ಅನೀಶ್‌ ತೇಜೇಶ್ವರ್‌ ಹುಟ್ಟುಹಬ್ಬದ ಅಂಗವಾಗಿ ಅವರು ನಟಿಸಿರುವ ಹೊಸ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ. ಚಿತ್ರದ ಹೆಸರು ‘ಬೆಂಕಿ’. ಇದೊಂದು ಮಾಸ್‌ ಹಾಗೂ ಕಮರ್ಷಿಯಲ್‌ ಸಿನಿಮಾ ಎಂಬುದನ್ನು ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಸಾರುತ್ತಿದೆ.

ಅನೀಶ್‌ ತೇಜೇಶ್ವರ್‌ (Anish Tejeshwar) ಹುಟ್ಟುಹಬ್ಬದ (Birthday) ಅಂಗವಾಗಿ ಅವರು ನಟಿಸಿರುವ ಹೊಸ ಚಿತ್ರದ ಪೋಸ್ಟರ್‌ (Poster) ಬಿಡುಗಡೆ ಆಗಿದೆ. ಚಿತ್ರದ ಹೆಸರು ‘ಬೆಂಕಿ’ (Benki). ಇದೊಂದು ಮಾಸ್‌ ಹಾಗೂ ಕಮರ್ಷಿಯಲ್‌ ಸಿನಿಮಾ ಎಂಬುದನ್ನು ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಸಾರುತ್ತಿದೆ. ‘ರಾಮಾರ್ಜುನ’ (Ramarjuna) ಚಿತ್ರದ ನಂತರ ಸೆಟ್ಟೇರುತ್ತಿರುವ ಅನೀಶ್‌ ಅವರ 10ನೇ ಸಿನಿಮಾ ಇದು. ‘ಮೊದಲಿನಿಂದಲೂ ವಿಭಿನ್ನ ಕತೆಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೆ. 

ಈ ಬಾರಿಯೂ ಗಡ್ಡ, ಮೀಸೆ ಬಿಟ್ಟು ನನ್ನ ಪಾತ್ರದ ಔಟ್‌ ಲುಕ್‌ ತುಂಬಾ ವಿಶೇಷವಾಗಿರುತ್ತದೆ. ಎಂದಿನಂತೆ ಮತ್ತೊಂದು ಭರವಸೆಯೊಂದಿಗೆ ಈ ಸಿನಿಮಾ ಆರಂಭಿಸಿದ್ದೇನೆ’ ಎನ್ನುತ್ತಾರೆ ನಟ ಅನೀಶ್‌. ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ (Winkwhistle Production) ಮೂಲಕ ಅನೀಶ್‌ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಅಣ್ಣ ತಂಗಿ ಸೆಂಟಿಮೆಂಟ್‌ ಕತೆ ಹೊಂದಿರುವ ಸಿನಿಮಾ ಇದು. ಹಿರಿಯ ನಿರ್ದೇಶಕ ಎ.ಆರ್‌. ಬಾಬು (A.R.Babu) ಪುತ್ರ ಶಾನ್‌ (Shaan) ‘ಬೆಂಕಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ.

English Manja Teaser: ಪ್ರಮೋದ್ ಚಿತ್ರದ ಟೀಸರ್ ರಿಲೀಸ್ ಮಾಡಿದ ದುನಿಯಾ ಸೂರಿ!

ಈಗಾಗಲೇ ಚಿತ್ರಕ್ಕೆ ಶೇ.80ರಷ್ಟುಶೂಟಿಂಗ್‌ ಮಾಡಲಾಗಿದ್ದು, ಹಾಡಿನ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಅನೀಶ್‌ಗೆ ನಾಯಕಿಯಾಗಿ ‘ರೈಡರ್‌’ ಸಿನಿಮಾ ಖ್ಯಾತಿಯ ಸಂಪದ ಹುಲಿವಾನ (Sampada Hulivana) ನಟಿಸಿದ್ದಾರೆ. ಶ್ರುತಿ ಪಾಟೀಲ್‌, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ. ಈ ಸಿನಿಮಾವನ್ನು ಕೊಳ್ಳೆಗಾಲ, ಹೊಸೂರು, ಬಾಗೇಪಲ್ಲಿ, ಚನ್ನರಾಯಪಟ್ಟಣ ಮುಂತಾದ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 

