿರಿಯಾನಿ ಸಿನಿಮಾ ಬಗ್ಗೆ ಮಾತನಾಡಿದ ಚಿರು ಕ್ಲೋಸ್‌ ಫ್ರೆಂಡ್‌ ಪನ್ನಗ ಭರಣ ಹೇಳಿದ್ದಾರೆ.

'ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌ ಸರ್ಜಾ!