ಬೆಂಕಿ ಸಿನಿಮಾ ಕೇವಲ ಅಣ್ಣ-ತಂಗಿ ಸೆಂಟಿಮೆಂಟ್ ಮಾತ್ರವಲ್ಲ ಕಾಮಿಡಿ- ಹಾರರ್ ಸಿನಿಮಾ ಕೂಡಾ ಎಂದು ಹೇಳುವ ಮೂಲಕ ಅನೀಶ್ ಕುತೂಹಲ ಹುಟ್ಟುಹಾಕಿದ್ದಾರೆ. ನಟಿ ಸಂಪದ ಹುಲಿವನ ಅವರು ಪ್ರೇತವಾಗಿ ನಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೂ ನಾನು ಮೊದಲಿನಿಂದಲೂ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದೇನೆ. ಹಳ್ಳಿ ಜಾನರ್‌ನ ಕಥೆಯಲ್ಲಿ ಮಾಡಬೇಕು ಎನಿಸುತ್ತಿತ್ತು. ಈ ಸಿನಿಮಾದಲ್ಲಿ ವಿಭಿನ್ನ ಸಬ್ಜೆಕ್ಟ್ ಮೂಲಕ ಹಳ್ಳಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಅನೀಶ್ ತಿಳಿಸಿದ್ದಾರೆ.

ಅನೀಶ್‌​ 2010 ರಲ್ಲಿ 'ಪೊಲೀಸ್​ ಕ್ವಾಟರ್ಸ್'​ ಸಿನಿಮಾ ಮೂಲಕ ಎಂಟ್ರಿಕೊಟ್ಟು, 'ನಮ್​ ಏರಿಯಾಲ್ ಒಂದು ದಿನ', 'ಕಾಫಿ ವಿಥ್ ಮೈ ವೈಫ್', 'ನನ್ ಲೈಫ್​ಲ್ಲಿ', 'ಎಂದೆಂದೂ ನಿನಗಾಗಿ', 'ನೀನೆ ಬರಿ ನೀನೆ', 'ಅಕಿರ', 'ವಾಸು ನಾನ್​ ಪಕ್ಕಾ ಕಮರ್ಷಿಯಲ್', 'ರಾಮಾರ್ಜುನ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೀಶ್‌ ಕೇವಲ ನಟನಾಗಿರದೆ ನಿರ್ದೇಶಕ, ನಿರ್ಮಾಪಕ, ಮತ್ತು ಸ್ಕ್ರಿಪ್ಟ್​ ರೈಟರ್​ ಆಗಿ ಕೆಲಸ ಮಾಡಿದ್ದಾರೆ. ಸದ್ಯ 'ಮಾಂಜಾ', ಮತ್ತು 'ಎನ್​ ಆರ್​ ಐ' ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. 

KGF Yash: ಪರಿಸ್ಥಿತಿ ಊಹಿಸಿಯೇ ಕೆಜಿಎಫ್‌ 2 ಬಿಡುಗಡೆ ದಿನಾಂಕ ನಿಗದಿ

ಇನ್ನು ಅನೀಶ್ 'ರಾಮಾರ್ಜುನ' ಚಿತ್ರದಲ್ಲಿ ಕಡೆಯದಾಗಿ ನಟಿಸಿದ್ದರು. ಈ ಚಿತ್ರಕ್ಕೆ ಮೊದಲ ಬಾರಿಗೆ ಅವರೇ ಆಕ್ಷನ್ ಕಟ್ ಹೇಳಿದ್ದರು. ಅನೀಶ್‌ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಸ್ಕ್ರೀನ್ ಶೇರ್ ಮಾಡಿದ್ದರು. ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಹರೀಶ್ ರಾಜ್, ಅರುಣಾ ಬಾಲರಾಜ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದರು. ವಿಂಕ್ ವಿಷಲ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ನವೀನ್ ಕುಮಾರ್ ಛಾಯಾಗ್ರಹಣ, ಆನಂದ್ ರಾಜವಿಕ್ರಮ್ ಸಂಗೀತ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿತ್ತು. 

View post on Instagram